ಸುಳ್ಯ: ಈಜಾಡಲು ಹೊಳೆಗೆ ಇಳಿದಿದ್ದ ಯುವಕರಿಬ್ಬರು ನೀರಲ್ಲಿ ಮುಳುಗಿ ಸಾವು

ಸುಳ್ಯ: ಈಜಾಡಲು ಹೊಳೆಗೆ ಇಳಿದಿದ್ದ ಯುವಕರಿಬ್ಬರು ನೀರಲ್ಲಿ ಮುಳುಗಿ ಸಾವು

ಸುಳ್ಯ : ಇಲ್ಲಿನ ಪಯಸ್ವಿನಿ ಹೊಳೆಗೆ ಈಜಲು ಬಂದಿದ್ದ ಯುವಕರ ಪೈಕಿ ಯುವಕರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

      ಪುತ್ತೂರಿನ ಕೌಡಿಚ್ಚಾರು ಪರಿಸರದ ಆರು ಯುವಕರು ಕಾರಿನಲ್ಲಿ ಸುಳ್ಯಕ್ಕೆ ಬಂದು ಓಡಬಾಯಿ ತೂಗು ಸೇತುವೆ ಬಳಿ ಕಾರು ನಿಲ್ಲಿಸಿ ದೊಡೇರಿಯವರೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಈಜಲೆಂದು ಇಳಿದಿದ್ದರು. ಅವರಲ್ಲೋರ್ವ ನೀರುಪಾಲಾದಾಗ ರಕ್ಷಿಸಲು ಹೋದ ಮತ್ತೊಬ್ಬ ಕೂಡಾ ನೀರಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.

      ಕೌಡಿಚ್ಚಾರಿನ ಜಿತೇಶ್ ಹಾಗೂ ಪ್ರವೀಣ್ ಮೃತಪಟ್ಟ ಯುವಕರು.

      ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಸರಕಾರಿ ಆಸ್ಪತ್ರೆಗೆ ತರಲಾಯಿತು. ಮೃತ ಪ್ರವೀಣ್ ಕೌಡಿಚಾರಿನ ಅಂಬಟೆಮೂಲೆ ಕೃಷ್ಣಪ್ಪ ನಾಯಕ್ ಮಗನಾಗಿದ್ದು , ಜಿತೇಶ್ ದೇರಳಿ ನಿವಾಸಿ ನಾರಾಯಣ ಅವರ ಪುತ್ರ. ಇವರಿಬ್ಬರೂ ಯಂತ್ರದಲ್ಲಿ ಕಾಡು ಕಡಿಯುವ ಕೆಲಸ ಮಾಡುತ್ತಿದ್ದು , ಶನಿವಾರ ಕೆಡ್ಡಸದ ಪ್ರಯುಕ್ತ ಕೆಲಸಕ್ಕೆ ರಜೆ ಇದ್ದುದರಿಂದ ಗೆಳೆಯರೊಂದಿಗೆ ಸುಳ್ಯಕ್ಕೆ ಬಂದಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ