ಸ್ವೇಚ್ಛಾಚಾರ: ಮಂಗಳೂರು ಕಮಿಷನರ್‌ ಮೂಗುದಾರ

ಸ್ವೇಚ್ಛಾಚಾರ: ಮಂಗಳೂರು ಕಮಿಷನರ್‌ ಮೂಗುದಾರ

ಮಂಗಳೂರು: ರಾಷ್ಟೀಯ ಹೆದ್ದಾರಿ ಬದಿಯಲ್ಲಿ ತಡ ರಾತ್ರಿ ಮೋಜು ಮಾಸ್ತಿ ಮಾಡುತ್ತಿದ್ದ ಆರು ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ ರವರು ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ತಡ ರಾತ್ರಿ ಹೆದ್ದಾರಿ 66 ರ ಉಚ್ಚಿಲ ಬಸ್ ನಿಲ್ದಾಣದಲ್ಲಿ ಆರು ಮಂದಿ ಮಧ್ಯೆ ಸೇವಿಸಿ ಪಾರ್ಟಿ ಮಾಡುತ್ತಿರುವುದನ್ನು ಗಮನಿಸಿದ ಆಯುಕ್ತರು ಅವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರದ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿರುವ ಶಶಿ ಕುಮಾರ್  ಸಾರ್ವಜಿನಿಕ ಸ್ಥಳಗಳಲ್ಲಿ ತಡರಾತ್ರಿ ವಿನಾಃಕಾರಣ ಸುತ್ತಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತಿದ್ದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗುತ್ತಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ