ಇಸಾಕ್ ಕುಟುಂಬ ನಾಳೆ ಹೊಸ ಮನೆಗೆ: ಕನಸು ನನಸಾಗಿಸಿದ ಯೂತ್ ಲೀಗ್

ಇಸಾಕ್  ಕುಟುಂಬ ನಾಳೆ  ಹೊಸ ಮನೆಗೆ: ಕನಸು ನನಸಾಗಿಸಿದ ಯೂತ್ ಲೀಗ್

ತಿರುವನಂತಪುರ, ಜುಲೈ 18: ಅಂಜುಟ್ಟಿ ಇಸ್ಹಾಕ್‌ರವರ ಮನೆಯೆಂಬ ಕನಸನ್ನು ಪೂರ್ಣ ಗೊಳಿಸಿದ ಯೂತ್ ಲೀಗ್ ನಾಳೆ ಜುಲೈ 19ರಂದು ಇಸ್ಹಾಕ್‌ ಕುಟುಂಬಕ್ಕೆ ಹಸ್ತಾಂತರಿಸಲಿದೆ. ಹೊಸ ಮನೆಗೆ ನಾಳೆಯೇ ಇಸ್ಹಾಕ್ ಕುಟುಂಬ ಸ್ಥಳಾಂತರಗೊಳ್ಳಲಿದೆ ಎಂದು ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಜ್ ತಮ್ಮ ಫೇಸ್ಬುಕ್ ವಾಲ್ ನಲ್ಲಿ ಹೇಳಿಕೊಂಡಿದ್ದಾರೆ.‌

ಫೇಸ್ಬುಕ್ ವಿವರ ಇಂತಿದೆ:
ಪ್ರೀಯರೇ,

ನಮ್ಮ ಪ್ರಿಯ  ಸಹೋದರ ತಾನೂರಿನ ಅಂಜುಟ್ಟಿ ಇಸ್ಹಾಕ್‌ನನ್ನು ಸಿಪಿಎಂ ಗೂಂಡಾಗಳು ಕೊಲೆಗೈದು ಎರಡು ವರ್ಷಗಳು ಪೂರ್ತಿಯಾಗುತ್ತಿದೆ. ಸ್ವಂತ ಮನೆ ಎಂಬುದು ಇಸ್ಹಾಕ್‌ನ ಕನಸಾಗಿತ್ತು. ಯೂತ್ ಲೀಗ್ ಕೇರಳ ರಾಜ್ಯ ಸಮಿತಿ ಆ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಇಸ್ಹಾಕ್‌ನ ಕನಸನ್ನು ಸಾಕ್ಷಾತ್ಕರಿಸಿದೆ. ನಾಳೆ ಹೊಸ ಮನೆಗೆ ಇಸಾಕ್ ಕುಟುಂಬ ಸ್ಥಳಾಂತರಗೊಳ್ಳಲಿದೆ. ಕೋವಿಡ್ ಪ್ರೊಟೋಕಾಲ್ ಇರುವುದರಿಂದ ಸರಳ ಸಮಾರಂಭ ಮಾತ್ರ ನಡೆರಲಿರುವುದು. ತಮ್ಮೆಲ್ಲರ ಪ್ರಾರ್ಥನೆ ನಮ್ಮೊಂದಿಗಿರಬೇಕು. ಈ ಕನಸನ್ನು ನನಸು ಮಾಡಲು ಸಹಾಯ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.


ಪಾಣಕ್ಕಾಡ್ ಸಯ್ಯಿದ್‌ ಮುನವ್ವರಲಿ ಶಿಹಾಬ್ ತಂಙಳ್ (ಅಧ್ಯಕ್ಷರು)
ಪಿ.ಕೆ.ಫಿರೋಜ್ (ಪ್ರಧಾನ ಕಾರ್ಯದರ್ಶಿ)

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ