ಸಮಸ್ತ 95ನೇ ವಾರ್ಷಿಕ: ಆತೂರು ಕ್ಲಸ್ಟರ್‌ ನಿಂದ ರಕ್ತದಾನ ಶಿಬಿರ

ರಕ್ತದಾನ ಶಿಬಿರ, ಅರೋಗ್ಯ ಜಾಗೃತಿಯಂತಹ ಕಾರ್ಯಕ್ರಮವನ್ನು ಮಾಡುತ್ತಿರುವ  ಎಸ್ಕೆಎಸ್ಎಸ್ಎಫ್ ಆತೂರು ಕ್ಲಸ್ಟರ್ ಶ್ಲಾಘನೀಯ. ಇಂತಹ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಪ್ರತಿ ಸಮುದಾಯದಲ್ಲಿ ನಡೆಯುವುದು ಅಗತ್ಯ ವಿದೆ ಎಂದು ರಾಮಕುಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಹೇಳಿದರು.

ಸಮಸ್ತ 95ನೇ ವಾರ್ಷಿಕ: ಆತೂರು ಕ್ಲಸ್ಟರ್‌ ನಿಂದ ರಕ್ತದಾನ ಶಿಬಿರ

ಆತೂರು, ಜೂನ್‌ 27: ರಕ್ತದಾನ ಶಿಬಿರ, ಅರೋಗ್ಯ ಜಾಗೃತಿಯಂತಹ ಕಾರ್ಯಕ್ರಮವನ್ನು ಮಾಡುತ್ತಿರುವ  ಎಸ್ಕೆಎಸ್ಎಸ್ಎಫ್ ಆತೂರು ಕ್ಲಸ್ಟರ್ ಶ್ಲಾಘನೀಯ. ಇಂತಹ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಪ್ರತಿ ಸಮುದಾಯದಲ್ಲಿ ನಡೆಯುವುದು ಅಗತ್ಯ ವಿದೆ ಎಂದು ರಾಮಕುಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಹೇಳಿದರು.

      ಅವರು ಆತೂರು ಬದ್ರಿಯಾ ಹಾಲ್ ನಲ್ಲಿ ಸಮಸ್ತ ಕೇರಳ ಜಮಿಯತುಲ್ ಉಲಮಾ 95ನೇ ವಾರ್ಷಿಕದ ಪ್ರಯುಕ್ತ ಎಸ್ಕೆಎಸ್ಎಸ್ಎಫ್ ಆತೂರು ಕ್ಲಸ್ಟರ್ ಸಮಿತಿ ಆಯೋಜಿಸಿದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರತಿನಿಧಿಯಾಗಿ ಕೊಯಿಲ ಹಾಗು ರಾಮಕುಂಜ ಲೆಕ್ಕಾಧಿಕಾರಿ ಎನ್. ಶೇಷಾದ್ರಿ, ಕೆ.ಪಿ.ಸಿ.ಸಿ ಕಿಸಾನ್ ಸಮಿತಿ ಪ್ರದಾನ ಕಾರ್ಯದರ್ಶಿ  ಹಾಗು ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಯತೀಶ್ ಕುಮಾರ್ ಬಾಣಡ್ಕ, ರಾಮಕುಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ ಮುಂತಾದ ಗಣ್ಯರು ಶಿಬಿರದಲ್ಲಿ ರಕ್ತದಾನ ಮಾಡಿದರು. ಶಿಬಿರದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಬಾಗಿತ್ವದಲ್ಲಿ ಒಟ್ಟು 109 ಯುನಿಟ್‌ ರಕ್ತ ಸಂಗ್ರಹಿಸಲಾಯಿತು.

      ಆತೂರು ರೇಂಜ್ ಕಾರ್ಯದರ್ಶಿ ಕೆ.ಎಂ.ಸಿದ್ದಿಕ್ ಫೈಝಿ ಕರಾಯ ಪ್ರಾಥನೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಕೆಎಸ್ಎಸ್ಎಫ್ ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ದಿಕ್ ನೀರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. 

      ಕೆಪಿಸಿಸಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಕೃಷ್ಣಪ್ಪ,  ಕೆಪಿಸಿಸಿ ಕಿಸಾನ್ ಸಮಿತಿ ಪ್ರದಾನ ಕಾರ್ಯದರ್ಶಿ ಹಾಗು ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಯತೀಶ್ ಕುಮಾರ್ ಬಾಣಡ್ಕ, ನೆಲ್ಯಾಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಆತೂರು ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಆದo, ಇಂಡಿಯನ್ ರೆಡ್ ಕ್ರಾಸ್ ನ ಡಾ|| ಜೆ ಎನ್ ಭಟ್ ಹಾಗು ಪ್ರವೀಣ್ ಕುಮಾರ್ ಕಾರ್ಯಕ್ರಮದಲ್ಲಿ ರಕ್ತದಾನದ ಮಹತ್ವದ ಕುರಿತಾಗಿ ಮಾತನಾಡಿದರು.

      ಬದ್ರಿಯಾ ಜುಮಾ ಮಸೀದಿ ಆತೂರು ಇದರ ಅಧ್ಯಕ್ಷ ಬಿ.ಕೆ. ಅಬ್ದುಲ್ ರಝಾಕ್, ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕುಮಾರ್, ಕೊಯಿಲ ಹಾಗು ರಾಮಕುಂಜ ಗ್ರಾಮ ಪಂಚಾಯತ್ ನ ಲೆಕ್ಕಾಧಿಕಾರಿ ಎನ್ ಶೇಷಾದ್ರಿ,  ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ನಜೀರ್ ಕೊಯಿಲ, ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಎಚ್.ಅಬ್ದುಲ್ ರಹಿಮಾನ್, ಕೊಯಿಲ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ಕೆ.ಎ.ಸುಲೈಮಾನ್, ಎಸ್ಕೆಎಸ್ಎಸ್ಎಫ್ ವಿಖಾಯ ದಕ್ಷಿಣ ಕನ್ನಡ ಜಿಲ್ಲಾ ಚೆಯರ್ಮಾನ್ ಇಸ್ಮಾಯಿಲ್ ತಂಙಳ್, ನಝೀರ್ ಕೊಯಿಲ, ಬಶೀರ್ ಮುಸ್ಲಿಯಾರ್, ಕುಂಡಾಜೆ ಜುಮಾ ಮಸೀದಿಯ ಖತೀಬ್ ಮುನೀರ್ ಅನ್ವರಿ, ಆತೂರು ರೇಂಜ್ ನ ಕೋಶಾಧಿಕಾರಿ ಬಿ.ಕೆ.ಅಬ್ದುಲ್ ಅಝೀಜ್, ಕುದ್ಲುರು ಜುಮಾ ಮಸೀದಿ ಅಧ್ಯಕ್ಷ ಕೆ.ವೈ. ಇಸ್ಮಾಯಿಲ್, ಪೊಡಿಕುಂಞಿ ನೀರಾಜೆ, ಆತೂರು ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ರಫೀಕ್ ಗಂಡಿಬಾಗಿಲು, ಉದ್ಯಮಿ ರಝಾಕ್ ಮುಬಾರಕ್, ಎಸ್ಕೆಎಸ್ಎಸ್ಎಫ್ ಶಾಖೆ ಅಧ್ಯಕ್ಷರಾದ ಬಿ.ಆರ್. ಅಬ್ದುಲ್ ಖಾದರ್, ಹಮೀದ್ ಕುಂಡಾಜೆ, ಅಶ್ರಫ್ ಕೊರೆಪದವು, ಇಸ್ಮಾಯಿಲ್ ಆತೂರುಬೈಲ್, ಇಸ್ಮಾಯಿಲ್ ಪಾಲ್ತಾಡಿ ಹಾಗೂ ಆಸೀಫ್ ಗಂಡಿಬಾಗಿಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

      ಅಝೀಜ್ ಪಾಲ್ತಾಡಿ, ಜೈನುದ್ದೀನ್ ಆತೂರು, ಉಮರುಲ್ ಫಾರೂಕ್.ಬಿ, ಅನ್ಸರ್ ನೀರಾಜೆ, ಮುನೀರ್ ಆತೂರು ಹಾಗು ಎಸ್ಕೆಎಸ್ಎಸ್ಎಫ್ನ  ಕಾರ್ಯಕರ್ತರು ಸಹಕರಿಸಿದರು.

      ರಾಝಿಕ್ ಆತೂರು ಸ್ವಾಗತಿಸಿ, ಝಕರಿಯಾ ಮುಸ್ಲಿಯಾರ್ ವಂದಿಸಿದರು. ರಫೀಕ್.ಜಿ ಕಾರ್ಯಕ್ರಮ ನಿರೂಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ