ಸಮಸ್ತ ಇಸ್ಲಾಮಿಕ್‌ ಶಿಕ್ಷಣ ಮಂಡಳಿಯ ಅಧ್ಯಕ್ಷ ಪಿಕೆಪಿ ಅಬ್ದುಸ್ಸಲಾಂ ಮುಸ್ಲಿಯಾರ್‌ ಇನ್ನು ನೆನಪು ಮಾತ್ರ

ಸಮಸ್ತ ಇಸ್ಲಾಮಿಕ್‌ ಶಿಕ್ಷಣ ಮಂಡಳಿಯ ಅಧ್ಯಕ್ಷ ಪಿಕೆಪಿ ಅಬ್ದುಸ್ಸಲಾಂ ಮುಸ್ಲಿಯಾರ್‌ ಇನ್ನು ನೆನಪು ಮಾತ್ರ

ಕಣ್ಣೂರು (ಕೇರಳ): ಸಮಸ್ತ ಕೇಂದ್ರ ಸಮಿತಿ ಉಪಾಧ್ಯಕ್ಷರೂ ಹಾಗೂ ಸಮಸ್ತ ಕೇರಳ ಇಸ್ಲಾಮಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷರೂ ಆಗಿರುವಂತಹ ಪಿ.ಕೆ.ಪಿ. ಅಬ್ದುಲ್ ಸಲಾಂ ಮುಸ್ಲಿಯಾರ್ (85) ಇಂದು ನಿಧನರಾದರು. ಅವರು ಪ್ರಸ್ತುತ ಸಮಸ್ತ ಕಣ್ಣೂರು ಜಿಲ್ಲಾ ಅಧ್ಯಕ್ಷರೂ ಆಗಿದ್ದರು.

       ಅವರು ಪ್ರಮುಖ ವಿದ್ವಾಂಸರು ಮತ್ತು ಶ್ರೇಷ್ಠ ಮುದರ್ರಿಸ್ಸರೂ ಆಗಿದ್ದಂತಹ ಕುಂಞಹ್ಮದ್ ಮುಸ್ಲಿಯಾರ್ ಮತ್ತು ಪಾಪಿನಸ್ಸೇರಿ ಪೂವಾಂಕುಲಂ ನಫೀಸಾ ದಂಪತಿಯ ಮಗನಾಗಿ‌ 1935 ಜುಲೈ 1ರಂದು ಜನಿಸಿದರು. ಚೆರುಕುನ್ನು ತೆಕ್ಕುಂಬಾಡ್ ಓತುಪಲ್ಲಿಯಲ್ಲಿ ಅವರು ತಮ್ಮ ಪ್ರಾಥಮಿಕ ಧಾರ್ಮಿಕ ಶಿಕ್ಷಣ ಮತ್ತು ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ತಮ್ಮ ತಂದೆಯ ಮಾರ್ಗದರ್ಶನದಲ್ಲಿ ತೆಕ್ಕುಂಬಾಡ್ ದರ್ಸ್ ಅಧ್ಯಯನಕ್ಕೂ ಸೇರಿಕೊಂಡರು. ಮಾಡಾಯಿ ಬಿ.ಎಮ್‌.ಎಚ್‌.ಇ. ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ನಂತರ  ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಶಂಸುಲ್‌ ಉಲಮಾ ಇಕೆ ಅಬೂಬಕರ್ ಮುಸ್ಲಿಯಾರ್ ಪ್ರಾಂಶುಪಾಲರಾಗಿದ್ದ ತಲಿಪರಂಬ ಖುವ್ವತುಲ್ ಇಸ್ಲಾಂ ಅರೇಬಿಕ್ ಕಾಲೇಜಿಗೆ ಸೇರಿದರು.

       ಶಂಸುಲ್ ಉಲಮಾರ ಶಿಕ್ಷಣದಿಂದಾಗಿ ಉರ್ದು ಭಾಷೆಯೂ ಕರಗತವಾಗಿತ್ತು.  1994 ಜನವರಿ 8ರಂದು ಸಮಸ್ತ ಶಿಕ್ಷಣ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಿಕೆಪಿ ಉಸ್ತಾದರು ಅದೇ ವರ್ಷ ಮೇ 18ರಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾದರು.  2009 ರಿಂದ 2013 ರವರೆಗೆ ಅವರು ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

      ಕುಂಞಾಮಿನ (ವಟ್ಟಪೊಯಿಲ್), ದಿವಂಗತ ಎಕೆ ನಫೀಸಾ ಎಂಬಿಬ್ಬರು ಪತ್ನಿಯರು.  ಹನ್ನತ್, ರಹಮತ್, ಎಕೆ ಅಬ್ದುಲ್ ಬಾಖಿ (ಸುನ್ನಿ ಮಹಲ್ ಫೆಡರೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಾಮಿಯಾ ಅಸ್‌ಹದಿಯ್ಯಾ ವರ್ಕಿಂಗ್ ಕಾರ್ಯದರ್ಶಿ, ಪಾಪ್ಪಿನಶ್ಶೇರಿ ಹಿದಾಯತ್ ಆಂಗ್ಲ ಮಾಧ್ಯಮ ಹೈಯರ್ ಸೆಕೆಂಡರಿ ಸ್ಕೂಲ್ ಮ್ಯಾನೇಜರ್), ಜುವೈರಿಯಾ, ಖಲೀಲ್ ರಹಮಾನ್ (ದುಬೈ), ದಿವಂಗತ ಹಬೀಬುಲ್ಲಾ ಎಂಬವರು ಮಕ್ಕಳು. ಇ.ಟಿ. ಅಬ್ದುಲ್ ಸಲಾಂ (ದುಬೈ), ಅಬ್ದುಲ್ ಸಲಾಂ (ಕುವೈತ್), ಸನಿನಾ, ಪಿಟಿಪಿ ಶಫೀಕ್ ಮತ್ತು ಫರ್ಹಾನಾ (ತಳಿಪರಂಬ) ಅಳಿಯಂದಿರು ಮತ್ತು ಸೊಸೆಯಂದಿರು. ಶಾಹುಲ್ ಹಮೀದ್ ಹಾಜಿ ಮತ್ತು ಅಬ್ದುಲ್ಲಾ ಕುಂಞಿ ಒಡಹುಟ್ಟಿದವರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ