ಸಜಿಪಮೂಡ ಶ್ರೀ ಸದಾಶಿವ ದೇವಸ್ಥಾನ: ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಪೂಜೆ

ಸಜಿಪಮೂಡ ಶ್ರೀ ಸದಾಶಿವ ದೇವಸ್ಥಾನ: ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಪೂಜೆ
republicday728
republicday468
republicday234

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಪೂಜೆ ಉತ್ಸವದ ಪ್ರಯುಕ್ತ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ ಶ್ರೀ ರುದ್ರ ಸೂಕ್ತ ಅಭಿಷೇಕ ನವಕ ಕಲಶಾಭಿಷೇಕ ಕಲ್ಪೋಕ್ತ ಪೂಜೆ ಪ್ರಸನ್ನ ಪೂಜೆ ಸ್ಥಳದ ದೈವಗಳಾದ ಕಲ್ಲುರ್ಟಿ ಪಂಜುರ್ಲಿ ಗುಳಿಗ ದೈವಕ್ಕೆ ಪರ್ವ ಸೇವೆ ಬ್ರಹ್ಮಶ್ರೀ ನೀಲೇಶ್ವರ ಕೆ.ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ಜರುಗಿತು.
      ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ.ಕೆ, ಪ್ರಮುಖರಾದ ಸದಾನಂದ ಶೆಟ್ಟಿ ಎಂ. ಸುಬ್ರಹ್ಮಣ್ಯ ಭಟ್. ಜಯಶಂಕರ್ ಬಾಸ್ರಿತಾಯ. ಶಾಂತಿ ರಾಜ ರೈ, ಮಾಜಿ ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಬೆಳ್ಚಡ,  ತಾಲೂಕು ಪಂಚಾಯತಿ ಸದಸ್ಯ ಕೆ.ಸಂಜೀವ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ್ ಬೆಳ್ಚಡ, ರವಿ ಪಂಬದ, ಕೆ.ಕೃಷ್ಣ ಭಟ್. ಗಣೇಶ್ ಕಾರಂತ, ಕುಸುಮ, ಎಸ್.ಪದ್ಮನಾಭ ಕೊಟ್ಟಾರಿ. ಗೀತಾ, ಬಾಲಕೃಷ್ಣ,  ಸಜೀಪಮೂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಮಲ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಸ್ಥಳೀಯ ಪ್ರಮುಖರಾದ ಲಿಂಗಪ್ಪ ದೋಟ ರಮೇಶ್ ಅನ್ನಪಾಡಿ ಮೊದಲಾದವರು ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ