ಸುಳ್ಯ ರೇಂಜ್: ತನ್'ಶೀತ್ ವಿಶೇಷ ಸಭೆ

ಸುಳ್ಯ ರೇಂಜ್: ತನ್'ಶೀತ್ ವಿಶೇಷ ಸಭೆ

ಸುಳ್ಯ, ಡಿಸೆಂಬರ್27: ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸಾ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ತನ್'ಶೀತ್ - 2020  ರೇಂಜ್ ಮಟ್ಟದ ವಿಶೇಷ ಸಭೆಯು ಡಿಸೆಂಬರ್ 22 ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಸುಳ್ಯ ಗ್ರಾಂಡ್ ಪರಿವಾರ್ ಹಾಲ್ ನಲ್ಲಿ ನಡೆಯಿತು. ಬೆಳ್ಳಾರೆ ಮುದರ್ರಿಸ್ ತಾಜುದ್ದೀನ್ ರಹ್ಮಾನಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ರೇಂಜ್ ಮದ್ರಸಾ ಮ್ಯಾನೇಜ್ ಮೆಂಟ್ ಅಧ್ಯಕ್ಷರಾದ ತಾಜ್ ಮುಹಮ್ಮದ್ ಸಂಪಾಜೆ ವಹಿಸಿದ್ದರು. ಅಬ್ದುರ್ರಝಾಕ್ ಮುಸ್ಲಿಯಾರ್ ಅಜ್ಜಾವರ ಖಿರಾಅತ್ ಪಠಿಸಿದರು. ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ತಾಜುದ್ದೀನ್ ರಹ್ಮಾನಿಯವರು ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಪ್ರಾಸ್ತಾವಿಕ ಭಾಷಣ ಮಾಡುತ್ತಾ ಲಾಕ್ ಡೌನ್ ಸಮಯದಲ್ಲೂ ರೇಂಜ್ ಸಮಿತಿ ಮತ್ತು ಮದ್ರಸಾ ಅಧ್ಯಾಪಕರು ಸಲ್ಲಿಸಿದ ಸೇವೆಯನ್ನು ವಿವರಿಸಿದರು.

ಸಮಸ್ತ ವಿದ್ಯಾಭ್ಯಾಸ ಮಂಡಳಿ ಮುಫತ್ತಿಷರಾದ ಬಹು: ಖಾಸಿಂ ಮುಸ್ಲಿಯಾರ್ ವಿಷಯ ಮಂಡನೆ ನಡೆಸುತ್ತಾ ಕೋವಿಡ್ - 19 ರ ಸಂದಿಗ್ಧ ಘಟ್ಟದಲ್ಲೂ ವಿದ್ಯಾಭ್ಯಾಸ ಮೊಟಕುಗೊಳ್ಳದಿರಲು ಸಮಸ್ತ ನಿರ್ವಹಿಸಿದ ಸ್ತುತ್ಯರ್ಹ ಸೇವೆಯನ್ನು ವಿವರಿಸಿದರು.
ಎಸ್. ಎಂ. ಎಫ್. ಸುಳ್ಯ ವಲಯ ಅಧ್ಯಕ್ಷರಾದ ಕತ್ತರ್ ಇಬ್ರಾಹೀಂ ಹಾಜಿ ಶುಭ ಹಾರೈಸಿದರು. SYS  ಸುಳ್ಯ ಅಧ್ಯಕ್ಷರಾದ ಹಮೀದ್ ಹಾಜಿ ಸುಳ್ಯ, ರೇಂಜ್ ಕೋಶಾಧಿಕಾರಿ ಹಸೈನಾರ್  ಹಾಜಿ ಧರ್ಮತ್ತಣ್ಣಿ  ಸಹಿತ ಹಲವು ನೇತಾರರು ಉಪಸ್ಥಿತರಿದ್ದರು. ಶಮೀಂ ಅರ್ಶದಿ ಸ್ವಾಗತಿಸಿ ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ಬಶೀರ್ ಯು. ಪಿ. ಬೆಳ್ಳಾರೆ ವಂದಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ