ಸರಪಾಡಿ ವಲಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಬಲಯೂರು ವಿಶ್ವನಾಥ ಪೂಜಾರಿ ಆಯ್ಕೆ

ಸರಪಾಡಿ ವಲಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಬಲಯೂರು ವಿಶ್ವನಾಥ ಪೂಜಾರಿ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಸರಪಾಡಿ ವಲಯ ಕಾಂಗ್ರೆಸ್‌ ನೂತನ ಅಧ್ಯಕ್ಷ ರಾಗಿ ಬಲಯೂರು ಶ್ರೀ ವಿಶ್ವನಾಥ ಪೂಜಾರಿ ಆಯ್ಕೆಯಾಗಿದ್ದಾರೆ.

      ಇತ್ತೀಚೆಗೆ ನಡೆದ ಸರಪಾಡಿ ವಲಯ ಸಮಿತಿ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಗಿದೆ.  ಬಂಟ್ವಾಳ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ  ಬೇಬಿ ಕುಂದರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

      ಸಬೆಯಲ್ಲಿ ಬಂಟ್ವಾಳ ಬ್ಲಾಕ್‌ ‌ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಯುವ ನೇತಾರ ಸುರೇಶ್ ಪೂಜಾರಿ, ‌ಝೊಹರ, ಜಿಲ್ಲಾ ಪಂಚಾಯತ್ ಸದಸ್ಯ ಪದ್ಮ ಶೇಖರ್ ಜೈನ್‌,  ಸರಪಾಡಿ ಗ್ರಾಮಪಂಚಾಯತಿ ಸದಸ್ಯರುಗಳು ಮತ್ತು ವಲಯ ಕಾರ್ಯಕರ್ತರು ಭಾಗವಹಿಸಿದ್ದರು.

      ಸರಪಾಡಿ ಗ್ರಾಮಪಂಚಾಯತ್ ಸದಸ್ಯ ವಿನ್ಸೆಂಟ್‌ ಪಿಂಟೊ ಸ್ವಾಗತಿಸಿದರು. ಉದ್ಯಮಿ ಸುರೇಶ್ ಶೆಟ್ಟಿ ‌ಹಾಲಾಡಿ ವಂದಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ