ಸಾರ್ವಜನಿಕ ಸೇವೆಗಾಗಿ ಆಂಬುಲೆನ್ಸ್ ಲೋಕಾರ್ಪಣೆ : SKSSF ಕೈಕಂಬ ವಲಯ

ಗುರುಪುರ ಕೈಕಂಬ: SKSSF ಸ್ಥಾಪನಾ ದಿನದ ಅಂಗವಾಗಿ ಕೈಕಂಬ ವಲಯವು ಸಾರ್ವಜನಿಕ ಸೇವೆಗಾಗಿ ಸಜ್ಜುಗೊಂಡ ನೂತನ ಆಂಬುಲೆನ್ಸ್ ನ ಲೋಕಾರ್ಪಣೆ ಕಾರ್ಯವು ಫೆಬ್ರವರಿ 19 ರಂದು ಸಂಜೆ 4.00 ಗಂಟೆಗೆ ಗುರುಪುರ ಕೈಕಂಬ ಜಂಕ್ಷನ್ ನಲ್ಲಿ ನಡೆಯಲಿದೆ ಎಂದು ಕೈಕಂಬ ವಲಯ ಕಾರ್ಯದರ್ಶಿ ಆರಿಫ್ ಕಮ್ಮಾಜೆ ತಿಳಿಸಿದ್ದಾರೆ.
SKSSFನ ಉಪ ವಿಭಾಗವಾದ ವಿಖಾಯ ಹಾಗೂ ಸಹಚಾರಿ ಸರ್ವಜನಿಕರಂಗದಲ್ಲಿ ಜಾತಿ-ಮತಗಳ ಭೇಧವಿಲ್ಲದೆ ಸೇವೆಯನ್ನು ಸಲ್ಲಿಸುತ್ತಿದ್ದು ರೋಗಿಗಳು ಮತ್ತು ಗಾಯಾಳುಗಳ ತುರ್ತು ರವಾನೆಗೆ ಈ ಭಾಗದಲ್ಲಿ ಆಂಬುಲೆನ್ಸ್ ಸೇವೆ ಅತೀ ಅಗತ್ಯವಾಗಿತ್ತು. ಗ್ರಾಮೀಣ ಭಾಗದ ಜನರಿಗೆ ಸೇವೆಯನ್ನು ನೀಡುವ ಉದ್ಧೇಶದಿಂದ ಕಾರ್ಯಕರ್ತರ ಮತ್ತು ದಾನಿಗಳ ನೆರವಿನಿಂದ ಈ ಆಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಇದರ ಸೇವೆಯು ಎಲ್ಲಾ ಸಾರ್ವಜನಿಕರಿಗೆ ದಿನದ ಇಪ್ಪತ್ತ ನಾಲ್ಕು (24x7)ಗಂಟೆಯೂ ಲಭ್ಯವಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದು ಎಂದು SKSSF ಕೈಕಂಬ ವಲಯ ಅಧ್ಯಕ್ಷರಾದ ಜಮಾಲುದ್ದೀನ್ ದಾರಿಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ SKSSF ಜಿಲ್ಲಾಅಧ್ಯಕ್ಷರಾದ ಬಹು: ಸಯ್ಯದ್ ಅಮೀರ್ ತಂಙಳ್ ಕಿನ್ಯ ದುವಾ ನೆರವೇರಿಸಲಿದ್ದಾರೆ. ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮೌಲವಿ ಆಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೈಯಲಿದ್ದಾರೆ. ಕೈಕಂಬ ವಲಯ ಅಧ್ಯಕ್ಷ ಬಹು: ಜಮಾಲುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯಾಧ್ಯಕ್ಷರಾದ ಬಹು: ಅನೀಸ್ ಕೌಸರಿ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಅಲ್ಲದೆ ಇನ್ನಿತರ ಸಾಮಾಜಿಕ ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಆರೀಫ್ ಕಮ್ಮಾಜೆ ತಿಳಿಸಿದ್ದಾರೆ
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ