JCI ಸುಳ್ಯ ಮತ್ತು NSS ಸುಳ್ಯ ಘಟಕದಿಂದ ಮಾದರಿ ಹೊಸ ವರ್ಷಾಚರಣೆ

JCI ಸುಳ್ಯ ಮತ್ತು NSS ಸುಳ್ಯ ಘಟಕದಿಂದ ಮಾದರಿ ಹೊಸ ವರ್ಷಾಚರಣೆ
republicday728
republicday468
republicday234

ಸುಳ್ಯ, ಜನವರಿ 1: ಸುಳ್ಯ ನಗರ ಜೆಸಿಐ (Junior Chamber International) ಮತ್ತು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ (NSS) ಜಂಟಿಯಾಗಿ "ಹೊಸ ವರ್ಷ -2021" ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿತು. ಹೊಸ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ ಕೊಡಿಯಾಲಬೈಲ್ ಕಾಲೋನಿಯಲ್ಲಿ ತೆಂಗಿನ  ಗಿಡವನ್ನು  ನೆಡುವ ಮೂಲಕ ಸಂಭ್ರಮವನ್ನು ಆಚರಿಸಿತು.

    ಈ ಕಾರ್ಯಕ್ರಮದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹರೀಶ್ ರೈ ಉಬರಡ್ಕ, ಉಬರಡ್ಕ ಗ್ರಾಮ ಪಂಚಾಯತ್ ನ ಸದಸ್ಯರಾದ ಮಮತಾ ಕುದ್ಪಾಜೆ, ನಿವೃತ್ತ ಸೈನಿಕರಾದ ನವೀನ ಕುಮಾರ್, ಸ. ಪ್ರ.ದ.ಕಾ.ಸುಳ್ಯ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ಶ್ರೀಮತಿ ಸುರೇಖಾ ಹಾಗೂ ಸ್ವಯಂ ಸೇವಕರು, ಜೆಸಿಐ ಸುಳ್ಯ ನಗರದ ನಿಯೋಜಿತ ಅಧ್ಯಕ್ಷ ಜೇಸಿ ಚಂದ್ರಶೇಖರ್ ಕನಕಮಜಲು ಹಾಗೂ ಜೆಸಿಐಯ ಪದಾಧಿಕಾರಿಗಳು ಮತ್ತು ಕಾಲೊನಿಯ ಫಲಾನುಭವಿಗಳು ಉಪಸ್ಥಿತರಿದ್ದರು. ಜೇಸೀ ಐ ಸುಳ್ಯ ಸಿಟಿ ಸ್ಥಾಪಕ ಜೇಸೀ ಮನಮೋಹನ್ ಬಳ್ಳಡ್ಕ ಸ್ವಾಗತಿಸಿ ವಂದಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ