FIFA ವಿಶ್ವಕಪ್: ಪಂದ್ಯದ ವೇಳೆ ಕುಸಿದು ಬಿದ್ದು ಅಮೆರಿಕದ ಕ್ರೀಡಾ ವರದಿಗಾರ ನಿಧನ
ಎಲ್‌ಜಿಬಿಟಿ ಸಮುದಾಯದವರಿಗೆ ಬೆಂಬಲ ಸೂಚಿಸುವ ಟಿ–ಶರ್ಟ್ ಧರಿಸಿಕೊಂಡು ಬಂದಿದ್ದ ವರದಿಗಾರ
ದೋಹಾ: ವಿಶ್ವಕಪ್ ಟೂರ್ನಿಯ ಪಂದ್ಯಗಳ ವರದಿಗೆ ಬಂದಿದ್ದ ಅಮೆರಿಕದ ಕ್ರೀಡಾ ವರದಿಗಾರ ಗ್ರಾಂಟ್ ವಾಲ್ ಅವರು ಶುಕ್ರವಾರ ಅರ್ಜೆಂಟೀನಾ– ನೆದರ್ಲೆಂಡ್ಸ್ ಪಂದ್ಯದ ವೇಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಫುಟ್‌ಬಾಲ್ ಕ್ರೀಡೆಗೆ ಸಂಬಂಧಿಸಿದ ವರದಿಗಳ ಮೂಲಕ ಅಮೆರಿಕದಲ್ಲಿ ಜನಪ್ರಿಯತೆ ಗಳಿಸಿದ್ದರು. ‘ಕ್ರೀಡಾಂಗಣದ ಮಾಧ್ಯಮ ಕೇಂದ್ರದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಗ್ರಾಂಟ್ ಕುಸಿದುಬಿದ್ದರು. ಸ್ಥಳದಲ್ಲಿ ತರ್ತು ಚಿಕಿತ್ಸೆ ನೀಡಿ ಅವರನ್ನು ಹಮದ್ ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಅವರಿಗೆ ಹೃದಯಾಘಾತವಾಗಿರುವ ಸಾಧ್ಯತೆಯಿದೆ’ ಎಂದು ’ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ‘ಆರೋಗ್ಯದಲ್ಲಿ ಅಲ್ಪ ಏರುಪೇರು ಉಂಟಾಗಿದ್ದು, ಕತಾರ್‌ನಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿದ್ದೆ’ ಎಂದು ತಮ್ಮ ಎಂಟನೇ ಫಿಫಾ ವಿಶ್ವಕಪ್ ಟೂರ್ನಿಯ ವರದಿಗಾರಿಕೆಯಲ್ಲಿದ್ದ ಗ್ರಾಂಟ್ ಅವರು ಸೋಮವಾರ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದರು.
ಅಮೆರಿಕ– ವೇಲ್ಸ್ ನಡುವಣ ನ.21 ರಂದು ನಡೆದ ಪಂದ್ಯದ ವೇಳೆ ಎಲ್‌ಜಿಬಿಟಿ ಸಮುದಾಯದವರಿಗೆ ಬೆಂಬಲ ಸೂಚಿಸುವ ಟಿ–ಶರ್ಟ್ ಧರಿಸಿಕೊಂಡು ಬಂದಿದ್ದ ಅವರನ್ನು ಕ್ರೀಡಾಂಗಣದ ಸಿಬ್ಬಂದಿ ತಡೆದಿದ್ದರು.
48 ವರ್ಷದ ಗ್ರಾಂಟ್ ಅವರು ಸ್ಪೋರ್ಟ್ಸ್ ಇಲಸ್ಟ್ರೇಟೆಡ್, ಸಿಬಿಎಸ್ ಸ್ಪೋರ್ಟ್ಸ್ ಮತ್ತು ಇತರ ಮಾಧ್ಯಮಗಳಿಗೆ ಕೆಲಸ ಮಾಡಿದ್ದರು. ಫುಟ್‌ಬಾಲ್ ಕ್ರೀಡೆಗೆ ಸಂಬಂಧಿಸಿದ ವರದಿಗಳ ಮೂಲಕ ಅಮೆರಿಕದಲ್ಲಿ ಜನಪ್ರಿಯತೆ ಗಳಿಸಿದ್ದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ