ಸಂಭ್ರಮದ ಸ್ವಾತಂತ್ರ್ಯೋತ್ಸವ: ಜಿಲ್ಲೆಯಾದ್ಯಂತ SKSSFನಿಂದ ಫ್ರೀಡಂ ಸ್ಕ್ವೇರ್

ಸಂಭ್ರಮದ ಸ್ವಾತಂತ್ರ್ಯೋತ್ಸವ: ಜಿಲ್ಲೆಯಾದ್ಯಂತ SKSSFನಿಂದ ಫ್ರೀಡಂ ಸ್ಕ್ವೇರ್

ಮಂಗಳೂರು: ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ ಎಂಬ ಪ್ರಮೇಯದೊಂದಿಗೆ ಎಸ್ಕೆಎಸ್ಎಸ್ಎಫ್ ಪ್ರತೀ ವರ್ಷ ಆಚರಿಸಿಕೊಂಡು ಬರುವ ಫ್ರೀಡಂ ಸ್ಕ್ವೇರ್ ಬಾರಿಯೂ ಜಿಲ್ಲೆಯ ಎಲ್ಲಾ ವಲಯ ಕೇಂದ್ರಗಳಲ್ಲಿ ಸರಳವಾಗಿ ನಡೆಯಿತು.

      ಕೋವಿಡ್-19 ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಗೌಜಿ ಗದ್ದಲವಿಲ್ಲದೆ ಜಿಲ್ಲೆಯ ಎಲ್ಲಾ ವಲಯ ಕೇಂದ್ರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಸುವ ಫ್ರೀಡಂ ಸ್ಕ್ವೇರ್ ಕಾರ್ಯಕ್ರಮ ಅತ್ಯಂತ ಸರಳ ರೀತಿಯಲ್ಲಿ ನಡೆಸಲಾಯಿತು. ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬೆಳಿಗ್ಗೆ 9.30ಕ್ಕೆ ಸರಿಯಾಗಿ ಎಲ್ಲಾ ವಲಯ ಕೇಂದ್ರಗಳಲ್ಲಿ ರಾಷ್ಟ್ರ ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋಹಣದ ನಂತರ ಎಸ್ಕೆಎಸ್ಎಸ್ಎಫ್ ಶಾಖೆಗಳೂ ಸೇರಿದಂತೆ 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಲಾಯಿತು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ಯಮಾನಿ ತಿಳಿಸಿದರು.

      ಇದೇ ಸಂದರ್ಭದಲ್ಲಿ ಆಗಸ್ಟ್‌ 13 ರಂದು ಶಾಖಾ ಮಟ್ಟದಲ್ಲಿ ಓನ್ಲೈನ್ಮುಖಾಂತರ ನಡೆಸಲಾದ ಸ್ವಾತಂತ್ರ್ಯೋತ್ಸವದ ಕುರಿತಾದ ಕ್ವಿಝ್ಕಾರ್ಯಕ್ರಮದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ