ಹೊಸ ಪೌರತ್ವ ಆದೇಶ: ಸುಪ್ರೀಂ ಕೋರ್ಟಿಗೆ ಸಮಸ್ತ

2021 ರ ಮೇ 28 ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಪೌರತ್ವ ಕುರಿತಾದ ಆದೇಶದ ವಿರುದ್ದ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಿದೆ.

ಹೊಸ ಪೌರತ್ವ ಆದೇಶ: ಸುಪ್ರೀಂ ಕೋರ್ಟಿಗೆ ಸಮಸ್ತ

ಚೇಳಾರಿ: ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಭಾರತೀಯ ಪೌರತ್ವ ಆದೇಶವನ್ನು ರದ್ದು ಗೊಳಿಸಬೇಕೆಂದು ಸಮಸ್ತ ಕೇರಳ ಜಂ-ಇಯ್ಯತುಲ್‌ ಉಲಮಾ ಅಧ್ಯಕ್ಷ ಸಯ್ಯಿದ್‌ ಜಿಫ್ರಿ ಮುತ್ತುಕೋಯ ತಂಙಳ್‌ ಮತ್ತು ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್‌ ಆಲಿಕುಟ್ಟಿ ಮುಸ್ಲಿಯಾರ್‌ ಒತ್ತಾಯಿಸಿದ್ದಾರೆ.

      2021 ರ ಮೇ 28 ರಂದು ಕೇಂದ್ರ ಗೃಹ ಸಚಿವಾಲಯ ಆದೇಶವೊಂದನ್ನು ಹೊರಡಿಸಿ, ಪಾಕಿಸ್ತಾನ, ಆಪ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶದಿಂದ ವಲಸೆ ಬಂದು ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮೇತರರಾದ ಅಲ್ಪ ಸಂಖ್ಯಾತರಿಂದ ಭಾರತದ ಪೌರತ್ವಕ್ಕಾಗಿ ಅರ್ಜಿಯನ್ನು ಆಹ್ವಾನಿಸಿತ್ತು.

      ಈ ಆದೇಶದ ಪ್ರಕಾರ ಗುಜರಾತ್, ರಾಜಸ್ಥಾನ, ಛತ್ತೀಸ್‌ ಘಡ, ಹರಿಯಾಣ ಮತ್ತು ಪಂಜಾಬ್‌ನ 13 ಜಿಲ್ಲೆಗಳಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಸಿಖ್ಖರು ಮಾತ್ರ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರು.  ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಭಾರತದಲ್ಲಿ ಅಸಾಂವಿಧಾನಿಕವಾಗಿದೆ.  2019 ರ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಮಸ್ತ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಯು ಸುಪ್ರೀಂ ಕೋರ್ಟ್ ಪರಿಗಣನೆಯಲ್ಲಿದೆ.

      ಪ್ರಸ್ತುತ ಅರ್ಜಿಯನ್ನು ಪರಿಗಣಿಸುವಾಗ ಯಾವುದೇ ನಿಯಮಗಳನ್ನು ರೂಪಿಸದ ಕಾರಣ ಪೌರತ್ವ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ವಕೀಲರು ಮೌಖಿಕವಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

      ಧರ್ಮಾಧಾರಿತವಾಗಿ ಪೌರತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿರುವುದು ಕೇಂದ್ರ ಸರ್ಕಾರ ನೀಡಿದ ಭರವಸೆಯ ಉಲ್ಲಂಘನೆಯಾಗಿದೆ.  2021 ರ ಮೇ 28 ರಂದು ಹೊರಡಿಸಿದ ಹೊಸ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಮಸ್ತ ಕೇರಳ ಜಂ-ಇಯ್ಯತುಲ್‌ ಉಲಮಾ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ