ಸಮಸ್ತ ಮುಷಾವರ ಸದಸ್ಯ ಇ.ಕೆ.ಮಹಮೂದ್ ಮುಸ್ಲಿಯಾರ್ ನಿಧನ

ಸಮಸ್ತ ಮುಷಾವರ ಸದಸ್ಯ ಇ.ಕೆ.ಮಹಮೂದ್ ಮುಸ್ಲಿಯಾರ್ ನಿಧನ

ಮಂಗಳೂರು, ಜೂನ್.2: ಪ್ರಮುಖ ಧಾರ್ಮಿಕ ವಿದ್ವಾಂಸ ಮತ್ತು ನಿಲೇಶ್ವರಂ-ಪಲ್ಲಿಕ್ಕರ ಸಂಯುಕ್ತ ಜಮಾತ್ ಖಾಝಿ ಇ.ಕೆ.ಮಹಮೂದ್ ಮುಸ್ಲಿಯಾರ್ ಇನ್ನು ನೆನಪು ಮಾತ್ರ. ಅವರು ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

       ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕೇಂದ್ರ ಮುಷಾವರ ಸದಸ್ಯರಾದ ಮಹಮೂದ್ ಮುಸ್ಲಿಯಾರ್  ನೀಲೇಶ್ವರ ಕೊಟ್ಟಪುರಂ ಮುಂಡಕ್ಕುಂಡ್ ಮುಹಮ್ಮದ್ ಮತ್ತು ಬಿಫಾತಿಮಾ ದಂಪತಿಯ ಸುಪುತ್ರರು. ಪ್ರಸ್ತುತ ಚೆರ್ವತ್ತೂರು ತುರುತ್ತಿ ಎಂಬಲ್ಲಿ ವಾಸವಾಗಿದ್ದರು. ಹಲವಾರು ಮಹಲ್ಗಳಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿರುವ ಮಹಮೂದ್ ಮುಸ್ಲಿಯಾರ್ ಕಳೆದ 35 ವರ್ಷಗಳಿಂದ ನೀಲೇಶ್ವರಂ-ಪಲ್ಲಿಕ್ಕರ ಸಂಯುಕ್ತ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಸ್ತ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ನಿಲೇಶ್ವರಂ ಮರ್ಕಝ್ ದ'ಅವಾ ಕಾಲೇಜಿನ ರಕ್ಷಾಧಿಕಾರಿ ಹೀಗೇ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು.

      ಶೇಖ್ ಅಬೂಬಕರ್ ಹಝರತ್ ಅವರ ಶಿಷ್ಯರಾದ ಮಹಮೂದ್ ಮುಸ್ಲಿಯಾರ್ ವೆಲ್ಲೂರು ಬಾಖಿಯಾತು ಸ್ವಾಲಿಹಾತಿನಲ್ಲಿ ಬಾಖವಿ ಬಿರುದು ಪಡೆದು ಖತೀಬರಾಗಿ, ಮುದರ್ರಿಸರಾಗಿ ಕೆಲಸ ನಿರ್ವಹಿಸಿದರು. ಇವರಿಗೆ ಅನೇಕ ಶಿಷ್ಯಂದಿರಿದ್ದಾರೆ.  ಕನ್ನಿಯತ್ ಅಹ್ಮದ್ ಮುಸ್ಲಿಯಾರ್, ಶಂಸುಲ್ ಉಲಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಮುಂತಾದವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು.

      ಕುಟುಂಬ ವಿವರ: ಪತ್ನಿ ಎ.ಸಿ. ಮರಿಯಮ್ಮ,  ಮಕ್ಕಳು ಷರೀಫಾ, ಮಿಸ್ರಿಯಾ ಮತ್ತು ಅಶ್ರಫ್ (ಅಬುಧಾಬಿ).  ಅಳಿಯಂದಿರಾದ ರಫೀಕ್ ಹಾಜಿ ತುರುತ್ತಿ, ಶಾದುಲಿ ಪಲ್ಲಿಕ್ಕರ ಮತ್ತು ಜುವೈರಿಯಾ ನೀಲೇಶ್ವರಂ

      SKSSF ವಿಖಾಯ ನೇತೃತ್ವದಲ್ಲಿ ವಿಖಾಯ ಮತ್ತು SYS ಕಾರ್ಕರ್ತರು ಮಂಗಳೂರು ಬಂದರ್ ಮಸೀದಿಯಲ್ಲಿ ಮಯ್ಯತ್ ಪರಿಪಾಲನೆ ನಡೆಸಿ ಹುಟ್ಟೂರಿಗೆ ಕಳುಹಿಸಿಕೊಟ್ಟರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ