ಸುನ್ನತ್‌ ಜಮಾತ್‌ನ ಧೀರ ಶಬ್ದ: ಸಲೀಂ ಫೈಝಿ ಇರ್ಫಾನಿ ಇನ್ನಿಲ್ಲ

ಸುನ್ನತ್‌ ಜಮಾತ್‌ನ ಧೀರ ಶಬ್ದ: ಸಲೀಂ ಫೈಝಿ ಇರ್ಫಾನಿ ಇನ್ನಿಲ್ಲ

ಕಣ್ಣೂರು, ಕೇರಳ: ಸುನ್ನೀ ಯುವಜನ ಸಂಘ (sys) ಆದರ್ಶ ಸಮಿತಿಯ ರಾಜ್ಯ ಸಮಿತಿ ಸದಸ್ಯರೂ, ಸಮಸ್ತ ಕಣ್ಣೂರು ಜಿಲ್ಲಾ ಮುಶಾವರ ಸದಸ್ಯರೂ ಆದ ತಿಲ್ಲಂಕೇರಿ ಕಾವುಂಪಾಡಿಯ ಸಲೀಂ ಫೈಝಿ ಇರ್ಫಾನಿ (41)  ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಕಣ್ಣೂರು ಚಾಲಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಲೀಂ ಫೈಝಿ ಅವರನ್ನು ಮಂಗಳವಾರ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ 10.20ಕ್ಕೆ ಕೊನೆಯುಸಿರೆಳೆದಿದ್ದಾರೆ.

      ಕೊರೋನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಫೈಝಿಯವರಿಗೆ ಕ್ರಮೇಣ ನಿಮೋನಿಯ ಜ್ವರ ಬಂದು ತೀವ್ರ ಅಸ್ವಸ್ಥರಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

      ಅವರು ಉಲಿಯ ಅಲ್-ಹಿದಾಯ ಇಸ್ಲಾಮಿಕ್ ಸರ್ವ ಕಲಾ ಶಾಲೆಯ ಸಂಸ್ಥಾಪಕರು ಮತ್ತು ಪ್ರಂಶುಪಾಲರೂ ಆಗಿದ್ದರು. ಸುನ್ನಿ ಸೈದ್ಧಾಂತಿಕ ವೇದಿಕೆಗಳಲ್ಲಿ, ಆಶಯ ವಾದ-ಪ್ರತಿವಾದ ರಂಗದಲ್ಲಿ ಅವರು ಗಮನಾರ್ಹ ವ್ಯಕ್ತಿಯಾಗಿದ್ದರು. ಚಪ್ಪರಪದವು ಜಾಮಿಯಾ ಇರ್ಫಾನಿಯಾ ಅರೇಬಿಕ್ ಕಾಲೇಜಿನಲ್ಲಿ ಇರ್ಫಾನಿ ಪದವಿ ಪಡೆದ ನಂತರ,  ಪಟ್ಟಿಕಾಡ್‌ನ ಜಾಮಿಯಾ ನೂರಿಯಾ ಅರೇಬಿಕ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದು,  ಹೈದರಾಬಾದ್‌ನ ನಿಜಾಮಿಯಾ ವಿಶ್ವವಿದ್ಯಾಲಯದಿಂದ ನಿಜಾಮಿ ಪದವಿಯನ್ನೂ ಮತ್ತು ಈಜಿಪ್ಟ್‌ನ ಅಲ್-ಅಝ್ಹರ್ ವಿಶ್ವವಿದ್ಯಾಲಯದಿಂದ ಅಝ್ಹರಿ ಪದವಿಯನ್ನೂ ಪಡೆದಿದ್ದರು.

      ಪಾನೂರು ಚೆರುಪರಂಬು ಜಮಾಲಿಯಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರು ಮತ್ತು ಪಟ್ಟಿಕಾಡ್ ಜಾಮಿಯಾ ನೂರಿಯಾ, ನಂದಿ ಜಾಮಿಯಾ ದಾರುಸ್ಸಲಾಮ್ ಅಲ್-ಇಸ್ಲಾಮಿಯಾ ಅರೇಬಿಕ್ ಕಾಲೇಜು ಮತ್ತು ಚಪ್ಪಾರಪ್ಪಡವ್ ಜಾಮಿಯಾ ಇರ್ಫಾನಿಯಾದಲ್ಲಿ ಅಧ್ಯಾಪಕರಾಗಿದ್ದರು.

      ಇವರು ಮಟ್ಟನ್ನೂರು ಪೊರೋರ ಇಸ್ಮಾಯಿಲ್ ಮತ್ತು ನಫೀಸಾ ದಂಪತಿಯ ಪುತ್ರ. ಮೃತರು ಪತ್ನಿ ಶರೀಫಾ, ಮಕ್ಕಳಾದ ಹಾಫಿಳಾ ಸುಅದಾ, ಆಯಿಷಾ, ಮಹಮ್ಮದ್, ಜಲಾಲ್, ಕುಬ್ರಾ ಮತ್ತು ಸುಹರಾ ಎಂಬವರನ್ನು ಅಗಲಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ