ಎಸ್‌ಕೆಎಸ್‌ಎಸ್‌ಎಫ್‌: ನೂತನ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮೌಲಾನಾ ಮುಫ್ತಿ ರಫೀಕ್‌ ಅಹ್ಮದ್‌ ಕೋಲಾರಿ ಆಯ್ಕೆ

ಎಸ್‌ಕೆಎಸ್‌ಎಸ್‌ಎಫ್‌: ನೂತನ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮೌಲಾನಾ ಮುಫ್ತಿ ರಫೀಕ್‌ ಅಹ್ಮದ್‌ ಕೋಲಾರಿ ಆಯ್ಕೆ

ಮಂಗಳೂರು: ಎಸ್‌ಕೆಎಸ್‌ಎಸ್‌ಎಫ್‌‌ ನೂತನ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮೌಲಾನಾ ಮುಫ್ತಿ ರಫೀಕ್‌ ಅಹ್ಮದ್‌ ಹುದವಿ ಕೋಲಾರ ಹಾಗೂ ಕಾರ್ಯಾಧ್ಯಕ್ಷರಾಗಿ ಕಾಸಿಂ ದಾರಿಮಿ ಸವಣೂರು ಆಯ್ಕೆಯಾಗಿದ್ದಾರೆ.

      ಪ್ರಧಾನ ಕಾರ್ಯದರ್ಶಿಯಾಗಿ ಮೌಲಾನಾ ಅನೀಸ್‌ ಕೌಸರಿ, ಕೋಶಾಧಿಕಾರಿಯಾಗಿ ಸಯ್ಯಿದ್‌ ಅಮೀರ್‌ ತಂಙಳ್‌ ಹಾಗೂ ವರ್ಕಿಂಗ್‌ ಕಾರ್ಯದರ್ಶಿಯಾಗಿ ತಮ್ಲೀಕ್‌ ದಾರಿಮಿ ಕೊಡಗು ಇವರುಗಳು ಆಯ್ಕೆಯಾಗಿದ್ದಾರೆ.

      ಕೋಲಾರ ಜಿಲ್ಲೆಯವರಾದ ಮೌಲಾನಾ ಮುಫ್ತಿ ರಫೀಕ್‌ ಅಹ್ಮದ್‌ ಹುದವಿ ಕೋಲಾರೀ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ತೋಡಾರಿನಲ್ಲಿರುವ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಉರ್ದು ಭಾಷಿಕರಾದ ಹುದವಿ ಕನ್ನಡ, ಉರ್ದು, ಇಂಗ್ಲೀಷ್‌, ಹಿಂದಿ, ಮಲೆಯಾಳಂ, ಬ್ಯಾರಿ, ಪಾರ್ಷಿ ಮುಂತಾದ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲವರು. ಬಹು ಭಾಷಾ ಪಾಂಡಿತ್ಯವನ್ನು ಹೊಂದಿರುವ ಹುದವಿ MA ಉರ್ದು ಸಾಹಿತ್ಯ ಬಿರುದುದಾರಿಯೂ ಹೌದು. ಪ್ರಖ್ಯಾತ ಇಸ್ಲಾಮಿಕ್‌ ಯುನಿವರ್ಸಿಟಿಯಾದ ದಾರುಲ್‌ ಹುದಾದಲ್ಲಿ ಹುದವಿ, ಅರ್ಷದಿ, ನಿಝಾಮಿ ಬಿರುದುಗಳನ್ನೂ ಪಡೆದಿರುವರು. ಅಹ್ಲ್‌ ಸುನ್ನತ್‌ ವಲ್‌ ಜಮಾತಿನ ತೀವೃ ಪ್ರತಿಪಾದಕರಾಗಿದ್ದು, ಎಸ್‌ಕೆಎಸ್‌ಎಸ್‌ಎಫ್‌‌ ಕರ್ನಾಟಕ ರಾಜ್ಯ ಸಮಿತಿಯಲ್ಲಿ ಕೋಲಾರ ಜಿಲ್ಲೆಯಿಂದ ಪ್ರತಿನಿಧಿಸುತ್ತಿದ್ದಾರೆ.

      ಕಾರ್ಯಾಧ್ಯಕ್ಷರಾಗಿರುವ ಕಾಸಿಂ ದಾರಿಮಿ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್‌ ವಿಭಾಗದಿಂದ ಪ್ರತಿನಿಧಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಕೇಂದ್ರ ಸಮಿತಿಯ ಸಹ ಕಾರ್ಯದರ್ಶಿಯಾಗಿ, ಎಸ್‌ಕೆಎಸ್‌ಎಸ್‌ಎಫ್‌‌ ಉಪ ಸಮಿತಿಗಳಾದ ಇಸ್ತಿಖಾಮ, ಓರ್ಗನೆಟ್‌ ಮುಂತಾದ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಅಪಾರ ಅನುಭವ ಉಳ್ಳವರಾಗಿದ್ದಾರೆ. ಎಳೆಯ ಪ್ರಾಯದಿಂದಲೇ ಪಳ್ಳಿ ದರ್ಸ್‌ ನಡೆಸಿಕೊಂಡು ಬರುತ್ತಿರುವ ಕಾಸಿಂ ದಾರಿಮಿ ಕಳೆದ 25 ವರುಷಗಳ ಅವಧಿಯಲ್ಲಿ ಅನೇಕ ಧಾರ್ಮಿಕ ಪಂಡಿತರುಗಳನ್ನು ಈ ಸಮೂಹಕ್ಕೆ ಸಮರ್ಪಿಸಿದವರಾಗಿದ್ದಾರೆ. ಸಮಸ್ತ ನಂದಿ ದಾರುಸ್ಸಲಾಂನಿಂದ ದಾರಿಮಿ ಬಿರುದು ಪಡೆದ ಇವರು ಸಂಘಟನೆಯ ಚಾಲನಾ ಶಕ್ತಿ ಎಂದು ನಿರೀಕ್ಷಿಸಲಾಗಿದೆ.

      ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮೌಲಾನಾ ಅನೀಸ್‌ ಕೌಸರಿ ಕಳೆದ ಸಾಲಿನಲ್ಲಿ ರಾಜ್ಯಾಧ್ಯಕ್ಷರಾಗಿ ಕೆಲಸ ನಿರ್ವಹಿಸಿ ಅನುಭವ ಪಡೆದವರು. ಉತ್ತಮ ಬರಹಗಾರರೂ, ಮಾತುಗಾರರೂ ಆಗಿರುವ ಅನೀಸ್‌ ಕೌಸರಿ ಯುವ ಸಮೂಹದಲ್ಲಿ ಮಿಂಚನ್ನು ಹರಿಸಬಲ್ಲ ಪ್ರಭಾಷಕರು. ಕೌಸರಿ ಬಿರುದುದಾರಿಯಾದ ಇವರು ಪ್ರಸ್ತುತ ಕರ್ನಾಟಕ ಇಸ್ಲಾಮಿಕ್‌ ಸೆಂಟರ್‌ (KIC) ಕುಂಬ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಕಿಣ ಕನ್ನಡ ಜಿಲ್ಲೆಯ ಈಸ್ಟ್‌ ವಿಭಾಗದಿಂದ ಇವರು ಪ್ರತಿನಿಧಿಸುತ್ತಿದ್ದಾರೆ.

      ಕೋಶಾಧಿಕಾರಿಯಾಗಿ ಆಯ್ಕೆಯಾಗಿರುವ ಸಯ್ಯಿದ್‌ ಅಮೀರ್‌ ತಂಙಳ್‌ ಅಲ್-ಬುಖಾರಿ ಇವರು ಸಯ್ಯಿದ್‌  ಮನೆತನದ ಕಣ್ಮನಿ. ದಕ್ಷಿಣ ಕನ್ನಡ ಜಿಲ್ಲಾ SKSSFನ ಕೋಶಾಧಿಕಾರಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನುಭವವನ್ನು ಹೊಂದಿರುವವರು. ವಾದಿತ್ವಯ್ಬ ಶಂಸುಲ್‌ ಉಲಮಾ ದಾರುಸ್ಸಲಾಂ ವಾಫಿ ಕಾಲೇಜಿನ ಅಧ್ಯಕ್ಷರಾಗಿ ಅಪಾರ ಮುತಅಲ್ಲಿಮರಿಗೆ ಜ್ಞಾನಾರ್ಜನೆ ಮಾಡುತ್ತಿರುವವರು. ಜಿಲ್ಲೆಯ ಆಧ್ಯಾತ್ಮಿಕ ರಂಗದಲ್ಲಿ ಮಿನುಗುವ ತಾರೆಯಾಗಿ, ಸಂಕಷ್ಟಗಳೊಂದಿಗೆ ಬರುವವರಿಗೆ ಭರವಸೆಯ ಸಾಂತ್ವನವನ್ನೀಯುವವರು. ಸಯ್ಯಿದರು ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್‌ ವಿಭಾಗವವನ್ನು ಪ್ರತಿನಿಧಿಸುತ್ತಿದ್ದಾರೆ.

      ವರ್ಕಿಂಗ್‌ ಕಾರ್ಯದರ್ಶಿಯಾಗಿ ಆಯ್ಕೆಯಾದ ತಮ್ಲೀಕ್‌ ದಾರಿಮಿ ಕೊಡಗು ಜಿಲ್ಲೆಯವರು. ನಂದಿ ದಾರುಸ್ಸಲಾಂನಿಂದ ದಾರಿಮಿ ಬಿರುದು ಪಡೆದಿರುವ ತಮ್ಲೀಕ್‌ ದಾರಿಮಿ, ಉತ್ತಮ ಭಾಷಣಗಾರನೂ, ಉತ್ತಮ ಬರಹಗಾರನೂ ಹೌದು. ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತವಿರುವ ದಾರಿಮಿ, ಪ್ರಸ್ತುತ SKSSF ಕೊಡಗು ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಸಂಘಟನೆಯಲ್ಲಿ ಉತ್ತಮ ಅನುಭವವನ್ನು ಹೊಂದಇರುವ ತಮ್ಲೀಕ್‌ ದಾರಿಮಿ ಉತ್ತಮ ಸಂಘಾಟಕನೂ ಹೌದು.

      ಪುತ್ತೂರಿನ ಹೋಟೆಲ್‌ ಅಸ್ಮಿ ಸಭಾಂಗಣದಲ್ಲಿ ನಡೆದ SKSSF ಕರ್ನಾಟಕ ರಾಜ್ಯ ಕೌನ್ಸಿಲ್‌ ಸಭೆಗೆ ದಕ್ಷಿಣ ಕನ್ನಡ ಈಸ್ಟ್‌, ದಕ್ಷಿಣ ಕನ್ನಡ ವೆಸ್ಟ್‌, ಕೊಡಗು, ಮೈಸೂರು, ಹಾಸನ, ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಆಗಮಿಸಿದ್ದರು. ಚುನಾವಣಾ ಅಧಿಕಾರಿಯಾಗಿ SKSSF ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಶೀದ್‌ ಫೈಝಿ ವೆಳ್ಳಾಯಿಕ್ಕೋಡ್‌ ಹಾಗೂ ವೀಕ್ಷಕರಾಗಿ ಎಸ್‌ಕೆಎಸ್‌ಎಸ್‌ಎಫ್‌‌ ರಾಷ್ಟ್ರೀಯ ಸಮಿತಿ ವರ್ಕಿಂಗ್‌ ಸೆಕ್ರೆಟರಿ ಅಸ್ಲಂ ಫೈಝಿ ಆಗಮಿಸಿದ್ದರು. ನೂತನ ಸಮಿತಿಯನ್ನು ಪಾಣಕ್ಕಾಡ್‌ ಸಯ್ಯಿದ್‌ ಹಮೀದಲಿ ಶಿಹಾಬ್‌ ತಂಙಳ್‌ ಘೋಷಿಸಿದರು. ಸಯ್ಯಿದ್‌ ಅಮಿರ್‌ ತಂಙಳ್‌ ದುಆ ನೆರವೇರಿಸಿದರು.

2022-24ನೇ ಸಾಲಿನ ಎಸ್‌ಕೆಎಸ್‌ಎಸ್‌ಎಫ್‌‌ ಕರ್ನಾಟಕ ರಾಜ್ಯ ನೂತನ ಸಮಿತಿ ವಿವರಗಳು:

ಅಧ್ಯಕ್ಷರು: ಮೌಲಾನಾ ರಫೀಕ್‌ ಅಹ್ಮದ್‌ ಹುದವಿ ಕೋಲಾರಿ

ಕಾರ್ಯಾಧ್ಯಕ್ಷರು: ಕಾಸಿಂ ದಾರಿಮಿ

ಫ್ರಧಾನ ಕಾರ್ಯದರ್ಶಿ: ಮೌಲಾನಾ ಅನೀಸ್‌ ಕೌಸರ

ಕೋಶಾಧಿಕಾರ: ಸಯ್ಯಿದ್‌ ಅಮೀರ್‌ ತಂಙಳ್‌

ವರ್ಕಿಂಗ್‌ ಸೆಕ್ರೆಟರಿ: ತಮ್ಲೀಕ್‌ ದಾರಿಮಿ ಕೊಡಗು

ಉಪಾಧ್ಯಕ್ಷರುಗಳು:

ಆರಿಫ್‌ ಫೈಝಿ

ಉಮರ್‌ ದಾರಿಮಿ ಸಾಲ್ಮರ

ಸಲೀಂ ಅಬ್ದುಲ್ಲ

ಸಹ ಕಾರ್ಯದರ್ಶಿಗಳು:

ಸಲೀಂ ಕೆ.ಕೆ. ಬೆMಗಳೂರು

ಅಬುಬಕ್ಕರ್‌ ರಿಯಾಝ್‌ ರಹ್ಮಾನಿ

ತಾಜುದ್ದಿನ್‌ ರಹ್ಮಾನಿ

ಸಂಘಟನಾ ಕಾರ್ಯದರ್ಶಗಳು:

ಸಿದ್ದೀಕ್‌ ಅಬ್ದುಲ್‌ ಖಾದರ್‌, ಬಂಟ್ವಾಳ

ನೌಷಾದ್‌ ಫೈಝಿ

ಇಕ್ಬಾಲ್‌ ಬಾಳಿಲ

ಕಾರ್ಯಕಾರಿ ಸಮಿತಿ ಸದಸ್ಯರು:

ಅಬ್ದುರ‍್ರಹ್ಮಾನ್‌ ನದ್ವಿ

ಇಬ್ರಾಹಿಂ ಬಾತಿಷ ಶಂಸಿ, ಕೊಡ್ಲಿಪೇಟೆ

ಮುಹಮ್ಮದ್‌ ಸಾದಿಕ್‌ ಬೆಂಗಳೂರು

ಉಮರುಲ್‌ ಫಾರೂಕ್‌

ಮುಹಮ್ಮದ್‌ ಶಾಫಿ

ಶರೀಫ್‌ ಮೂಸಾ ಕುದ್ದುಪದವು

ಇಸ್ಹಾಕ್‌ ಹಾಜಿ ತೋಡಾರು

ಮಜೀದ್‌ ಬಾಖವಿ

ಸುಲೈಮಾನ ಮುಸ್ಲಿಯಾರ್‌ ಯುಎಇ

ಅಬ್ದುಲ್‌ ರಷೀದ್‌ ಕತ್ತಾರ್‌

ಬಶೀರ್‌ ಸೌದಿ ಅರೇಬಿಯ

ಹನೀಫ್‌ ಅಬುಧಾಭಿ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಕೆಂದ್ರ ಸಮಿತಿ ಸಹ ಕಾರ್ಯದರ್ಶಿಯಾಗಿರುವ ಇಸ್ಮಾಯಿಲ್‌ ಯಮಾನಿಯವರನ್ನು ಕರ್ನಾಟಕ ರಾಜ್ಯ ವೀಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಪಾಣಕ್ಕಾಡ್ ಸಯ್ಯಿದ್‌ ಹಮೀದಲಿ ಶಿಹಾಬ್‌ ತಂಙಳ್‌ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ