ಸುಹೈಲ್ ಖಂದಕ್ ಪ್ರಕರಣ: ಆಸ್ಪತ್ರೆಯ ವಿರುದ್ಧ ಕೇಸು ದಾಖಲಿಸಲು ಮುಸ್ಲಿಂ ಒಕ್ಕೂಟ ಒತ್ತಾಯ

ಸುಹೈಲ್ ಖಂದಕ್ ಪ್ರಕರಣ: ಆಸ್ಪತ್ರೆಯ ವಿರುದ್ಧ ಕೇಸು ದಾಖಲಿಸಲು ಮುಸ್ಲಿಂ ಒಕ್ಕೂಟ ಒತ್ತಾಯ

ಮಂಗಳೂರು: ಸಾಮಾಜಿಕ ಹೋರಾಟಗಾರ, ಯುವ ಕಾಂಗ್ರೆಸ್‌ ಮುಖಂಡ ಸುಹೈಲ್‌ ಖಂದಕ್‌ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ತೀವೃವಾಗಿ ಖಂಡಿಸುತ್ತದೆ ಎಂದು ಮಾಜಿ ಮೇಯರ್‌ ಅಶ್ರಫ್ ತಿಳಿಸಿದರು.

      ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಂದೇ ಮನೆಯ ಇಬ್ಬರು ಮೃತ ಪಟ್ಟಿದ್ದು, ಆಸ್ಪತ್ರೆಯ ಆಡಳಿತವು ದೊಡ್ಡ ಮೊತ್ತದ ಬಿಲ್‌ ಗಾಗಿ ಈ ಮೃತದೇಹಗಳನ್ನು ಒತ್ತೆಯಾಗಿಟ್ಟುಕೊಂಡಿತ್ತು. ಇದರ ವಿರುದ್ಧ ಯುವ ನಾಯಕ, ಹೋರಾಟಗಾರ  ಸುಹೈಲ್‌ ಖಂದಕ್‌ ಸಂತ್ರಸ್ತ ಬಡ ಕುಟುಂಬದ ಪರ ಧ್ವನಿ ಎತ್ತಿದ್ದರು. ಇದಕ್ಕಾಗಿ ಅವರ ವಿರುದ್ದ ಪ್ರಕರಣ ದಾಖಲಿಸಿ, ಬಂಧಿಸಿರುವುದು ಖಂಡನೀಯ.

      ಆಸ್ಪತ್ರೆಯ ಕಾರ್ಯವೈಖರಿ ಸರಕಾರದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಸರಕಾರವು ಇತ್ತೀಚೆಗೆ ಹೊರಡಿಸಿದಂತೆ ಆಸ್ಪತ್ರೆಯ ಬಿಲ್‌ ಗಾಗಿ ಮೃತದೇಹಗಳನ್ನು ಒತ್ತೆಯಾಗಿ ಇಟ್ಟುಕೊಳ್ಳುವಂತಿಲ್ಲ. ಅಂತಹ ಪ್ರಕರಣ ಕಂಡುಬಂದರೆ ಪ್ರಕರಣ ದಾಖಲಿಸಲು ಸೂಚಿಸಿತ್ತು. ಆದರೆ ಇಲ್ಲಿ ನ್ಯಾಯದ ಪರ ಧ್ವನಿ ಎತ್ತಿದ ಯುವ ನಾಯಕನ್ನೇ ಬಂಧಿಸಿದೆ ಎಂದು ಅಶ್ರಫ್‌ ಆರೋಪಿಸಿದರು.

      ಆಸ್ಪತ್ರೆಯ ಆಡಳಿತವು ಒಂದೇ ಮನೆಯ ಇಬ್ಬರು ಸಾವೀಗೀಡಾಗಿದ್ದು ಅತ್ಯಂತ ದುಃಖದ ಸಮಯದಲ್ಲೂ ಹಣಕ್ಕಾಗಿ ಅಮಾನವೀಯತೆಯಿಂದ ವರ್ತಿಸಿದೆ. ಆಸ್ಪತ್ರೆಯ ವಿರುದ್ದ ಪೋಲೀಸರು ಸಾರ್ವಜನಿಕ ಹಿತಾಸಕ್ತಿಯಿಂದ ಸ್ವಯಂ ಕೇಸು ದಾಖಲಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ