ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ ಕಛೇರಿ ಸ್ಥಳಾಂತರ: ಇನ್ನು ಈ ಕಟ್ಟಡ ನೆನಪು ಮಾತ್ರ

1998ರಿಂದ ಚೇಳಾರಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಮಸ್ತ ಕೇರಳ  ಮತ ವಿದ್ಯಾಭ್ಯಾಸ ಬೋರ್ಡ್ ಕಛೇರಿಯನ್ನು ತಾತ್ಕಾಲಿಕ ಕಟ್ಟಡಕ್ಕೆ ವರ್ಗಾಯಿಸಲಾಗಿದ್ದು, ಇನ್ನು ಮುಂದೆ ಚೇಳಾರಿ ಮುಅಲ್ಲಿಂ ಅಡಿಟೋರಿಯಂನಲ್ಲಿ ಕಾರ್ಯಾಚರಿಸಲಿದೆ.

ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ ಕಛೇರಿ ಸ್ಥಳಾಂತರ: ಇನ್ನು ಈ ಕಟ್ಟಡ ನೆನಪು ಮಾತ್ರ

ಚೇಳಾರಿ: 1998ರಿಂದ ಚೇಳಾರಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಮಸ್ತ ಕೇರಳ  ಮತ ವಿದ್ಯಾಭ್ಯಾಸ ಬೋರ್ಡ್ ಕಛೇರಿಯನ್ನು ತಾತ್ಕಾಲಿಕ ಕಟ್ಟಡಕ್ಕೆ ವರ್ಗಾಯಿಸಲಾಗಿದ್ದು, ಇನ್ನು ಮುಂದೆ ಚೇಳಾರಿ ಮುಅಲ್ಲಿಂ ಅಡಿಟೋರಿಯಂನಲ್ಲಿ ಕಾರ್ಯಾಚರಿಸಲಿದೆ.

      ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಚೇಳಾರಿ ಕಛೇರಿಯನ್ನು ಕೆಡವಲಾಗುತ್ತಿದ್ದು, ಹೊಸ ಕಛೇರಿಯು ನಿರ್ಮಾಣವಾಗುವವರೆಗೆ ಮುಅಲ್ಲಿಂನ ಅಡಿಟೋರಿಯಂನಲ್ಲಿ ಕಾರ್ಯಾಚರಿಸಲಾಗುವುದು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ರವರ ದುಆದೊಂದಿಗೆ ತಾತ್ಕಾಲಿಕ ಕಟ್ಟಡದಲ್ಲಿ ವ್ಯವಸ್ಥೆ ಗೊಳಿಸಿದ ಕಛೇರಿಯಲ್ಲಿ ಕೆಲಸ ಕಾರ್ಯಗಳು ಆರಂಭಗೊಂಡವು.

      ಸಮಸ್ತ ಪ್ರಧಾನ ಕಾರ್ಯದರ್ಶಿ ಪೋಫೆಸರ್ ಆಲಿಕುಟ್ಟಿ  ಮುಸ್ಲಿಯಾರ್, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷ ಪಿಕೆಪಿ ಅಬ್ದುಸ್ಸಲಾಂ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಎಂಟಿ ಅಬ್ದುಲ್ಲಾ ಮುಸ್ಲಿಯಾರ್, ಪಾಣಕ್ಕಾಡ್ ಸ್ವಾದಿಖಲಿ ಶಿಹಾಬ್ ತಂಙಳ್, ಪಿಪಿ ಉಮರ್ ಮುಸ್ಲಿಯಾರ್ ಕೊಯ್ಯೋಡ್, ಕೆ.ಟಿ. ಹಂಝ ಮುಸ್ಲಿಯಾರ್, ಕೆ.ಉಮರ್ ಮುಸ್ಲಿಯಾರ್ ಮುಕ್ಕಂ, ಡಾಕ್ಟರ್ ಬಹಾವುದ್ದೀನ್ ಮುಹಮ್ಮದ್ ನದ್ವಿ, ಎ.ವಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್, ವಾಕ್ಕೋಡ್ ಎಂ. ಮೊಯಿದಿನ್ ಮುಸ್ಲಿಯಾರ್, ಡಾಕ್ಟರ್ ಎನ್.ಎ.ಎಮ್. ಅಬ್್ಉಲ್ ಖಾದಿರ್, ಎಂ.ಸಿ. ಮಾಯುನ್ ಹಾಜಿ, ಕೆ.ಎಂ.ಅಬ್ದುಲ್ಲ ಮಾಸ್ಟರ್ ಕೋಟ್ಟಪುರಂ, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ಅಬ್ದುಸ್ಸಮದ್ ಪೂಕೊಟ್ಟೂರ್,  ಇ.ಮೊಯಿದಿನ್ ಫೈಝಿ ಪುತ್ತನಝಿ, ಇಸ್ಮಾಯಿಲ್ ಹಾಜಿ ಮಾನ್ನಾರ್, ಎಸ್ ಸ'ಈದ್ ಮುಸ್ಲಿಯಾರ್, ಕೆ.ಮೊಯೀನ್ ಕುಟ್ಟಿ ಮುಸ್ಲಿಯಾರ್, ಎಂ.ಅಬ್ದುರ್ರಹಿಮಾನ್ ಮುಸ್ಲಿಯಾರ್ ಕೊಡಗು, ಎಂ.ಎ.ಚೇಳಾರಿ, ಕೆ.ಹಂಸಕೋಯ, ಪಿ.ಕೆ.ಮುಹಮ್ಮದ್ ಹಾಜಿ, ಸಿ.ಪಿ.ಇಕ್ಬಾಲ್, ಕೆ.ಪಿ. ಮುಹಮ್ಮದ್ ಮೊದಲಾದವರು ಹಾಜರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ