ಬೆಳಗಾವಿಗಾವಿಗೂ ತಲುಪಿದ ಹಿಜಾಬ್‌ ವಿವಾದ: ಸರಕಾರಿ ಪ್ರಾಯೋಜಿತ ಎಂದ ಝಮೀರ್

ಬೆಳಗಾವಿಗಾವಿಗೂ ತಲುಪಿದ ಹಿಜಾಬ್‌ ವಿವಾದ: ಸರಕಾರಿ ಪ್ರಾಯೋಜಿತ ಎಂದ ಝಮೀರ್

ಬೆಂಗಳೂರು: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಆರಂಭವಾದ ಹಿಜಾಬ್‌ v/s ಕೇಸರಿ ಶಾಲು ವಿವಾದ ಈಗ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣಕ್ಕೂ ತಲುಪಿದೆ.

      ಈ ಬಗ್ಗೆ ಪ್ರತಿಕ್ರಿಯಯಿಸಿದ ಶಾಸಕ ಝಮೀರ್‌ ಅಹ್ಮದ್‌ ಖಾನ್‌ ಸರಕಾರವೇ ವಿವಾದಗಳನ್ನು ಸೃಷ್ಠಿಸುತ್ತಿದೆ ಎಂದು ಹೇಳಿದರು. ಸಾಂಪ್ರದಾಯಿಕವಾಗಿ ಧರಿಸಿಕೊಂಡು ಬರುತ್ತಿದ್ದ ಹಿಜಾಬ್‌ ಏಕಾಏಕಿ ನಿಷೇಧಿಸುವುದರ ಹಿಂದಿನ ಹುನ್ನಾರ ಏನೆಂದು ಅವರು ಪ್ರಶ್ನಿಸಿದರು. ಮುಸ್ಲಿಂ ಹುಡುಗಿಯರು ಪರಾಂಪರಾಗತವಾಗಿ ಹಿಜಾಬ್‌ ಧರಿಸುತ್ತಿದ್ದಾರೆ. ಅದಕ್ಕೆ ವಿರುದ್ಧವಾಗಿ ನಿನ್ನೆಯಿಂದ ಕೆಲವು ಹುಡುಗರು ಕೇಸರಿ ಶಾಲು ಧರಿಸಿಕೊಂಡು ಬಂದರೆ ಎರಡನ್ನೂ ನಿಷೇಧಿಸುವುದು ಸರಿಯಾ? ಮಂಗಳೂರಿನಲ್ಲಿ ಘಟನೆ ನಡೆದಾಗ ಸುಮ್ಮನಿದ್ದೆವು. ಸರಕಾರ ತೀರ್ಮಾನ ಕೈಗೊಳ್ಳಬಹುದು ಅಂದುಕೊಂಡಿದ್ದೆವು. ನಿನ್ನೆ ಕುಂದಾಪುರದಲ್ಲಿ ಕಾಲೇಜಿನ ಕಂಪೌಂಡ್‌ ಒಳಗಡೆ ವಿದ್ಯರ್ಥಿಗಳನ್ನು ಸೇರಿಸದೆ ಗೇಟ್‌ ಮುಚ್ಚಿರುವುದು ಸರಿಯಲ್ಲ ಎಂದು ಅವರು ಹೇಳಿದರು.

     ಹಿಜಾಬ್‌ ಪ್ರಕರಣ ಕುರಿತಂತೆ ಮಾತನಾಡಿದ ಯು.ಟಿ.ಖಾದರ್‌ ಹಿಜಾಬ್‌ ಪ್ರಕರಣವನ್ನು ಸರಕಾರ ದೊಡ್ಡದು ಮಾಡುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಅವರ ಧರ್ಮದ ಪ್ರಕಾರ ವಸ್ತ್ರಧಾರಣೆಗೆ ಅವಕಾಶ ನೀಡಬೇಕು. ಸರಕಾರ ಕೂಡಲೇ ಒಂದು ತೀರ್ಮಾನ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

      ಉಡುಪಿ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಜಿಜಾಬ್‌ ವಿವಾದ, ನಂತರ ಉತ್ತರ ಕನ್ನಡ ಅಲ್ಲಿಂದ ಬೆಳಗಾವಿ ಜಿಲ್ಲೆಗೂ ಹಬ್ಬಿದೆ. ಬೆಲಗಾವಿ ಜಿಲ್ಲೆಯ ರಾಮದುರ್ಗ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಪೋಲೀಸರು ತಡೆದು ಶಾಲು ತೆಗೆಸಿ ಬುದ್ದಿವಾದ ಮಾತು ಹೇಳಿದ್ದಾರೆ. 

      ವಿವಾದ ರಾಜ್ಯಾದ್ಯಂತ ಭುಗಿಲೇಳುವ ಹಂತಕ್ಕೆ ತಲುಪುತ್ತಿದ್ದು, ಸರಕಾರ ಕೂಡಲೇ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡದೆ ವಿವಾದಕ್ಕೊಂದು ಸೂಕ್ತ ಅಂತ್ಯ ಕಾಣಬೇಕಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ