ಸ್ವಾತಂತ್ರ್ಯ ಸಮರ ಚರಿತ್ರೆಯ ವಕ್ರೀಕರಣ ಕೈ ಬಿಡಬೇಕು: ಸಮಸ್ತ ಎಚ್ಚರಿಕೆ

ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯು (Indian Council of Historical Research), ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದ್ದು, ಇಂತಹ  ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲೆಮಾ ಕೇಂದ್ರ ಮುಶಾವರ ಸಮಿತಿ ಸಭೆ ಒತ್ತಾಯಿಸಿದೆ.

ಸ್ವಾತಂತ್ರ್ಯ ಸಮರ ಚರಿತ್ರೆಯ ವಕ್ರೀಕರಣ ಕೈ ಬಿಡಬೇಕು: ಸಮಸ್ತ ಎಚ್ಚರಿಕೆ

ಚೇಳಾರಿ: ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯು (Indian Council of Historical Research), ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದ್ದು, ಇಂತಹ  ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲೆಮಾ ಕೇಂದ್ರ ಮುಶಾವರ ಸಮಿತಿ ಸಭೆ ಒತ್ತಾಯಿಸಿದೆ.

      ವಾರಿಯನ್‌ಕುನ್ನತ್ ಕುಂಞಹ್ಮದ್ ಹಾಜಿ ಮತ್ತು ಅಲಿ ಮುಸ್ಲಿಯಾರ್ ಸೇರಿದಂತೆ 387 ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ತೆಗೆದುಹಾಕಲು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ನೇಮಿಸಿದ ಸಮಿತಿಯ ಶಿಫಾರಸನ್ನು ತಿರಸ್ಕರಿಸಬೇಕು ಎಂದು ಸಮಸ್ತ ಮುಶಾವರ ಆಗ್ರಹಿಸಿದೆ.

      1921ರ ಮಲಬಾರ್‌ ಸಂಗ್ರಾಮವನ್ನು ಭಾರತೀಯ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲೇ ಅವಿಸ್ಮರಣೀಯ ಘಟನೆ ಎಂದು ದಾಖಲಿಸಲ್ಪಟ್ಟ ಚರಿತ್ರೆಕಾರರ ದಾಖಲೆಗಳನ್ನು ಮುಕ್ಕಾಲು ಶತಮಾನಗಳ ನಂತರ  ತಿದ್ದುಪಡಿ ಮಾಡುವ ಕ್ರಮವು ಇತಿಹಾಸದ ವಿರುದ್ಧದ ಮಹಾಪಾಪ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮುಸ್ಲಿಮರ ಪಾತ್ರವನ್ನು ಅಳಿಸುವ ಪ್ರಯತ್ನ ಎಂದು ಸಭೆ ತೀರ್ಮಾನಿಸಿತು.

      ಪರಕೀಯರ ಆಡಳಿತದ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ವೀರ ದೇಶಭಕ್ತರನ್ನು ಮುಂದಿನ ಪೀಳಿಗೆ ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುವಂತಾಗಬೇಕು. ಇತಿಹಾಸಕಾರರು, ರಾಜಕೀಯ, ಸಾಮಾಜಿಕ, ಸಾಮುದಾಯಿಕ ನೇತಾರರು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ, ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯು ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ತಿದ್ದುವ ಪ್ರಯತ್ನದಿಂದ ಹಿಂದೆ ಸರಿಯುವಂತೆ ಮಾಡಬೇಕು ಸಮಸ್ತ ಮುಶಾವರ ಆಗ್ರಹಿಸಿದೆ

      ಸಮಸ್ತ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅಧ್ಯಕ್ಷತೆ ವಹಿಸಿದ್ದರು.  ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಅಲಿಕುಟ್ಟಿ ಮುಸ್ಲಿಯಾರ್ ಸ್ವಾಗತಿಸಿದರು.

      ಯು.ಎಂ.ಅಬ್ದುರಹ್ಮಾನ್ ಮುಸ್ಲಿಯಾರ್, ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್, ಕೆ.ಟಿ. ಹಂಸ ಮುಸ್ಲಿಯಾರ್, ಕೆ.ಪಿ.ಸಿ ತಂಙಳ್ ವಲ್ಲಪುಳ, ಎಂ.ಪಿ. ಕುಂಞಿ‌ ಮುಹಮ್ಮದ್ ಮುಸ್ಲಿಯಾರ್ ನೆಲ್ಲಾಯ, ಪಿ.ಕೆ.ಮೂಸಕುಟ್ಟಿ ಹಜರತ್, ಟಿ.ಎ.ಇಬ್ರಾಹಿಂ ಕುಟ್ಟಿ ಮುಸ್ಲಿಯಾರ್, ಮಾಣಿಯೂರು ಅಹ್ಮದ್ ಮುಸ್ಲಿಯಾರ್, ಕೆ. ಹೈದರ್ ಫೈಝಿ ಪಣಂಙಾಂಙರ, ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ ಕೂರಿಯಾಡ್, ಎಂ.ಮೊಯಿದಿನ್ ಕುಟ್ಟಿ ಫೈಝಿ ವಾಕೋಡ್, ಕೆ.ಉಮರ್ ಫೈಝಿ ಮುಕ್ಕಂ, ಎ.ವಿ.ಅಬ್ದುರಹ್ಮಾನ್ ಮುಸ್ಲಿಯಾರ್ ನಂದಿ, ಕೆ.ಕೆ.ಪಿ.ಅಬ್ದುಲ್ಲಾ ಮುಸ್ಲಿಯಾರ್, ಇ.ಎಸ್.ಹಸನ್ ಫೈಝಿ, ಐ.ಬಿ.ಉಸ್ಮಾನ್‌ ಫೈಝಿ, ಮಾಹಿನ್ ಮುಸ್ಲಿಯಾರ್ ತೊಟ್ಟಿ, ಎಂ.ಪಿ.ಮುಸ್ತಫಲ್‌ ಫೈಝಿ, ಎನ್. ಕೆ.ಅಬ್ದುಲ್ ಖಾದಿರ್ ಮುಸ್ಲಿಯಾರ್ ಪೈಂಗನ್ನಿಯೂರ್, ಬಿ.ಕೆ.ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ ಮತ್ತು ಕಾಟೇರಿ ಮುಹಮ್ಮದ್ ಮುಸ್ಲಿಯಾರ್ ಭಾಗವಹಿಸಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ