ಸ್ಕೂಟರ್ ಅಪಘಾತ :ಸವಾರ ಗಂಭೀರ ಗಾಯ

ಸ್ಕೂಟರ್ ಅಪಘಾತ :ಸವಾರ ಗಂಭೀರ ಗಾಯ
republicday728
republicday468
republicday234

ಉಳ್ಳಾಲ. ಮಾ, 22: ಕರ್ನಾಟಕ ಕೇರಳ ಗಡಿ ಭಾಗದ ತಲಪಾಡಿ ಬಳಿ ಬಸ್ ಗೆ  ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್  ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಉದ್ಯಾವರ ಮಾಡ ನಿವಾಸಿ ತುಳಸಿ ಗಾಯಳು. ದಿನದ ಕೆಲಸಕ್ಕೆ ಮನೆಯಿಂದ ಸ್ಕೂಟರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಡಿವೈಡರ್ ಇರುವ ಪ್ರದೇಶದಲ್ಲಿ ತಿರುಗಿಸುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್​ ಶಾಲೆ ವಾಹನಕ್ಕೆ ಡಿಕ್ಕಿ ಹೊಡೆವುದನ್ನು ತಪ್ಪಿಸಲು ಹೋಗಿ ಸ್ಕೂಟರ್ ಗೆ ಡಿಕ್ಕಿ  ಹೊಡೆದ ಪರಿಣಾಮ  ಬಸ್ಸಿನಡಿ ಸಿಲುಕಿದ್ದು, ಸವಾರ ಗಂಭೀರ ಗಾಯಗೊಂಡು ಜಿಲ್ಲೆಯ ಖಾಸಗಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

    ಬಸ್-ಸ್ಕೂಟರ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.


ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ