PFI: ಟ್ವಿಟರ್ ಸಮರ

ಮಂಗಳೂರು, ಡಿಸೆಂಬರ್ 25: ಸಾಮಾಜಿಕ ಜಾಲತಾಣಗಳು ಇಂದು ಚಿಕ್ಕಪುಟ್ಟ ವಿಷಯಗಳಿಗೂ ವೇದಿಕೆ ಒದಗಿಸುತ್ತಿದೆ. ಈ ತಾಣಗಳ ಮೂಲಕ ಆಗಾಗ ವಾಕ್ಸಮರಗಳು ನಡೆಯುವುದೂ ಸಾಮಾನ್ಯವಾಗಿದೆ. ಇಂದಿನ ಟ್ವಿಟರ್ ಸಮರವು ಪಿಎಫ್ಐ ಕೇಂದ್ರೀಕೃತವಾಗಿದ್ದು ಟ್ರೆಂಡಿಂಗ್ ನಲ್ಲಿ ಭಾರೀ ಪೈಪೋಟಿ ನಡೆಸುತ್ತಿದೆ.
#IndiaWithPFI ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದಕ್ಕೆ ಪ್ರತಿಯಾಗಿ #BanPFI ಎಂಬ ಹ್ಯಾಶ್ ಟ್ಯಾಗ್ ತೀವೃ ಪೈಪೋಟಿ ನಡೆಸುತ್ತಿದೆ. PFI ಟಾಪ್ ಎರಡು ಟ್ವಿಟ್ಟರ್ ಟ್ರೆಂಡ್ ಗಳ ಕೇಂದ್ರ ಬಿಂದುವಾಗಿದೆ. #BanPFIನಲ್ಲಿ ಪಿಎಫ್ಐ ಯ ಕುರಿತು ಸಾಕಷ್ಟು ಟೀಕೆಗಳು ಕಂಡು ಬಂದಿದ್ದು ಲವ್ ಜಿಹಾದ್, ಹಿಂದು ಮುಖಂಡರ ಹತ್ಯೆ, ಬೆಂಗಳೂರು ಗಲಭೆ ಯನ್ನು ಟ್ವಿಟ್ಟರ್ ನಲ್ಲಿ ಉಲ್ಲೇಖಿಸಲಾಗಿದೆ
ಇದಕ್ಕೆ ವಿರುದ್ಧವಾಗಿ PFI ತಾನು ಸಮಾಜಕ್ಕೆ ನೀಡಿದ ಕಾಣಿಕೆಯನ್ನು ಬಿಂಬಿಸುವ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಪಿಎಫ್ಐ #IndiaWithPFI ಎಂಬ ಇನ್ನೊಂದು ಹ್ಯಾಶ್ ಟ್ಯಾಗ್ ನಲ್ಲಿ ತಾನು ಕೊರೊನಾ ಸಂದರ್ಭದಲ್ಲಿ ಮಾಡಿದಂತಹ ಸೇವೆ, ವಿದ್ಯಾಭ್ಯಾಸ ಕ್ಕೆ ನೀಡಿದ ನೆರವು ಮುಂತಾದ ಸೇವೆಗಳ ಬಗ್ಗೆ ಹೇಳಿಕೊಂಡಿದೆ. ಪ್ಯಾಶಿಷ್ಟ್ ಶಕ್ತಿಗೆ ನಮ್ಮನ್ನು ಸೋಲಿಸಲು ಸಾದ್ಯವಿಲ್ಲ ಎ೦ಬ ಬರಹವೂ ಟ್ವಿಟರ್ ನಲ್ಲಿ ಕಂಡುಬಂದವು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ