ಹುಬ್ಬಳ್ಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸುರತ್ಕಲ್ ರೋಗಿ: ಸಹಾಯ ಹಸ್ತ ಚಾಚಿ ಅರ್ಥಪೂರ್ಣ ಈದ್ ಆಚರಿಸಿದ SKSSF

ಹುಬ್ಬಳ್ಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸುರತ್ಕಲ್ ರೋಗಿ: ಸಹಾಯ ಹಸ್ತ ಚಾಚಿ ಅರ್ಥಪೂರ್ಣ ಈದ್ ಆಚರಿಸಿದ SKSSF

ಹುಬ್ಬಳ್ಳಿ: ಹುಬ್ಬಳ್ಳಿಯ KLE ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ  ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಿವಾಸಿಯೊಬ್ಬರು ಆರ್ಥಿಕ ಮುಗ್ಗಟ್ಟಿನಿಂದ ಸಂಕಷ್ಟಕ್ಕೆಈಡಾಗಿರುವುದನ್ನು ಅರಿತ ಎಸ್‌ಕೆಎಸ್‌ಎಸ್‌ಎಫ್ ಕಾರ್ಯಕರ್ತರು ನೆರವಿಗೆ ಧಾವಿಸಿ ರೋಗಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

      ಉದ್ಯೋಗಕ್ಕೆಂದು ಹುಬ್ಬಳ್ಳಿಗೆ ತೆರಳಿದ್ದ ಸುರತ್ಕಲ್ ನಿವಾಸಿಯೊಬ್ಬರು ಅನಾರೋಗ್ಯದಿಂದ ಸುರತ್ಕಲ್ ಮೂಲದ ವ್ಯಕ್ತಿ ಹುಬ್ಬಳ್ಳಿಯ KLE ಸುಚಿರಾಯು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ.  ಚಿಕಿತ್ಸಾ ವೆಚ್ಚ 3 ಲಕ್ಷವನ್ನು ದಾಟಿ ಡಿಸ್ಚಾರ್ಜ್ ಆಗಲು ಸಾಧ್ಯವಾಗದೆ ಸಂಕಷ್ಟವನ್ನು ಎದುರಿಸುತ್ತಿದ್ದರು. ಈ ಸಂದರ್ಭದಲ್ಲಿ ರೋಗಿಯ ಸಂಬಂಧಿಕರೊಬ್ಬರು ಎಸ್‌ಕೆಎಸ್‌ಎಸ್‌ಎಫ್‌ನ ಸಹಚಾರಿ ರಾಜ್ಯ ಸಮಿತಿ ಕಾರ್ಯದರ್ಶಿ ನಝೀರ್ ವಲಕಚ್ಚಿಲ್‌ರವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿ ನೆರವು ಯಾಚಿಸುತ್ತಾರೆ.

      ತಕ್ಷಣವೇ ಅವರು ಹುಬ್ಬಳ್ಳಿಯಲ್ಲಿರುವ SKSSF  ನಾಯಕರಾದ ನೌಶಾದ್ ಮತ್ತು ನ್ಯಾಷನಲ್ ಮಿಷನ್ ಕರ್ನಾಟಕ ಕೋ ಆರ್ಡಿನೇಟರ್ ಅಬ್ದುರ್ರಹ್ಮಾನ್ ನದ್ವಿಯವರನ್ನು ಸಂಪರ್ಕಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸುತ್ತಾರೆ.

     ತಕ್ಷಣವೇ ಅವರಿಬ್ಬರೂKLE ಆಸ್ಪತ್ರೆಗೆ ತೆರಳಿ ರೋಗಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಡುತ್ತಾರೆ. ಬೆಳಿಗ್ಗೆಯಿಂದ ರಾತ್ರಿ ಸುಮಾರು 3 ಗಂಟೆ ವರೆಗೂ ಅಲ್ಲೇ ಇದ್ದು ರೋಗಿಯನ್ನು ಸಾಂತ್ವನ ಪಡಿಸುತ್ತಾರೆ. ಡಿಸ್ಚಾರ್ಜ್‌ಗೆ  ಡಿಸ್ಚಾರ್ಜ್ ಆಗಲು 3.15ಲಕ್ಷ ಹಣವನ್ನು ಹೊಂದಿಸಬೇಕಾಗಿತ್ತು. ರೋಗಿಯ ಕುಟುಂಬಸ್ಥರು ಮತ್ತು ಸ್ನೇಹಿತರನ್ನು ಸಂಪರ್ಕಿಸಿ ಸುಮಾರು 2.25 ಲಕ್ಷ ಹಣವನ್ನು ಸಂಗ್ರಹಿಸುತ್ತಾರೆ. ಮತ್ತೂ ದೊಡ್ಡ ಮೊತ್ತ ಬೇಕಾಗಿತ್ತು. ನೌಷಾದ್ ಮತ್ತು ಇತರರು ಆ ಉಳಿದ ಮೊತ್ತವನ್ನು ಭರಿಸಿ ರೋಗಿಯನ್ನು ಆಸ್ಪತ್ರೆಯಿಂ ಡಿಸ್ಚಾರ್ಜ್ ಮಾಡುತ್ತಾರೆ.

      ನೌಶಾದ್ ಮತ್ತು  ನದ್ವಿಯವರು ಲಕ್ಷ್ಮೇಶ್ವರ SKSSF ಸಕ್ರಿಯ ಕಾರ್ಯಕರ್ತರಾದ ಆಬಿದ್‌ರವರ ಮೂಲಕ 
ದೂದ್ ನಾನಾ ಜಬ್ಬಾರ್ ಉಸ್ತಾದ್ ಮೆಮೋರಿಯಲ್  ಆಂಬುಲೆನ್ಸ್ ಮೂಲಕ ರೋಗಿಯನ್ನು ಊರಿಗೆ ಕಳುಹಿಸಿ ಕೊಡುತ್ತಾರೆ. ಅರಫಾ ಉಪವಾಸ ಹಾಗೂ ಹಬ್ಬದ ಗಡಿಬಿಡಿಯಲ್ಲೂ ಎಸ್‌ಕೆಎಸ್‌ಎಸ್‌ಎಫ್‌ ಕಾರ್ಯಕರ್ತರ ಈ ಮಾನವೀಯ ಸೇವೆ ಹಬ್ಬಾಚರಣೆಗೆ ಇನ್ನಷ್ಟೂ ಮೆರುಗು ನೀಡಿತ್ತು. ಈ ಮಾನವೀಯ ಸೇವೆಗೆ ಕುಟುಂಬಸ್ಥರು ಧನ್ಯತೆ ವ್ಯಕ್ತಪಡಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ