ಜನವರಿ 11 ಕ್ಕೆ SKSSF ಮುನ್ನಡೆ ಯಾತ್ರೆ ದ.ಕ.ಜಿಲ್ಲೆಗೆ

ಜನವರಿ 11 ಕ್ಕೆ SKSSF ಮುನ್ನಡೆ ಯಾತ್ರೆ   ದ.ಕ.ಜಿಲ್ಲೆಗೆ

ಮಂಗಳೂರು, ಜನವರಿ 7: ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ನೇತೃತ್ವದ SKSSF ಮುನ್ನಡೆ ಯಾತ್ರೆಯು ಜನವರಿ 11ರಂದು ಪುತ್ತೂರಿನಲ್ಲಿ ಸಮಾರೋಪಗೊಳ್ಳಲಿದೆ‌.
     ಪುತ್ತೂರಿನ ಸಂಪ್ಯದಲ್ಲಿ ಸಾಯಂಕಾಲ 3 ಗಂಟೆಗೆ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಜಿಲ್ಲಾ ಅಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ವಹಿಸಿಕೊಳ್ಳಲಿದ್ದಾರೆ. ಸಮಸ್ತ ಜಂ-ಇಯ್ಯತುಲ್ ಉಲಮಾದ ಅಧ್ಯಕ್ಷರಾದ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ವಿಧಾಸಭೆಯ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ
ಎಂದು SKSSF ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
     ಅಸ್ತಿತ್ವ, ಹಕ್ಕು ಯುವ ಜನತೆ ಮರಳಿ ಪಡೆಯುತ್ತಿದೆ ಎಂಬ ಧ್ಯೇಯ ವಾಕ್ಯದೊಂದಿಗೆ ಡಿ.06 ರಿಂದ ಜ.26 ರ ವರೆಗೆ SKSSF ನಡೆಸುತ್ತಿರುವ ಅಭಿಯಾನದ ಭಾಗವಾಗಿ ದೇಶದಾದ್ಯಂತ 4000 ಪ್ರಭಾಷಣಗಳು, 600 ಸೆಮಿನಾರ್ ಗಳು, ಸೌಹಾರ್ದ ಸಂಜೆ, ಮಾನವ ಸರಪಳಿ, ಮುನ್ನಡೆ ಯಾತ್ರೆ, ವಿಖಾಯ ಬ್ಲೂ ಸ್ಕ್ವೇರ್ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಅಭಿಯಾನದ ಭಾಗವಾಗಿ ಡಿ. 30 ರಂದು ಕೇರಳ ತಿರುವನಂತಪುರಂ ನಿಂದ ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಇವರ ನೇತೃತ್ವದಲ್ಲಿ ಆರಂಭಿಸಿದ ಮುನ್ನಡೆ ಯಾತ್ರೆಯು ಜ.11 ರಂದು ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಸಮಾರೋಪಗೊಳ್ಳಲಿದೆ. ಜನವರಿ 11ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕದ ತಲಪಾಡಿ ಗಡಿ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ಮುನ್ನಡೆ ಯಾತ್ರೆಯನ್ನು ಜಿಲ್ಲಾ ನಾಯಕರು ಬರಮಾಡಿಕೊಂಡು ಉಳ್ಳಾಲದಲ್ಲಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಲ್ಲಿಂದ ಮುಂದುವರಿದು ಕರ್ನಾಟಕದ ಕಣ್ಮಣಿ ಮರ್ಹೂಂ ಶೈಖುನಾ ಜಬ್ಬಾರ್ ಉಸ್ತಾದರ ನಾಡಲ್ಲಿ ಅಪರಾಹ್ನ 2.30ಕ್ಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾಯಂಕಾಲ 3.00 ಗಂಟೆಯಿಂದ ಪುತ್ತೂರಿನಲ್ಲಿ ಸಮಾರೋಪ ಸಮಾರಂಭ ಆರಂಭಗೊಳ್ಳುವುದು.
     ಕರ್ನಾಟಕ ರಾಜ್ಯ ವಿಧಾಸಭೆಯ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್, SKSSF ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು ವಿಷಯ ಮಂಡನೆ ನಡೆಸಲಿದ್ದಾರೆ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಮುಶಾವರ ಸದಸ್ಯರಾದ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ, ಶಾಸಕರಾದ ಯು.ಟಿ ಖಾದರ್, ಸತ್ತಾರ್ ಪಂದಲ್ಲೂರ್, ರಶೀದ್ ಫೈಝಿ ವೆಳ್ಳಾಯಿಕ್ಕೋಡು, ತಾಜುದ್ದೀನ್ ದಾರಿಮಿ, ಮಾಜಿ ಸಚಿವ ಬಿ.ರಮಾನಾಥ ರೈ, ಹಿರಿಯ ಚಿಂತಕ ವೈ.ಎಸ್. ದತ್ತ, ಪ್ರಗತಿ ಪರ ಕೃಷಿಕ ಸಮಾಜದ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಮುಂತಾದವರು ಭಾಗವಹಿಸಲಿದ್ದಾರೆ.

   ಭಾರತ ದೇಶದ ಕೋಮು ಸೌಹಾರ್ತೆಯ ಪರಂಪರೆಯನ್ನು ಯುವ ತಲೆಮಾರಿಗೆ ಪರಿಚಯಿಸುವುದು ಮತ್ತು ಈ ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಹಿತಾಸಕ್ತಿಗಳ ಕುರಿತು ಜಾಗೃತಿ ಮೂಡಿಸುವುದು. ಹಲವಾರು ಜಾತಿ ಧರ್ಮಗಳ ಹೂದೋಟವಾದ ಭಾರತದಲ್ಲಿ ತಮ್ಮ ಹಕ್ಕು, ಅಸ್ತಿತ್ವವನ್ನು ಉಳಿಸಿಕೊಳ್ಳಲು ಯುವ ಜನತೆಗೆ ಮಾರ್ಗದರ್ಶನ ನೀಡುವುದು ನಮ್ಮ ಅಭಿಯಾನದ ಉದ್ಧೇಶವಾಗಿದೆ ಎಂದು SKSSF ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಳಿಸಿದರು.

    ಪತ್ರಿಕಾ ಗೋಷ್ಟಿಯಲ್ಲಿ ಎಸ್‌.ಕೆ.ಎಸ್.ಎಸ್.ಎಫ್.‌ ಕೇಂದ್ರ ಸಮಿತಿ ಕಾರ್ಯದರ್ಶಿ ಖಾಸಿಂ ದಾರಿಮಿ, ಜಿಲ್ಲಾ ಅಧ್ಯಕ್ಷರಾದ ಸಯ್ಯಿದ್‌ ಅಮೀರ್‌ ತಂಙಳ್‌, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್‌ ಯಮಾನಿ, ವರ್ಕಿಂಗ್‌ ಕಾರ್ಯದರ್ಶಿ ಆರಿಫ್‌ ಬಡಕಬೈಲು, ಉಪಾಧ್ಯಕ್ಷ ಸಿದ್ದೀಕ್‌ ಅಬ್ದುಲ್‌ ಖಾದರ್‌ ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ