ವಾಲಿಬಾಲ್ ಪಂದ್ಯಾಟ: ಸೇರಾ ತಂಡ ಪ್ರಥಮ, ನೇತಾಜಿ ದ್ವಿತೀಯ

ವಾಲಿಬಾಲ್ ಪಂದ್ಯಾಟ: ಸೇರಾ ತಂಡ ಪ್ರಥಮ, ನೇತಾಜಿ ದ್ವಿತೀಯ

ವಿಟ್ಲ: ನೆಟ್ಲಮುಡ್ನೂರು ಗ್ರಾಮದ ಉರ್ದಿಲ, ನವಯುಗ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇದರ ವತಿಯಿಂದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವು ಭಾನವಾರ ಉರ್ದಿಲದ ಪಟೇಲ್ ಕೆ.ಇಂದುಹಾಸ ರೈ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟವನ್ನು ಉರ್ದಿಲಗುತ್ತು ಅಹಲ್ಯಾ ಸುನಿಲ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಲಯನ್ ಡಾ. ಎ.ಮನೋಹರ ರೈ ಅಂತರಗುತ್ತು ಅದ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಸುರೇಶ್ ರೈ ಕುರ್ಲೆತ್ತಿಮಾರು, ನೆಟ್ಲಮುಡ್ನೂರು ಗ್ರಾಮ ಪಂಚಾಯತು ಸದಸ್ಯರುಗಳಾದ ಕೆ.ಶ್ರೀಧರ ರೈ ಕುರ್ಲೆತ್ತಿಮಾರು, ಲತೀಪ್ ನೇರಳಕಟ್ಟೆ, ಅಶೋಕ ರೈ ಎಲ್ಕಾಜೆ, ಧನುಂಜಯ ಮೀನಾವು, ಶಾಲಿನಿ ಹರೀಶ್, ಮಾಣಿ ಗ್ರಾಮ ಪಂಚಾಯತು ಅದ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಅನಂತಾಡಿ ಗ್ರಾಮ ಪಂಚಾಯತು ಅದ್ಯಕ್ಷ ಗಣೇಶ ಪೂಜಾರಿ ಬಂಟ್ರಿಂಜ,  ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,  ನೇರಳಕಟ್ಟೆ ಸಿ.ಎ.ಬೇಂಕ್ ಉಪಾದ್ಯಕ್ಷ ಡಿ.ತನಿಯಪ್ಪ ಗೌಡ ದಾಸಕೋಡಿ, ನಿರ್ದೇಶಕ ನಿರಂಜನ್ ರೈ ಕುರ್ಲೆತ್ತಿಮಾರು, ಮೆನೇಜರ್ ಸಂಜೀವ ಪೂಜಾರಿ, ಚಲನಚಿತ್ರ ನಟರಾದ ಚೇತನ್ ರೈ ಮಾಣಿ,   ನೇರಳಕಟ್ಟೆ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ಪಾತ್ರಿ ಜಗದೀಶ ಪೂಜಾರಿ,  ರವೀಂದ್ರ ರೈ ನಡುಉರ್ದಿಲ, ರಮೇಶ ಪೂಜಾರಿ ಮುಜಲ ಮೆಸ್ಕಾಂ,  ಈಶ್ವರ ಪೂಜಾರಿ ನಡುಉರ್ದಿಲ, ಯುವ ವಾಹಿನಿ ಮಾಣಿ ಘಟಕಾದ್ಯಕ್ಷ ಪಿ.ಎಲ್.ಪ್ರಶಾಂತ ಅನಂತಾಡಿ, ರೇಶ್ಮ ಟೀಚರ್ ಉರ್ದಿಲ, ಅನಂತಾಡಿ ಕ್ರಿಕೆಟ್ ಕ್ಲಬ್ ಅದ್ಯಕ್ಷ ಕಿಶೋರ್ ವಡ್ತೇಲು, ಗಂಗಾಧರ ಗೌಡ ನಡುಮನೆ, ಸತೀಶ ಪೂಜಾರಿ ಬಾಬನಕಟ್ಟೆ, ವಾಮನ ಕುಲಾಲ್ ಎಲ್ಕಾಜೆ, ನೇರಳಕಟ್ಟೆ ವೈ.ಸಿ.ಜಿ.ಅದ್ಯಕ್ಷ ವಿಶು ಕುಮಾರ್, ಬಿರುವೆರ್ ಬಾಕಿಲಗುತ್ತು ಅದ್ಯಕ್ಷ ಗಣೇಶ್ ಪೂಜಾರಿ, ಸುರೇಶ್ ಪೂಜಾರಿ ಬಾಕಿಲಗುತ್ತು, ಕುಂಞಣ್ಣ ರೈ ನಡುಉರ್ದಿಲ, ಡಾ. ಗಣರಾಜ್ ಎಲ್ಕಣ, ನಿವೃತ್ತ ಸೈನಿಕ ಅಲೆಕ್ಸ್ ಮೊರಾಸ್ ಅನಂತಾಡಿ, ಹರೀಶ ಪೂಜಾರಿ ಬಾಕಿಲ, ನೇರಳಕಟ್ಟೆ ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷ ವಿಠಲ ನಾಯ್ಕ್, ನಾಟಿ ವೈದ್ಯ ಸಚ್ಚೀಂದ್ರ ರೈ ನಡುಉರ್ದಿಲ, ರವಿ ಭಂಡಾರಿ ಅಂಗರಾಜೆ, ಸುರೇಶ ಪೂಜಾರಿ ಮುಜಲ, ಶರತ್ ಪೂಜಾರಿ ಮಿತ್ತಕೋಡಿ, ಗಂಗಾಧರ ಪೂಜಾರಿ ಮುಜಲ, ನಿತಿನ್ ಪೂಜಾರಿ ಉರ್ದಿಲ, ಕೃಷ್ಣಪ್ಫ ಪೂಜಾರಿ ಮುಜಲ, ಕಿರಣ್ ಗೋಳಿಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಉಪಾದ್ಯಕ್ಷ ಚೇತನ್ ನಾಯ್ಕ್ ಮುಜಲ, ಕಾರ್ಯದರ್ಶಿ ಪ್ರೀತಮ್ ಪೂಜಾರಿ, ಕೋಶಾಧಿಕಾರಿ ಹರೀಶ ಎಂ.ಎಸ್, ಮಂಜುನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸೇರ ತಂಡಕ್ಕೆ ಪ್ರಶಸ್ತಿ: ವಾಲಿಬಾಲ್ ಪಂದ್ಯಾಟದಲ್ಲಿ ಉದಯ ಯುವಕ ಮಂಡಲ ಸೇರಾ ತಂಡವು ಪ್ರಥಮ, ನೇತಾಜಿ ಗೆಳೆಯರ ಬಳಗ ನೇತಾಜಿನಗರ ದ್ವಿತೀಯ, ಅಯೋದ್ಯಾ ಪೆರ್ನೆ ತೃತೀಯ ಹಾಗೂ ನವಯುಗ ಉರ್ದಿಲ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಸೇರಾ ತಂಡದ ಸೃತೇಶ್, ರಕ್ಷಿತ್ ನೇತಾಜಿ ತಂಡದ ರೋಶನ್ ವೈಯುಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ನವಯುಗ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅದ್ಯಕ್ಷ ಸುಜಿತ್ ಪೂಜಾರಿ ಬಾಕಿಲ ಸ್ವಾಗತಿಸಿ, ವಂದಿಸಿದರು, ಸುರೇಶ ಸೇರ ಕಾರ್ಯಕ್ರಮ ನಿರೂಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ