ಸಮಸ್ತ ಮದರಸಗಳಲ್ಲಿ ಪಬ್ಲಿಕ್ ಪರೀಕ್ಷೆ: ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿಶೇಷ ಆನ್ಲೈನ್ ತರಗತಿಗಳು

ಪುತ್ತೂರು: 2021 ಏಪ್ರಿಲ್ 2 ಮತ್ತು 3ರಂದು ವಿದೇಶಗಳಲ್ಲಿಯೂ 3 ಮತ್ತು 4ರಂದು ಭಾರತದಲ್ಲಿಯೂ ಸಮಸ್ತ ಮದರಸಗಳಲ್ಲಿ ಪಬ್ಲಿಕ್ ಪರೀಕ್ಷೆಗಳು ನಡೆಯುತ್ತಿದ್ದು, ಭಾಗವಹಿಸುವ ವಿದ್ಯಾರ್ಥಿಗಳಿಗೂ ಅವರ ಪೋಷಕರಿಗೂ ಸಮಸ್ತ ಆನ್ಲೈನ್ ಮುಖಾಂತರ ವಿಶೇಷ ತರಗತಿಗಳನ್ನು ನೀಡಲಾಗುತ್ತಿದೆ.
ಮಾರ್ಚ್ 28 ರಂದು ಆದಿತ್ಯವಾರ ಬೆಳಿಗ್ಗೆ 7.30 ಕ್ಕೆ ಪೋಷಕರಿಗೂ ಮಾರ್ಚ್ 29 ರಂದು ಸೋಮವಾರ ಬೆಳಿಗ್ಗೆ 7.30 ಕ್ಕೆ ವಿದ್ಯಾರ್ಥಿಗಳಿಗೂ ಆನ್ಲೈನ್ ಕ್ಲಾಸುಗಳನ್ನು ಏರ್ಪಡಿಸಲಾಗಿದೆ.
ಪರೀಕ್ಷೆಯ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಹೇರುವ ರೀತಿಯಲ್ಲಿರುವ ಕೆಲವು ಪೋಷಕರ ವರ್ತನೆಗಳು ವಿದ್ಯಾರ್ಥಿಗಳ ಮೇಲೆ ವಿರುದ್ಧ ಪರಿಣಾಮವನ್ನುಂಟು ಮಾಡುತ್ತವೆ. ಪರೀಕ್ಷಾರ್ಥಿಗಳೊಂದಿಗೆ ಪೋಷಕರ ಪಾತ್ರವನ್ನು ನಿಖರವಾಗಿ ನಿಭಾಯಿಸಲು ಸಹಾಯವಾಗುವ ರೀತಿಯಲ್ಲಿ ಶಿಕ್ಷಣತಜ್ಞರ ಸಲಹೆಗಳನ್ನು ಸಮಸ್ತವು ಆನ್ಲೈನ್ ಮೂಲಕ ಪೋಷಕರಿಗೆ ನೀಡುತ್ತಿದೆ. ಉದ್ವೇಗವಿಲ್ಲದೆ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕೆಂಬುದನ್ನು ವಿದ್ಯಾರ್ಥಿಗಳು ನಿಖರವಾಗಿ ಕಲಿಯಲು ಈ ವಿಶೇಷ ಆನ್ಲೈನ್ ತರಗತಿಯ ಮೂಲಕ ಸಾಧ್ಯವಾಗಲಿದೆ.
2020 ಜೂನ್ ಒಂದರಿಂದ ಪ್ರಾರಂಭಗೊಂಡ ಸಮಸ್ತ ಆನ್ಲೈನ್ ಮದ್ರಸಾ ತರಗತಿಗಳು ಈ ತಿಂಗಳ 29 ರಂದು ವಿದ್ಯಾರ್ಥಿಗಳಿಗಿರುವ ಮೋಟಿವೇಶನ್ ಕ್ಲಾಸ್ ನೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ