ಸೌದಿ ಅರೇಬಿಯಾ ಸ್ವಯಂ ದಿಗ್ಬಂಧನ: ವಿಮಾನ ಹಾರಾಟಕ್ಕೆ ನಿರ್ಬಂಧ

ಸೌದಿ ಅರೇಬಿಯಾ ಸ್ವಯಂ ದಿಗ್ಬಂಧನ: ವಿಮಾನ ಹಾರಾಟಕ್ಕೆ ನಿರ್ಬಂಧ

ರಿಯಾಧ್, ಡಿಸೆಂಬರ್ 21: ಹಲವಾರು ಯುರೋಪಿಯನ್ ರಾಷ್ಟ್ರಗಳಲ್ಲಿ ಕೊರೋನ ವೈರಸ್ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಎಲ್ಲಾ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ, ಆಂತರಿಕ ಸಚಿವಾಲಯದ ಅಧಿಕೃತ ಮೂಲವನ್ನು ಉಲ್ಲೇಖಿಸಿ ಭಾನುವಾರ ತಡರಾತ್ರಿ ವರದಿ ಮಾಡಿದೆ.

ಸೌದಿ ಕಿಂಗ್ಡಮ್ ತನ್ನ ಭೂಪ್ರದೇಶವನ್ನು ಮಾರಕ ವೈರಸ್ ನಿಂದ ತಡೆಯುವ ಪ್ರಯತ್ನವಾಗಿ ಸಮುದ್ರದದಾಚೆಗಿನ ತನ್ನ ಎಲ್ಲಾ ಗಡಿಗಳನ್ನು ಮುಚ್ಚಲು ನಿರ್ಧರಿಸಿದೆ.

ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯ ಭಾಗವಾಗಿ ತುರ್ತು ಪ್ರಕರಣಗಳನ್ನು ಹೊರತುಪಡಿಸಿ ಅಂತರರಾಷ್ಟ್ರೀಯ ಪ್ರಯಾಣವನ್ನು ಸ್ಥಗಿತಗೊಳಿಸುವುದನ್ನು ಇನ್ನೂ ಒಂದು ವಾರ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 8, 2020 ರ ನಂತರ ಯುರೋಪಿಯನ್ ದೇಶಗಳಿಂದ ಅಥವಾ ಹೊಸ ವೈರಸ್ ಕಾಣಿಸಿಕೊಂಡ ಯಾವುದೇ ದೇಶದಿಂದ ಹಿಂದಿರುಗಿದ ಪ್ರತಿಯೊಬ್ಬರಿಗೂ ಕೆಲವು ಸೂಚನೆಗಳನ್ನು ಪಾಲಿಸುವಂತೆ ಆದೇಶಿಸಿದೆ. ಅದರಂತೆ ಅವರು 15 ದಿನಗಳ ಪ್ರತ್ಯೇಕ ವಾಸ, ನಂತರ ಪ್ರತೀ 5 ದಿನಗಳಿಗೊಮ್ಮೆ ಕೊರೋನ ಪರೀಕ್ಷೆ ಮುಂತಾದ ನಿರ್ದಿಷ್ಟ ಸೂಚನೆಗಳನ್ನು ನೀಡಿದೆ. ಅದೇ ರೀತ ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಯುರೋಪಿಯನ್ ದೇಶಗಳಿಂದ ಹಾದು ಬಂದವರು ಅಥವಾ ರೂಪಾಂತರಿತ ಕೋವಿಡ್-19 ವ್ಯಾಪಿಸಿದ  ದೇಶಗಳಿಂದ ಹಿಂದಿರುಗಿದವರು ಕೂಡಾ  ಕೊರೋನ ವೈರಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ