ಸಿದ್ದೀಕ್ ಕಾಪ್ಪನ್ ಗೆ ಸೂಕ್ತ ಚಿಕಿತ್ಸೆ ನೀಡಿ: ಎಡಿಟರ್ಸ್ ಗಿಲ್ಡ್ ಆಗ್ರಹ

ಸಿದ್ದೀಕ್ ಕಾಪ್ಪನ್ ಗೆ ಸೂಕ್ತ ಚಿಕಿತ್ಸೆ ನೀಡಿ: ಎಡಿಟರ್ಸ್ ಗಿಲ್ಡ್ ಆಗ್ರಹ

ನವದೆಹಲಿ: ಬಂಧಿತ ಪತ್ರಕರ್ತ ಸಿದ್ದೀಕ್‌ ಕಾಪ್ಪನ್‌ ಕೋವಿಡ್‌ ಪೀಡಿತರಾಗಿದ್ದು ಅವರಿಗೆ ಶೀಘ್ರ ಸೂಕ್ತ ಮತ್ತು ಗೌರವಯುತವಾದ ಚಿಕಿತ್ಸೆ ಒದಗಿಸಬೇಕು ಎಂದು ಎಡಿಟರ್ಸ್‌ ಗಿಲ್ಡ್‌ ಆಗ್ರಹಿಸಿದೆ.
      ಸಿದ್ದೀಕ್‌ ಅವರಿಗೆ ಅಮಾನವೀಯ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂಬ ವರದಿ ಕೇಳಿ ಕಳವಳ ಉಂಟಾಗಿದೆ ಎಂದು ಎಡಿಟರ್ಸ್‌ ಗಿಲ್ಡ್‌ ಹೇಳಿಕೆಯಲ್ಲಿ ತಿಳಿಸಿದೆ. ಅವರ ಬಂಧನ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದ್ದರೂ ಇದುವರೆಗೂ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸದಿರುವುದು ಕಳವಳಕಾರಿ ಎಂದೂ ಹೇಳಿದೆ.
      ಮಥುರಾದ ಆಸ್ಪತ್ರೆಯಲ್ಲಿ ಸಿದ್ದೀಕ್‌ ಅವರಿಗೆ ಸರಪಳಿ ಬಿಗಿದು ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಆಹಾರ ತೆಗೆದುಕೊಳ್ಳಲು ಹಾಗೂ ಶೌಚಾಲಯಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ ಎಂದು ಅವರ ಪತ್ನಿ ದೂರಿದ್ದರು.

      ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಪ್ರಕರಣದ ವರದಿಗೆ ತೆರಳಿದ್ದ ಸಿದ್ದೀಕ್‌ ಅವರನ್ನು ಪೊಲೀಸರು ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ