msf: ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮುಹಮ್ಮದ್‌ ನಿಸಾರ್‌ ಆರಂಬೂರ್‌ ಆಯ್ಕೆ

msf: ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮುಹಮ್ಮದ್‌ ನಿಸಾರ್‌ ಆರಂಬೂರ್‌ ಆಯ್ಕೆ

ಸುಳ್ಯ: ಎಂಎಸ್‌ಎಫ್‌ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮುಹಮ್ಮದ್‌ ನಿಸಾರ್‌ ಆರಂಬೂರ್‌ ಆಯ್ಕೆಗೊಂಡಿದ್ದಾರೆ.

      ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದರ ವಿದ್ಯಾರ್ಥಿ ಸಂಘಟನೆಯಾದ ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ (msf) ಜಿಲ್ಲೆಯಾದ್ಯಂತ ತನ್ನ ಬಲ ವರ್ಧನೆಯನ್ನು ನಡೆಸುತ್ತಿದ್ದು, ಇದರ ಭಾಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಸಮಿತಿಯನ್ನು ರಚಿಸಲಾಯಿತು. ಸುಳ್ಯದ ಸುಪ್ರೀಂ ಹಾಲ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಎಂಎಸ್‌ಎಫ್‌ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮುಸ್ತಫಾ ಕಟ್ಟತ್ತಾರ್ ವಹಿಸಿಕೊಂಡಿದ್ದರು.

      ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜು ವಿದ್ಯಾರ್ಥಿ ಸವಾದ್ ಪರ್ಪುಂಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂಎಸ್‌ಎಫ್‌ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಝುನೈಫ್ ಕೋಲ್ಪೆ ಎಂಎಸ್‌ಎಫ್‌ನ ಅಗತ್ಯತೆ ಮತ್ತು ಪ್ರಾಧಾನ್ಯತೆ ಬಗ್ಗೆ ಸಭೆಯಲ್ಲಿ ವಿವರಿಸಿದರು.

      ಎಂಎಸ್‌ಎಫ್‌ ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳಾಗಿ ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು:

ಅಧ್ಯಕ್ಷರು: ಮುಹಮ್ಮದ್ ನಿಸಾರ್ ಅರಂಬೂರು.

ಪ್ರಧಾನ ಕಾರ್ಯದರ್ಶಿ: ನವಾಝ್ ಅಜ್ಜಾವರ.

ಕೋಶಾಧಿಕಾರಿ: ಫೈಝಲ್ ಕಡಬ.

ಉಪಾಧ್ಯಕ್ಷರು: ಶಬಾದ್ ಬೆಳ್ಳಾರೆ, ಸಿರಾಜ್ ನೆಟ್ಟಾರ್, ಶಂಸೀರ್ ಪೆರುವಾಜೆ, ಆಬಿದ್ ಬೆಳ್ಳಾರೆ.

ಕಾರ್ಯದರ್ಶಿಗಳು: ಸಿನಾನ್ ಮಂಡೆಕೋಲ್, ನಾಸೀರ್ ಅರಂಬೂರು, ಆಸೀಫ್ ಕಳಂಜ, ಶಿಹಾಬುದ್ಧೀನ್ ನೆಟ್ಟಾರ್.

ಮೀಡಿಯಾ ಕಾರ್ಯದರ್ಶಿ: ಹಾಶಿಮ್ ಕಲ್ಲಗುಂಡಿ, ನಿಯಾಝ್ ಬೆಳ್ಳಾರೆ, ಉಮರ್ ಸಾಹಿಲ್ ಕಡಬ, ಆರೀಫ್ ಬೆಳ್ಳಾರೆ, ರಫೀಕ್ ಕೋಲ್ಪೆ.

ಕಾರ್ಯಕಾರಿ ಸಮಿತಿ ಸದಸ್ಯರು: ಸಲ್ಮಾನುಲ್ ಫಾರಿಸ್ ಅರಂಬೂರು, ಸಿಮಾಖ್ ಅಡ್ಕ, ಶಾಹುಲ್ ಹಮೀದ್ ಬೆಳ್ಳಾರೆ, ರಮೀಝ್ ಬೆಳ್ಳಾರೆ, ಜಲಾಲ್ ಅಡ್ಕಾರ್ ಇವರನ್ನು ಆಯ್ಕೆ ಮಾಡಲಾಯಿತು.

ಕೊನೆಯಲ್ಲಿ ಶಬಾದ್ ಬೆಳ್ಳಾರೆ ವಂದಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ