ಸಾಧನೆಗಳ ಸರದಾರರು: ಡಾಕ್ಟರ್ ಮುಹಮ್ಮದ್ ಅನ್ಸಾರ್ ಹಾಗೂ ನ್ಯಾಯವಾದಿ ನೌಷಾದ್ ಅನ್ಸಾರಿ

ಬಂಟ್ವಾಳ: SKSSF ಕ್ಯಾಂಪಸ್ ವಿಂಗ್ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡಿ ಯುವ ಸಮೂಹವನ್ನು ಮುಖ್ಯಧಾರೆಗೆ ತಂದು ನಿಲ್ಲಿಸುತ್ತದೆಯೇ ಹೊರತು, ಪ್ರತಿಭಟನೆಯ ಹೆಸರಲ್ಲಿ ವಿದ್ಯಾರ್ಥಿಗಳ ಹಾದಿ ತಪ್ಪಿಸಿ ಕಂಬಿಗಳ ಹಿಂದೆ ನಿಲ್ಲಿಸಿ ಅವರ ಭವಿಷ್ಯವನ್ನು ಮೊಟಕುಗೊಳಿಸುವುದಿಲ್ಲ ಎಂದು ನ್ಯಾಯವಾದಿ ಬದ್ರುದ್ದೀನ್ ಕುಕ್ಕಾಜೆ ತಿಳಿಸಿದರು. ಅವರು ಇತ್ತೀಚೆಗೆ ಕ್ಯಾಂಪಸ್ ವಿಂಗ್ ದ.ಕ. ಜಿಲ್ಲಾ ಸಮಿತಿ ಬಿ.ಸಿ.ರೋಡಿನಲ್ಲಿ ಏರ್ಪಡಿಸಿದ ಲೀಡರ್ಸ್ ಮೀಟ್ ʼರಿನೋವೇಷನ್ʼ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು.
SKSSF ದ.ಕ.ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ SKSSF ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಹೊಸ ಹೊಸ ಯೋಜನೆಗಳ ಮೂಲಕ ಕ್ಯಾಂಪಸ್ ವಿಂಗನ್ನು ಬಲಪಡಿಸಬೇಕಾದ ಅವಶ್ಯಕತೆ ಇದೆ. ಹಾದಿ ತಪ್ಪುತ್ತಿರುವ ವಿದ್ಯಾರ್ಥಿ ಸಮೂಹವನ್ನು ಕ್ಯಾಂಪಸ್ ವಿಂಗ್ ಮೂಲಕ ಎಚ್ಚರಗೊಳಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರಬೇಕಾದ ಜವಾಬ್ದಾರಿ ಕ್ಯಾಂಪಸ್ ವಿಂಗ್ ಮೇಲಿದೆ ಎಂದು ಹೇಳಿದರು.
ಟ್ರೆಂಡ್ ಜಿಲ್ಲಾ ಸಮಿತಿಯ ಅಧ್ಯಕ್ಷರೂ, ರಾಜ್ಯ ತರಬೇತುದಾರೂ, ಆಪ್ತ ಸಮಾಲೋಚಕರೂ ಆಗಿರುವ ಅಬ್ದುಸ್ಸಮದ್ ಸಾಲೆತ್ತೂರು, ಓರ್ಗನೆಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಬಿ.ಎಂ. ಬಂಟ್ವಾಳ ಹಾಗೂ ನ್ಯಾಯವಾದಿ ಬದ್ರುದ್ದೀನ್ ಕುಕ್ಕಾಜೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳೊಂದಿಗೆ ಭವಿಷ್ಯದ ಬಗ್ಗೆ ಸಮಾಲೋಚನೆಯೂ ನಡೆಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಎಂ.ಬಿ.ಬಿ.ಎಸ್. ಪದವಿ ಪಡೆದ ಡಾಕ್ಟರ್ ಮುಹಮ್ಮದ್ ಅನ್ಸಾರ್ ಹಾಗೂ ಮದ್ರಸ ಅಧ್ಯಾಪಕರಾಗಿ ಕಾನೂನು ಪದವಿ ಪಡೆದು ವಕೀಲರಾಗಿ ನೋಂದಾವಣೆಯಾದ ನೌಷಾದ್ ಅನ್ಸಾರಿ ಇವರುಗಳನ್ನು ಇಸ್ಮಾಯಿಲ್ ಯಮಾನಿ ಹಾಗೂ ಕ್ಯಾಂಪಸ್ ನ ನಾಯಕರುಗಳು ಗೌರವ ಪೂರಕವಾಗಿ ಸನ್ಮಾನಿಸಿದರು.
ಡಾಕ್ಟರ್ ಮುಹಮ್ಮದ್ ಅನ್ಸಾರ್: ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರ ಕನ್ನಡ ಮಾಧ್ಯಮದಲ್ಲೇ ಪೂರೈಸಿ, ನಂತರ ವಿಟ್ಲ ಅಳಿಕೆಯ ಸತ್ಯ ಸಾಯಿಬಾಬ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದವರು. ತನ್ನ ಪ್ರತಿಭೆಯಿಂದಲೇ ಉತ್ತಮ ಅಂಕ ಪಡೆದು ಮೆರಿಟ್ ಆಧಾರದಲ್ಲೇ ವಿಜಯಪುರದ ಅಲ್-ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಸರಕಾರೀ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆದುಕೊಂಡು ಇಂದು ವೈದ್ಯರಾಗಿ ಸಮೂಹದಲ್ಲಿ ಸೇವೆ ಸಲ್ಲಿಸಲು ಡಾಕ್ಟರಾಗಿ ಹೊರ ಬಂದಿದ್ದಾರೆ. ಸನ್ಮಾನ ಸ್ವೀಕರಿಸಿದ ಮುಹಮ್ಮದ್ ಅನ್ಸಾರ್ ವೈದ್ಯಕೀಯ ಸೀಟು ಲಭಿಸಿದ ಆರಂಭದಲ್ಲಿ ನನಗೆ ಭಯವಿತ್ತು. ಆ ಸಂದರ್ಭದಲ್ಲೆಲ್ಲಾ ನನಗೆ ನನ್ನ ತಂದೆ ತಾಯಂದಿರು ಉದ್ತಾದರು ಹೇಳಿದ ಮಾತು ನೆನಪಿಗೆ ಬರುತ್ತಿತ್ತು. ಭಯ ಉಂಟಾದಾಗ, ಪರೀಕ್ಷೆಯ ಸಂದರ್ಭದಲ್ಲಿ ಮರೆವು ಅನುಭವಿಸಿದಾಗ ಮಹಾನರಾದ ಶಂಸುಲ್ ಉಲಮಾರ ಮೇಲೆ ಫಾತಿಹ ಓದಲು ಹೇಳಿಕೊಟ್ಟಿದ್ದರು. ನಾನು ಹಾಗೆಯೇ ಮಾಡುತ್ತಿದ್ದೆ. ಇದುವೇ ನನ್ನ ಯಶಸ್ಸಿನ ಗುಟ್ಟು ಎಂದು ಹೇಳಿದರು.
ನ್ಯಾಯವಾದಿ ನೌಷಾದ್ ಅನ್ಸಾರಿ: ಇವರು ಸಾಮಾನ್ಯ ಕುಟುಂಬದಿಂದ ಬಂದು ಅನ್ಸಾರಿ ಎಂಬ ಧಾರ್ಮಿಕ ಬಿರುದುದಾರಿ. ಮದ್ರಸದಲ್ಲಿ ಅಧ್ಯಪಕನಾಗಿದ್ದುಕೊಂಡು ತನ್ನ ಕಲಿಕೆಯನ್ನು ಮುಂದುವರಿಸಿದರು. ಕಲಿಕೆಯನ್ನು ಪೂರಗೊಳಿಸಿ ಇಂದು ನ್ಯಾಯವಾದಿಯಾಗಿ ನೋಂದಾವಣೆಗೊಳಿಸಿದ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಕಲಿಯುವ ಛಲವೊಂದಿದ್ದರೆ ಮನುಷ್ಯ ಏನನ್ನೂ ಸಾಧಿಸಬಹುದು ಎಂದು ಹೇಳಿದರು. ಪ್ರಯತ್ನ ಪಟ್ಟರೆ ಮದ್ರಸ ಅಧ್ಯಾಕನೂ ವಕೀಲನೂ, ಪೋಲೀಸ್ ಅಧಿಕಾರಿಗಳೂ, ಜಿಲ್ಲಾಧಿಕಾರಿಗಳೂ ಆಗಬಹುದು, ಇದಕ್ಕೆ ನಾನೇ ಉದಾಹರಣೆ. ಆದ್ದರಿಂದ ಕಲಿಯುವ ಸಮಯದಲ್ಲಿ ನಿಮ್ಮ ಚಿತ್ತವನ್ನು ಬೇರೆಡೆಗೆ ಹರಿಯಬಿಡದೆ ಶ್ರದ್ಧೆಯಿಂದ ಕಲಿತರೆ ಖಂಡಿತಾ ಸಾಧನೆಗಳನ್ನು ಮಾಡಬಹುದು. ನಿಮ್ಮ ಬುದ್ಧಿವಂತಿಕೆಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕೋರ್ಡಿನೇಟರ್ ಮುನಾಝ್ ತೋಡಾರು, ಕ್ಯಾಂಪಸ್ ವಿಂಗ್ ಜಿಲ್ಲಾಧ್ಯಕ್ಷ ರಿಝ್ವಾನ್ ಪೂಂಜಾಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಜಿಪ, ನಿಕಟಪೂರ್ವ ಅಧ್ಯಕ್ಷ ತಮೀಮ್ ಸಿ.ಕೆ. ನಿಕಟಪೂರ್ವ ಕ್ಯಾಂಪಸ್ ನಾಯಕರುಗಳಾದ ನೌಷಾದ್ ಮಲಾರ್, ಇರ್ಫಾನ್ ಕಣ್ಣೂರು, ಶಾಕಿರ್ ಮಿತ್ತಬೈಲು ಟ್ರೆಂಡ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಹಾಗೂ ಯಾಕೂಬ್, ವಿಖಾಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಶೀರ್ ಮಜಲ್ ಮೊದಲಾದವರು ಉಪಸ್ತಿತರಿದ್ದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ