ಸಮಸ್ತ ಪಬ್ಲಿಕ್ ಮರು ಪರೀಕ್ಷೆ ಮತ್ತು ವಿಶೇಷ ಪರೀಕ್ಷೆ: ಜೂನ್ 12 ಮತ್ತು 13

ಸಮಸ್ತ ಪಬ್ಲಿಕ್ ಮರು ಪರೀಕ್ಷೆ ಮತ್ತು ವಿಶೇಷ ಪರೀಕ್ಷೆ: ಜೂನ್ 12 ಮತ್ತು 13

ಚೇಳಾರಿ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ 2021 ರ ಏಪ್ರಿಲ್ 2, 3 ಮತ್ತು 4 ರಂದು ಭಾರತ ಮತ್ತು ವಿದೇಶಗಳಲ್ಲಿ ನಡೆಸಿದ ಸಾಮಾನ್ಯ ಪಬ್ಲಿಕ್ ಪರೀಕ್ಷೆಯಲ್ಲಿ ಕೇವಲ ಒಂದು ವಿಷಯದಲ್ಲಿ ಮಾತ್ರ ಅನುತ್ತೀರ್ಣರಾದವರಿಗೆ ಮರು ಪರೀಕ್ಷೆ ಮತ್ತು ಕೋವಿಡ್ ಕಾರಣದಿಂದ ಪಬ್ಲಿಕ್ ಪರೀಕ್ಷೆ ಬರೆಯದ ಬರೆಯದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯು ಇದೇ ಜೂನ್ 12 ಮತ್ತು 13ರಂದು ನಡೆಯಲಿದೆ ಎಂದು ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಕಚೇರಿ ಪ್ರಕಟಣೆ ತಿಳಿಸಿದೆ. 

       ಕೋವಿಡ್ ನಿರ್ಬಂಧದಿಂದಾಗಿ ಮದರಸಗಳ ಬಾಗಿಲು ತೆರೆಯಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಓನ್ಲೈನ್ ಮುಖಾಂತರ ಪರೀಕ್ಷೆಗಳು ನಡೆಯಲಿವೆ. 4,856 ವಿದ್ಯಾರ್ಥಿಗಳು ಮರು ಪರೀಕ್ಷೆಗೆ ಮತ್ತು 1,102 ವಿದ್ಯಾರ್ಥಿಗಳು ವಿಶೇಷ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.

ಪರೀಕ್ಷೆಯ ವೇಳಾಪಟ್ಟಿ:

12.06.2021 ಶನಿವಾರ ಭಾರತೀಯ ಸಮಯ ಬೆಳಿಗ್ಗೆ 10 ರಿಂದ 11ರವರೆಗೆ

5ನೇ ತರಗತಿ ಫಿಖ್ಹ್, 7 ನೇ ತರಗತಿ ಲಿಸಾನುಲ್ ಕುರ್'ಆನ್, 10 ನೇ ತರಗತಿ ದುರೂಸುಲ್ ಇಹ್ಸಾನ್, 12ನೇ ತರಗತಿ ತಫ್ಸೀರ್.

ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರವರೆಗೆ 5 ನೇ ತರಗತಿ ಲಿಸಾನುಲ್ ಕುರಾನ್, ತಜ್ವೀದ್, 7 ನೇ ತರಗತಿ ತಾರೀಖ್, 10 ನೇ ತರಗತಿ ಫಿಖ್ಹ್, 12ನೇ ತರಗತಿ ದುರೂಸುಲ್ ಇಹ್ಸಾನ್.

13.06.2021 ಭಾನುವಾರ ಭಾರತೀಯ ಸಮಯ ಬೆಳಿಗ್ಗೆ 10 ರಿಂದ 11 ರವರೆಗೆ

ಐದನೇ ತರಗತಿ ಅಕೀದಾ, 7 ನೇ ತರಗತಿ ಫಿಖ್ಹ್, 10 ನೇ ತರಗತಿ ತಫ್ಸೀರ್,  12ನೇ ತರಗತಿ ಲಿಸಾನುಲ್ ಕುರ್'ಆನ್.

ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರವರೆಗೆ 5 ನೇ ತರಗತಿ ತಾರೀಖ್, ಅಖ್ಲಾಕ್, 7 ನೇ ತರಗತಿ ದುರೂಸುಲ್ ಇಹ್ಸಾನ್, 10 ನೇ ತರಗತಿ ಲಿಸಾನುಲ್ ಕುರ್'ಆನ್, 12ನೇ ತರಗತಿ ಫಿಖ್ಹ್.

      ನಿಗದಿತ ಸಮಯದೊಳಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ