SKSSF ಸಹಚಾರಿಯಿಂದ ಕ್ಯಾನ್ಸರ್ ರೋಗಿಗಳಿಗೆ ಧನ ಸಹಾಯ

SKSSF ಸಹಚಾರಿಯಿಂದ ಕ್ಯಾನ್ಸರ್ ರೋಗಿಗಳಿಗೆ ಧನ ಸಹಾಯ
republicday728
republicday468
republicday234

ಮಂಗಳೂರು: ಎಸ್ಕೆಎಸ್ಸೆಸ್ಸೆಫ್‌ ನ ಉಪಸಮಿತಿಗಳಲ್ಲಿ ಒಂದಾದ ಸಹಚಾರಿಯು ಆರ್ಥಿಕ ಸಂಕಷ್ಟದಲ್ಲಿರುವ ರೋಗಿಗಳ ನೆರವಿಗಾಗಿ ಸದಾ ಶ್ರಮಿಸುತ್ತಿರುವ ಒಂದು ಉಪ ವಿಭಾಗವಾಗಿದೆ. ವಿವಿಧ ರೂಪದಲ್ಲಿ ಸಹಾಯ ಹಸ್ತ ನೀಡುತ್ತಿರುವ ಸಹಚಾರಿಯು ಇದೀಗ ಕ್ಯಾನ್ಸರ್‌ ರೋಗಿಗಳಿಗಾಗಿ ವಿಶೇಷ ಧನ ಸಹಾಯವನ್ನು ಬಿಡುಗಡೆ ಮಾಡಿದೆ ಎಂದು ದ.ಕ.ಜಿಲ್ಲಾ ಸಹಚಾರಿ ಕಾರ್ಯದರ್ಶಿ ಜಾಬೀರ್‌ ಫೈಝಿ ಬನಾರಿ ತಿಳಿಸಿದರು.

    ಎಸ್ಕೆಎಸ್ಸೆಸ್ಸೆಫ್‌ ಕೇಂದ್ರ ಸಮಿತಿಯಿಂದ ಪ್ರತೀ ಅರ್ಜಿಗೆ ರೂ.2,500 ರಂತೆ ಒಂದು ಸಾವಿರ ಮಂದಿಗೆ ಈ ನೆರವನ್ನು ನೀಡಲಾಗುತ್ತಿದೆ. ಮೊದಲು ಅರ್ಜಿ ಸಲ್ಲಿಸಿದ ಸಾವಿರ ಮಂದಿಯನ್ನು ಮಾತ್ರ ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸಲು ಈ ಲಿಂಕ್‌ ಉಪಯೋಗಿಸಿ: http://skssf.in/cancer-relief/ ಎಂದು ಸಹಚಾರಿ ದ.ಕ. ಜಿಲ್ಲಾ ಅಧ್ಯಕ್ಷರಾದ ರಫೀಕ್‌ ಫೈಝಿ ಕನ್ಯಾನ ವಿವರಗಳನ್ನು ನೀಡಿದರು.

      ಎಸ್ಕೆಎಸ್ಸೆಸ್ಸೆಫ್‌ ಸಮಾಜದ ವಿವಿಧ ರಂಗದಲ್ಲಿ ಸೇವಾ ನಿರತವಾಗಿದ್ದು ತನ್ನ ಅರ್ಪಣಾ ಮನೋಭಾವದ ಸೇವೆಯಿಂದಾಗಿ ದಿನದಿಂದ ದಿನಕ್ಕೆ ಜನಾನುರಾಗಿಯಾಗಿ ಬೆಳೆಯುತ್ತಿದೆ. ವಿವಿಧ ವಿಭಾಗಗಳಲ್ಲಿ ಎಸ್ಕೆಎಸ್ಸೆಸ್ಸೆಫ್‌ ನ ವಿವಿಧ ಉಪಸಮಿತಿಗಳು ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಕಳೆದ ವರ್ಷ ಕೋವಿಡ್‌ ಲಾಕ್‌ ಡೌನ್‌ ಸಂದರ್ಭದಲ್ಲೂ ಕಿಡ್ನಿ ಸಂಬಂಧಿತ ರೋಗಿಗಳಿಗಾಗಿ ಇದೇ ರೀತಿಯ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಾಗಿತ್ತು. ಡಯಾಲಿಸಿಸ್‌ ಅಗತ್ಯವಿರುವ ಆಯ್ದ  ರೋಗಿಗಳಿಗೆ ಮಾಸಾಶನ ಯೋಜನೆಯು ಜಾರಿಯಲ್ಲಿದೆ. ಅಲ್ಲದೆ ಪ್ರತಿ ನಿತ್ಯ ಅರ್ಜಿ ಸಲ್ಲಿಸುವ ಸಾವಿರಾರು ರೋಗಿಗಳಿಗೆ ನಿರಂತರವಾಗಿ ಆರ್ಥಿಕ ನೆರವು ಲಭಿಸುತ್ತಿದೆ. ದಾನಿಗಳ ನೆರವಿನಿಂದ ಮುಂದುವರಿಯುತ್ತಿರುವ ಸಹಚಾರಿಯು ಸಂಕಷ್ಟದಲ್ಲಿರುವ ರೋಗಿಗಳಿಗಾಗಿ ಅಲ್ಲಲ್ಲಿ ಸಹಚಾರಿ ಸೆಂಟರ್‌ ಗಳನ್ನು ತೆರೆದು ರೋಗಿಗಳಿಗೆ ಅಗತ್ಯವಿರುವ ವಿವಿಧ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುತ್ತಿದೆ.

      ಎಲ್ಲಾ ಕಾರ್ಯಕರ್ತರು ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ಸಹಚಾರಿ ನೆರವು ದೊರಕುವಂತೆ ನೋಡಿಕೊಳ್ಳಬೇಕು. ಕ್ಯಾನ್ಸರ್‌ ರೋಗಿಗಳನ್ನು ಗುರುತಿಸಿ ಸಹಚಾರಿಗೆ ಅರ್ಜಿ ಸಲ್ಲಿಸಲು ಅವರಿಗೆ ಎಲ್ಲಾ ರೀತಿಯಲ್ಲೂ ಸಹಾಯ ನೀಡಬೆಕೆಂದು ಎಸ್ಕೆ.ಎಸ್.ಎಸ್.ಎಫ್‌ ದ.ಕ.ಜಿಲ್ಲಾ ಆದ್ಯಕ್ಷರಾದ ಸಯ್ಯಿದ್‌ ಅಮೀರ್‌ ತಂಙಳ್‌ ಮತ್ತು ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್‌ ಯಮಾನಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಅರ್ಜಿ ಸಲ್ಲಿಸಲು ಈ ಲಿಂಕ್‌ ಉಪಯೋಗಿಸಿ: http://skssf.in/cancer-relief/

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ