ಸದಾನಂದ ಪೂಂಜರಿಗೆ ಹುಟ್ಟೂರ ಶೃದ್ದಾಂಜಲಿ

ಸದಾನಂದ ಪೂಂಜರಿಗೆ ಹುಟ್ಟೂರ ಶೃದ್ದಾಂಜಲಿ
republicday728
republicday468
republicday234

ಬಂಟ್ವಾಳ: ಇತ್ತೀಚೆಗೆ ನಿಧನರಾದ ದ.ಕ.ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ಬರಂಗರೆ ಸದಾನಂದ ಪೂಂಜಾ ಅವರಿಗೆ ಹುಟ್ಟೂರ ಶೃದ್ದಾಂಜಲಿ ಅರ್ಪಿಸಲಾಯಿತು.
ಶ್ರೀ ಶಾರದಾ ಪೂಜಾ ಸೇವಾ ಸಮಿತಿ, ಶುಭಾಷ್ ಯುವಕ ಮಂಡಲ ಹಾಗೂ ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಆಡಳಿತ ಸಮಿತಿಯ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಸಜಿಪ ಮೂಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಮೃತರ ಗೌರವಾರ್ಥ ಮೌನ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

      ಸಜಿಪ ಮೂಡ ಪಂಚಾಯತ್ ನ ಅಧ್ಯಕ್ಷರಾಗಿ ಸುದೀರ್ಘ 40 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪೂಂಜಾರವರು
ಸಜಿಪಮೂಡ ಏತ ನೀರಾವರಿ ಯೋಜನೆ, ಗ್ರಾಮಕ್ಕೆ ಬ್ಯಾಂಕ್ ಶಾಖೆ, ಆಯುರ್ವೇದ ಆಸ್ಪತ್ರೆ, ಹಾಲಿನ ಸೊಸೈಟಿ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಯುವಕ ಮಂಡಲ, ಸದಾಶಿವ ದೇವಸ್ಥಾನ ಜೀರ್ಣೋದ್ಧಾರ, ಸಜಿಪ ಮಾಗಣೆ ಆಡಳಿತದಾ ರರಾಗಿ ವಾಚನಾಲಯ, ಸಮಾಜ ಮಂದಿರ,  ಮೊದಲಾದ ಅಭಿವೃದ್ಧಿ ಕಾರ್ಯಗಳಲ್ಲಿ ನೀಡಿದ ಕೊಡುಗೆ ಅಪಾರವಾದುದು ಎಂದು ಸಜಿಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ತಿಳಿಸಿದರು. ಅವರು ಶ್ರೀ ಬಿ.ಸದಾನಂದ ಪೂಂಜಾರಿಗೆ ನುಡಿನಮನ ಸಲ್ಲಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಿದ್ದರು.

     ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳು ಪೂಂಜಾರ ಧಾರ್ಮಿಕ ಸಾಂಸ್ಕೃತಿಕ ಶೈಕ್ಷಣಿಕ ಸಾಮಾಜಿಕ ರಾಜಕೀಯ ಚಿಂತನೆಗಳನ್ನು ನೆನಪಿಸಿಕೊಂಡರು. ಕೆ ರಾಧಾಕೃಷ್ಣ ಆಳ್ವ. ಗಿರೀಶ್ ಕುಮಾರ್, ಸುದರ್ಶನ ಮಯ್ಯ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಕರ್ನಾಟಕ ಬ್ಯಾಂಕ್ ಸಜಿಪಮೂಡ ಶಾಖೆ ಪ್ರಬಂಧಕ ಮಿತಿಲೇಶ್, ಪಾಣೆಮಂಗಳೂರು ರೈತ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಮೃತರ ಸುಪುತ್ರರಾದ ದೇವಿ ಪ್ರಸಾದ್ ಪೂಂಜಾ, ರಾಮ್ ಪ್ರಸಾದ್ ಪೂಂಜಾ ಮುಂತಾದವರು ಉಪಸ್ಥಿತರಿದ್ದರು ಇತ್ತೀಚೆಗೆ ನಿಧನರಾದ ದ.ಕ.ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ಬರಂಗರೆ ಸದಾನಂದ ಪೂಂಜಾ ಅವರಿಗೆ ಹುಟ್ಟೂರ ಶೃದ್ದಾಂಜಲಿ ಅರ್ಪಿಸಲಾಯಿತು.
ಶ್ರೀ ಶಾರದಾ ಪೂಜಾ ಸೇವಾ ಸಮಿತಿ, ಶುಭಾಷ್ ಯುವಕ ಮಂಡಲ ಹಾಗೂ ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಆಡಳಿತ ಸಮಿತಿಯ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಸಜಿಪ ಮೂಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಮೃತರ ಗೌರವಾರ್ಥ ಮೌನ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
  

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ