ಸರ್ಕಾರಿ ಪಾಲಿಟೆಕ್ನಿಕ್ ಕಾಮಗಾರಿಗೆ ಶಿಲಾನ್ಯಾಸ:  ಶಾಸಕ ರಾಜೇಶ್ ನಾಯ್ಕ್

ಸರ್ಕಾರಿ ಪಾಲಿಟೆಕ್ನಿಕ್ ಕಾಮಗಾರಿಗೆ ಶಿಲಾನ್ಯಾಸ:  ಶಾಸಕ ರಾಜೇಶ್ ನಾಯ್ಕ್
republicday728
republicday468
republicday234

ಬಂಟ್ವಾಳ. ಜನವರಿ 25:   ಬಂಟ್ವಾಳದ ಸರಕಾರಿ ಪಾಲಿಟೆಕ್ನಿಕ್ ನ ನೂತನ ಕಟ್ಟಡ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.

       ರೂ. 1.22 ಕೋ.ಅನುದಾನ ಮಂಜೂರಾಗಿದ್ದು, ಪ್ರಸ್ತುತ ಮಂಜೂರಾದ ಅನುದಾನದಲ್ಲಿ ಸುಮಾರು 7 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಳ್ಳಲಿದೆ. ಈ ಸಂಸ್ಥೆಯ ಅಭಿವೃದ್ಧಿಗೆ 10ಕೋ.ರೂ.ಗಳ ಯೋಜನೆ ತಯಾರಿಸಿ ಅನುಮೋದನೆಗಾಗಿ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಅದರ ಮಂಜೂರಾತಿಗಾಗಿ ಪ್ರಯತ್ನಿಸುತ್ತೇನೆ. ತನ್ನ ನಿಧಿಯಿಂದ ಇಲ್ಲಿನ ಗ್ರಂಥಾಲಯದ ಪುಸ್ತಕಕ್ಕೆ ಅನುದಾನ ನೀಡಲಾಗುವುದು. ಜತೆಗೆ ಕಾಲೇಜಿನ ಸಂಪರ್ಕ ರಸ್ತೆ, ಅತ್ಯಲ್ಪ ವೆಚ್ಚದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜೇಶ್‌ ನಾಯಕ್‌ ಹೇಳಿದರು. ಶಿಲಾನ್ಯಾಸ ಕಾರ್ಯಕ್ರಮದ ನಂತರ ಅವರು ಮಾತನಾಡುತ್ತಿದ್ದರು.
      ಪ್ರಾಂಶುಪಾಲ ಸಿ.ಜೆ.ಪ್ರಕಾಶ್ ಅವರು ಕಾಲೇಜಿನ ಪ್ರಯೋಗಾಲಯ, ಉಪನ್ಯಾಸಕರು ಹಾಗೂ ಇತರ ಸೌಕರ್ಯಗಳ ಕುರಿತು ವಿವರಿಸಿದರು. ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಲೋಕೋಪಯೋಗಿ ಇಲಾಖೆಯ ಷಣ್ಮುಗಂ, ಸಂಸ್ಥೆಯ ಕುಲಸಚಿವ ಒಫೀಲಿಯಾ ವಿ.ಡಿಸೋಜ, ವಿವಿಧ ವಿಭಾಗಗಳ ಮುಖ್ಯಸ್ಥರಾದ ದೇವರಾಜ್ ನಾಯ್ಕ್, ಉಷಾ ನಾಯ್ಕ್, ಶಾಮರಾಜ ಎನ್, ಸನತ್ ರಾಮ್ ಬಿ, ಉಪನ್ಯಾಸಕರು, ಇಂಜಿನಿಯರ್ ಗಳು ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ