ಸಹಚಾರಿ ನಿಧಿ ಸಂಗ್ರಹಣ ಯಶಸ್ಸುಗೊಳಿಸಲು ಸಾರ್ವಜನಿಕರಲ್ಲಿ ಮನವಿ: ಸಯ್ಯಿದ್ ಅಮೀರ್ ತಂಙಳ್

ಸಹಚಾರಿ ನಿಧಿ ಸಂಗ್ರಹಣ ಯಶಸ್ಸುಗೊಳಿಸಲು ಸಾರ್ವಜನಿಕರಲ್ಲಿ ಮನವಿ: ಸಯ್ಯಿದ್ ಅಮೀರ್ ತಂಙಳ್

ಮಂಗಳೂರು: ಎಪ್ರಿಲ್ 16 ರ ಸಹಚಾರಿ ನಿಧಿ ಸಂಗ್ರಹಣಾ ಕಾರ್ಯವನ್ನು ಯಶಸ್ಸು ಗೊಳಿಸಿ ಕೊಡುವಂತೆ ಎಸ್ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
      ಪ್ರತೀ ವರ್ಷ ರಂಝಾನಿನ ಮೊದಲ ಶುಕ್ರವಾರವನ್ನು ಸಹಚಾರಿ ನಿಧಿ ಸಂಗ್ರಹಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಹೀಗೆ ಸಂಗ್ರಹಿಸಿದ ಹಣವನ್ನು ಒಳಗಿಂದೊಳಗೆ ನೋವನ್ನು ನುಂಗಿ ನಮ್ಮೆದುರು ನಗು ಮುಖವನ್ನು ತೋರುವ ಅದೆಷ್ಟೋ ಮಂದಿಗೆ ಹಂಚುವ ಮೂಲಕ ಅವರ ಸಂಕಷ್ಟದಲ್ಲಿ ಸಹಚಾರಿ ರಿಲೀಫ್ ಸೆಲ್ ಭಾಗಿಯಾಗುತ್ತಿದೆ.
      ಸಹಚಾರಿ ರಿಲೀಫ್ ಸೆಲ್  ವಿವಿಧ ರೋಗಗಳಿಂದ ಬಳಲುತ್ತಿರುವ, ಆರ್ಥಿಕ ಸಂಕಷ್ಟದಲ್ಲಿರುವ ಸಾವಿರಾರು ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ಎಸ್ಕೆಎಸ್ಎಸ್ಎಫ್ ಕೇಂದ್ರ ಸಮಿತಿಯ ಒಂದು ವೈದ್ಯಕೀಯ ಸೇವಾ ಘಟಕ.
      ಯಾವುದೇ ಸದ್ದು-ಗದ್ದಲವಿಲ್ಲದೇ, ಪ್ರಚಾರದ ಹಂಗಿಲ್ಲದೆ ಕಳೆದ ಹದಿನೈದು ವರ್ಷಗಳಿಂದಲೂ ಸಹಚಾತಿಯು ಸಂಕಷ್ದಲ್ಲಿರುವ ರೋಗಿಗಳಿಗೆ ಸಹಾಯ ಹಸ್ತವನ್ನು ಚಾಚುತ್ತಾ ಬಂದಿದೆ. ಬರೇ ಕಳೆದ ಒಂದು ವರ್ಷದಲ್ಲೇ 770 ಡಯಾಲಿಸಿಸ್ ರೋಗಿಗಳು, 747 ಕ್ಯಾನ್ಸರ್ ರೋಗಿಗಳು, 981 ಹೃದಯ ರೋಗಿಗಳು, 294 ರಸ್ತೆ ಅಪಘಾತ ಸಂತ್ರಸ್ತರು ಮತ್ತು 628 ಇತರ ರೋಗಿಗಳಿಗೆ ಆರ್ಥಿಕ ನೆರವು ನೀಡಿತು.  ಕೋವಿಡ್ 19 ರ ಭಾಗವಾಗಿ ಲಾಕ್ ಡೌನ್ ಘೋಷಿಸಿದಾಗ, ತೊಂದರೆಯಲ್ಲಿರುವ 1,044 ಮೂತ್ರಪಿಂಡ ರೋಗಿಗಳಿಗೆ ವಿಶೇಷ ಹಣವನ್ನು ನೀಡಲಾಯಿತು.  ಕೋವಿಡ್ ಅವಧಿಯಲ್ಲಿ, ಉದ್ಯೋಗ ಕಳೆದುಕೊಂಡು ಹಿಂದಿರುಗಿದ 97 ವಲಸಿಗರಿಗೆ ಆರ್ಥಿಕ ನೆರವು ನೀಡಲಾಯಿತು.  ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ವಿಜಯಾ ಸ್ವಯಂಸೇವಕರು ಅಗತ್ಯವಿರುವ ರೋಗಿಗಳಿಗೆ ನಿಯಮಿತವಾಗಿ ಔಷಧಿಗಳನ್ನು ವಿತರಿಸುತ್ತಿದ್ದಾರೆ.  ಸುಮಾರು 100 ಆಯ್ದ ಡಯಾಲಿಸಿಸ್ ರೋಗಿಗಳಿಗೆ ನಿಯಮಿತವಾಗಿ ವಿಶೇಷ ಆರ್ಥಿಕ ನೆರವು ನೀಡಲಾಗುತ್ತಿದೆ.  ಪ್ರಸ್ತುತ, 1000 ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ.
      ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಮುಂಭಾಗದಲ್ಲಿ ಸಹಚಾರಿ ಸಂಸ್ಥೆಗೆ ಸ್ವಂತ ಕಟ್ಟಡವನ್ನು ಖರೀದಿಸಿ ಸಹಚಾರಿ ಸೆಂಟರ್ ಮುಖಾಂತರ ಸೇವೆಯನ್ನು ಪ್ರಾರಂಭಿಸಲು ಸಾಧ್ಯವಾಗಿದೆ. ಕೋಝಿಕೋಡ್ ಮಾವೂರ್ ಬಳಿ ಚೂಲೂರ್ ಎಂ.  ವಿ.  ಆರ್ ಕ್ಯಾನ್ಸರ್ ಕೇಂದ್ರದ ಸಮೀಪದಲ್ಲಿ ಸಹಚಾರಿ ಸೆಂಟರ್ ಆರಂಭಿಸಲು 20 ಸೆಂಟ್ಸ್ ಸ್ಥಳ ಲಭಿಸಿದೆ.  ಅನೇಕ ಕ್ಯಾನ್ಸರ್ ರೋಗಿಗಳು ಬರುವ ಆಸ್ಪತ್ರೆಯ ಆವರಣದಲ್ಲಿ ಸಹಚಾರಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.  ಪ್ರಾರ್ಥನಾ ಮಂದಿರ, ವಸತಿ ನಿಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಯ್ಯಿತ್ ಸ್ನಾನ ಸೌಕರ್ಯ ಮತ್ತು ಕೀಮೋಥೆರಪಿಗಾಗಿ ಬರುವವರಿಗೆ ವಿಶ್ರಾಂತಿ ಕೇಂದ್ರಗಳಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ಎಸ್ಕೆಎಸ್ಎಸ್ಎಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಕಾಸಿಂ ದಾರಿಮಿ ಮಾಹಿತಿ ನೀಡಿದರು.
      ಇದೇ ವೇಳೆ ದ.ಕ.ಜಿಲ್ಲೆಯಲ್ಲೂ ಪ್ರತೀ ವರ್ಷ ನೂರಾರು ರೋಗಿಗಳಿಗೆ ಸಹಚಾರಿ ಮೂಲಕ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಕ್ರಮಬದ್ಧವಾಗಿ ಅರ್ಜಿ ಸಲ್ಲಿಸಿದ  ಪ್ರತಿಯೊಬ್ಬ ರೋಗಿಗೂ ಪರಿಶೀಲನೆಯಂತೆ ಅಗತ್ಯ ನೆರವು ನೀಡಲಾಗಿದೆ. ಈಗ ಸಹಚಾರಿ ಅರ್ಜಿ ಸಲ್ಲಿಸುವಿಕೆ ಕಂಪ್ಯೂಟರೀಕರಣಗೊಳಿಸಲಾಗಿದ್ದು ಮತ್ತಷ್ಟೂ ಪಾರದರ್ಶಕ ಮತ್ತು ನಿಖರ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿದೆ ಎಂದು ದ.ಕ.ಜಿಲ್ಲಾ ಸಹಚಾರಿ ಅಧ್ಯಕ್ಷ ರಫೀಕ್ ಫೈಝಿ ಮತ್ತು ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ ತಿಳಿಸಿದರು.
     ತಮ್ಮೆಲ್ಲರ ಸಹಾಯ ಸಹಕಾರದಿಂದ ಕಳೆದ ಬಾರಿ ಕೋವಿಡ್ ಸಂಕಷ್ಟಗಳ ಮಧ್ಯೆಯೂ ನಮ್ಮ ಜಿಲ್ಲೆಯಲ್ಲಿ ದಾಖಲೆಯ ನಿಧಿ ಸಂಗ್ರಹ ಸಾಧ್ಯವಾಗಿದೆ. ಈ ಬಾರಿಯೂ ನಮ್ಮ ಕಾರ್ಯಕರ್ತರು ಇಂದಿನ ಜುಮಾ ದಿವಸ ಮಸೀದಿ ಮುಂಭಾಗ, ಸಾರ್ವಜನಿಕ ಸ್ಥಳ ಮತ್ತು ಮನೆ ಮನೆ ಭೇಟಿಯಾಗಿ  ಸಾರ್ವಜನಿಕರನ್ನು ಸಂಪರ್ಕಿಸದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶಾಲ ಹೃದಯದಿಂದ ಅವರೊಂದಿಗೆ ಸಹಕರಿಸಿ ಸಹಚಾರಿ ನಿಧಿ ಸಂಗ್ರಹವನ್ನು ಯಶಸ್ಸುಗೊಳಿಸಬೇಕು ಎಂದು ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಕೋಶಾಧಿಕಾರಿ ಹನೀಫ್ ಧೂಮಳಿಕೆ, ವರ್ಕಿಂಗ್ ಕಾರ್ಯದರ್ಶಿ ಆರಿಫ್ ಬಡಕಬೈಲ್, ಎಸ್ಕೆ ಎಸ್ಎಸ್ಎಫ್ ಕರ್ನಾಟಕ ರಾಜ್ಯಾಧ್ಯಕ್ ಅನೀಸ್ ಕೌಸರಿ, ಸಹಚಾರಿ ಜಿಲ್ಲಾಧ್ಯಕ್ಷ ರಫೀಕ್ ಫೈಝಿ, ಕಾರ್ಯದರ್ಶಿ ಜಾಬೀರ್ ಫೈಝಿ ಬನಾರಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕರು ನೇರವಾಗಿ ಬ್ಯಾಂಕ್ ಖಾತೆಗೂ ಜಮಾ ಮಾಡಬಹುದು.ಸಹಚಾರಿ ರಿಲೀಫ್ ಸೆಲ್ ಬ್ಯಾಂಕ್ ವಿವರ:

Name: Sahachari Relief Cell
A/C No. 67045362268
Bank: SBI
Branch: Ani Hall, Khozhikkod
IFSC: SBIN0070301

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ