ಸಮಸ್ತ ಸ್ಪೆಷಲ್ ಪರೀಕ್ಷೆ: ಮಾಹಿತಿ ಮತ್ತು ವ್ಯವಸ್ಥೆಗಳು

ಪರೀಕ್ಷೆಯ ಪೋರ್ಟಲ್ ಗೆ ಪ್ರವೇಶಿಸಲು ಸಮಸ್ತದ  ಅಧಿಕೃತ ವೆಬ್‌ಸೈಟ್ https://www.samastha.info/ ಉಪಯೋಗಿಸಬೇಕು.

ಸಮಸ್ತ ಸ್ಪೆಷಲ್ ಪರೀಕ್ಷೆ: ಮಾಹಿತಿ ಮತ್ತು ವ್ಯವಸ್ಥೆಗಳು

(????️ಮುಫತ್ತಿಶ್  ಉಮರ್ ದಾರಿಮಿ ಸಾಲ್ಮರ)

2021 ಏಪ್ರಿಲ್ ಮೊದಲ ವಾರ ಭಾರತ ಮತ್ತು ವಿದೇಶ ರಾಷ್ಟ್ರಗಳಲ್ಲಿ ನಡೆಸಲಾದ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 'ಸೇ'  ಪರೀಕ್ಷೆ ಹಾಗೂ ಕೋವಿಡ್ -19 ಕಾರಣ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗಿರುವ ಸ್ಪೆಷಲ್ ಪರೀಕ್ಷೆ 2021 ಜೂನ್ 12, 13 (ಶನಿ, ಆದಿತ್ಯ) ದಿನಾಂಕಗಳಲ್ಲಿ ಕೆಳಗೆ ನೀಡಲಾದ ವೇಳಾಪಟ್ಟಿಯಂತೆ ನಡೆಯಲಿದೆ. ಕೋವಿಡ್-19 ನಿಯಂತ್ರಣದ  ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಆನ್ಲೈನ್ ಆಗಿ  ನಡೆಸಲಾಗುವುದು. 

 ಪರೀಕ್ಷಾ ವೇಳಾಪಟ್ಟಿ:
12-06-2021 ಶನಿವಾರ ಭಾರತೀಯ ಸಮಯ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯ ತನಕ 5ನೇ ತರಗತಿ - ಫಿಕ್ಹ್, ಏಳನೇ ತರಗತಿ- ಲಿಸಾನುಲ್ ಕುರ್'ಆನ್, ಹತ್ತನೇ ತರಗತಿ-ದುರೂಸುಲ್  ಇಹ್ಸಾನ್, ಪ್ಲಸ್ ಟು  ತರಗತಿ-ತಫ್ಸೀರ್, ಬೆಳಿಗ್ಗೆ 11.30 ರಿಂದ 12.30 ರ ತನಕ 5ನೇ ತರಗತಿ-ಲಿಸಾನುಲ್ ಕುರ್'ಆನ್,ತಜ್ವೀದ್ ಏಳನೇ ತರಗತಿ - ತಾರೀಖ್, ಹತ್ತನೇ ತರಗತಿ- ಫಿಖ್ಹ್, ಪ್ಲಸ್ ಟು ತರಗತಿ ದುರೂಸುಲ್ ಇಹ್ಸಾನ್, 

13-06-2021 ಆದಿತ್ಯವಾರ ಭಾರತೀಯ ಸಮಯ ಬೆಳಿಗ್ಗೆ 10 ಗಂಟೆಯಿಂದ 11:00 ಗಂಟೆಯ ತನಕ ಐದನೇ ತರಗತಿ-ಅಖೀದ, ಏಳನೇ ತರಗತಿ-ಫಿಖ್ಹ್, ಹತ್ತನೇ ತರಗತಿ- ತಫ್ಸೀರ್, ಪ್ಲಸ್ ಟು ತರಗತಿ-ಲಿಸಾನುಲ್ ಕುರ್'ಆನ್, ಬೆಳಿಗ್ಗೆ 11.30 ರಿಂದ 12 30 ತನಕ 5ನೇ ತರಗತಿ- ತಾರೀಖ್ ಅಖ್ಲಾಕ್, ಏಳನೇ ತರಗತಿ- ದುರೂಸುಲ್ ಇಹ್ಸಾನ್, ಹತ್ತನೇ ತರಗತಿ-ಲಿಸಾನುಲ್ ಕುರ್'ಆನ್, ಪ್ಲಸ್ ಟು ತರಗತಿ-ಫಿಖ್ಹ್. 

ಕುರ್'ಆನ್ ಪರೀಕ್ಷೆ: 13-06-2021 ಮಧ್ಯಾಹ್ನ ನಂತರ ಎರಡು ಗಂಟೆಗೆ ಮದರಸ ಸದರ್ ಮುಅಲ್ಲಿಂ ಅಥವಾ ಸದರ್ ಮುಅಲ್ಲಿಂ ನಿಯೋಜಿಸಿದ ಮುಅಲ್ಲಿಂ ವಾಟ್ಸಪ್ / ಗೂಗಲ್ ಮೀಟ್/ಟೆಲಿಗ್ರಾಂ ಮೊದಲಾದ ಸೋಶಿಯಲ್ ಮೀಡಿಯಾ ಉಪಯೋಗಪಡಿಸಿ ಕುರ್'ಆನ್ ಪರೀಕ್ಷೆ ನಡೆಸಿ ಮದರಸಾ ಸಮಿತಿಯ ಕಾಗದದಲ್ಲಿ ವಿದ್ಯಾರ್ಥಿಯ ರಿಜಿಸ್ಟರ್ ನಂಬರ್, ಹೆಸರು, ತರಗತಿ, ಅಂಕ ಮೊದಲಾದವು ದಾಖಲಿಸಿ ಸದರ್ ಮುಅಲ್ಲಿಂ  ದೃಢೀಕರಿಸಿ 15-06-2021ಕ್ಕೆ ಮುಂಚಿತವಾಗಿ 9658 600 900 ಎಂಬ ಕಚೇರಿ ವಾಟ್ಸಪ್ ನಂಬರಿಗೆ ಅಥವಾ samasthalayam@gmail.com ಎಂಬ ಇ-ಮೈಲಿಗೆ Pdf ಫೈಲಾಗಿ ಕಳುಹಿಸಬೇಕು.

'ಸೇ' ಪರೀಕ್ಷೆಗೆ ರಿಜಿಸ್ಟರ್ ಮಾಡಿದ ವಿದ್ಯಾರ್ಥಿಗಳು ಅವರು ಫೇಲಾದ ವಿಷಯದ ಸಮಯದಲ್ಲಿ ಮಾತ್ರ ಪರೀಕ್ಷೆಗೆ ಹಾಜರಾಗಬೇಕು.

ಸೂಚನೆಗಳು:
 1) ಪರೀಕ್ಷೆಯ ವೇಳಾಪಟ್ಟಿ ಮತ್ತು ಆನ್‌ಲೈನ್ ಸಂಬಂಧಿತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸಮಯೋಚಿತವಾಗಿ ತಿಳಿಸಬೇಕು. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಹಾಜಾರಾಗುವುದನ್ನು ಖಚಿತಪಡಿಸಿಕೊಳ್ಳಬೇಕು.

 2) ಪರೀಕ್ಷಾರ್ಥಿಗಳು ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಬಳಸಿ ಪರೀಕ್ಷೆಯನ್ನು ಬರೆಯಬಹುದು.

 3) ಮದರಸ ಲಾಗಿನ್ ಆಗಿ ಹೊಸದಾಗಿ ನೋಂದಾಯಿತ ವಿದ್ಯಾರ್ಥಿಗಳ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿ  ಸದರ್ ಮುಅಲ್ಲಿಮರು ಅದನ್ನು ಮಕ್ಕಳಿಗೆ ಪಿಡಿಎಫ್ ಆಗಿ ಕಳುಹಿಸಬೇಕು ಅಥವಾ ಅದನ್ನು       ಪ್ರಿಂಟ್ ತೆಗೆದು ಕೊಡಬೇಕು. ಹಾಲ್ ಟಿಕೆಟ್‌ನ  ರಿಜಿಸ್ಟರ್ ಸಂಖ್ಯೆ ಮತ್ತು ಜನನ  ದಿನಾಂಕವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಆನ್ಲೈನ್ ಪರೀಕ್ಷೆಗೆ ಲಾಗಿನ್ ಆಗಬೇಕಾಗುತ್ತದೆ.  'ಸೇ' ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಸ್ತಿತ್ವದಲ್ಲಿರುವ ಹಾಲ್ ಟಿಕೆಟ್ ಸಾಕು.

 4) ಪರೀಕ್ಷೆಯ ಪೋರ್ಟಲ್ ಗೆ ಪ್ರವೇಶಿಸಲು ಸಮಸ್ತದ  ಅಧಿಕೃತ ವೆಬ್‌ಸೈಟ್ https://www.samastha.info/ ಉಪಯೋಗಿಸಬೇಕು.

 5) ರಿಜಿಸ್ಟರ್ ಸಂಖ್ಯೆ ಮತ್ತು ಜನನ ದಿನಾಂಕವನ್ನು ನೀಡುವ ಮೂಲಕ ಪರೀಕ್ಷೆಯ ಸಮಯದಲ್ಲಿ ಲಾಗಿನ್ ಮಾಡಿದರೆ ವಿದ್ಯಾರ್ಥಿಗಳ ಮಾಹಿತಿ  ಕಾಣುತ್ತದೆ.  ಪರೀಕ್ಷೆಯ ದಿನಾಂಕ, ವಿಷಯ ಮತ್ತು ನಿಗದಿಪಡಿಸಿದ   ಸಮಯವನ್ನು ಪ್ರತ್ಯೇಕವಾಗಿ ಅದರಲ್ಲಿ ಕಾಣಬಹುದು.  ಮತ್ತು ಕೆಳಗೆ ಪರೀಕ್ಷೆ ಸಂಬಂಧಿತ ಸೂಚನೆಗಳನ್ನು ಓದಬಹುದು.  ಪರೀಕ್ಷೆ ಪ್ರಾರಂಭಿಸುವ ಸಮಯವಾದರೆ ಮುಂದಿನ ಪುಟಕ್ಕೆ ಪ್ರವೇಶಿಸಿ ಪ್ರತಿ
 ಪ್ರಶ್ನೆಗಳಿಗೆ ಉತ್ತರಿಸಲು ಮೂರು ಆಯ್ಕೆಗಳಿರುತ್ತವೆ. ಅದರಲ್ಲಿ ಸರಿಯಾದುದನ್ನು ಮಾತ್ರ ಕ್ಲಿಕ್ ಮಾಡ ಬೇಕು.  ನಂತರದ ಎಲ್ಲಾ ಪ್ರಶ್ನೆಯೊಂದಿಗೆ ಅದೇ ರೀತಿ ಮಾಡಬೇಕು.

 6) ಆನ್‌ಲೈನ್ ಪರೀಕ್ಷೆಗೆ ಒಟ್ಟು ಒಂದು ಗಂಟೆ ಸಮಯ ನಿಗದಿಪಡಿಸಲಾಗಿದೆ.  ಸಮಯನಿಷ್ಠೆ ಪಾಲಿಸಿದರೆ ಮಾತ್ರ ಪರೀಕ್ಷೆಯನ್ನು ಸಮರ್ಥವಾಗಿ ಪೂರ್ಣಗೊಳಿಸಬಹುದು.  10 ಪ್ರಶ್ನೆಗಳಿಗೆ 4 ಅಂಕಗಳು ಮತ್ತು 20   ಪ್ರಶ್ನೆಗಳಿಗೆ 3 ಅಂಕಗಳು ಸೇರಿ ಒಟ್ಟು 100 ಅಂಕಗಳಾಗಿದೆ.  ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗಿ  ಫೈನಲ್ ಸಬ್ಮಿಟ್ ಮಾಡಿದರೆ ಅಥವಾ ಅನುಮತಿಸಲಾದ ಸಮಯ ಮುಗಿದರೆ  ಪರೀಕ್ಷೆ ಕೊನೆಗೊಳ್ಳುತ್ತದೆ.

 7) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಲಾಗಿನ್ ಸಮಯ, ಐಪಿ ವಿಳಾಸ ಮತ್ತು ಲಾಗಿನ್ ಮಾಡಿದ ಸಾಧನ ಸೇವ್ ಮಾಡಲಾಗುತ್ತದೆ.

 8) ಪರೀಕ್ಷೆಯ ವಿಧಾನವನ್ನು ಅರ್ಥಮಾಡಿಕೊಳ್ಳಲು 11-06-2021 ರಂದು ಭಾರತೀಯ ಸಮಯ ಬೆಳಿಗ್ಗೆ 10 ಗಂಟೆಗೆ ಟ್ರಯಲ್ ಪರೀಕ್ಷೆ ನಡೆಯಲಿದೆ.

 9) ವಿದೇಶದಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು  ಆಯಾ ದೇಶಗಳ  ಭಾರತೀಯ ಸ್ಟ್ಯಾಂಡರ್ಡ್ ಸಮಯದಂತೆ ನಿಯಮಿತವಾಗಿ ಪರೀಕ್ಷೆಗೆ ಹಾಜರಾಗಬೇಕು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ