ಶಿಹಾಬ್ ತಂಙಳ್ ಸೆಂಟರ್ ತೋಡಾರು: ಈದ್ ಕಿಟ್ ವಿತರಣ

ಶಿಹಾಬ್ ತಂಙಳ್ ಸೆಂಟರ್ ತೋಡಾರು: ಈದ್ ಕಿಟ್ ವಿತರಣ

ಮೂಡಬಿದ್ರೆ: ಇಲ್ಲಿನ ತೋಡಾರು ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ಸಂಘಟನೆ ಕಾರ್ಯಕರ್ತರು ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳಿಗೆ ಈದ್ ಕಿಟ್ ವಿತರಿಸುವ ಮೂಲಕ ಆಸರೆಯಾದರು.
      ಕೋವಿಡ್ ಮಹಮಾರಿಯ ಹಾವಳಿಯಿಂದ ಎಲ್ಕೆಡೆ ಲಾಕ್ ಡೌನ್ ಬಿಸಿ ಅನುಭವಿಸುತ್ತಿದ್ದು ಜನರು ಸಂಪಾದನೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಮಧ್ಯೆ ರಂಝಾನ್ ಹಬ್ಬವೂ ಸಮೀಪಿಸಿದ್ದು ಕೈಯಲ್ಲಿ ಕಾಸಿಲ್ಲದೆ ಹಬ್ಬ ಆಚರಣೆಗೆ ಅಡಚಣೆ ಎದುರಾದ ಕುಂಟುಂಬಗಳನ್ನು ಗುರುತುಸಿ, ಅವರಿಗೆ ವಿವಿಧ ಆಹಾರ ಸಾಮಾಗ್ತಿಗಳುಲ್ಲ ಈದ್ ಕಿಟ್'ಗಳನ್ನು ವಿತರಿಸಲಾಯಿತು.
      ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ, ಸಾಮಾಜಿಕ ಕಳಕಳಿಯುಳ್ಳ ಶಿಹಾಬ್ ತಂಙಳ್ ಫಾರ್ ಹ್ಯುಮಾನಿಟಿ ಸಂಘಟನೆ ತೋಡಾರು ಪ್ರದೇಶದಲ್ಲಿ ಸಕ್ರಿಯವಾಗಿದ್ದು AIKMCC ಬೆಂಗಳೂರು ಘಟಕದ ಸಹಯೋಗದೊಂದಿಗೆ ಈದ್ ಕಿಟ್ ವಿತರಿಸಿದರು. ಈ ಮೂಲಕ ಹಬ್ಬ ಆಚರಣೆಗೆ ಮುಂಚಿತವಾಗಿಯೇ ಹಬ್ಬದ ಖುಷಿಯನ್ನು ಸಂಕಷ್ಟದಲ್ಲಿರುವವರೊಂದಿಗೆ ಹಂಚಿಕೊಂಡರು.
      ಕಿಟ್ ವಿತರಣೆ ಸಂದರ್ಭದಲ್ಲಿ ತೋಡಾರು ಗ್ರಾಮ ಪಂಚಾಯತ್ ಸದಸ್ಯ ಮುಸ್ಲಿಂ ಲೀಗಿನ ನೇತಾರ ಎಂ.ಎ.ಅಶ್ರಫ್ ತೋಡಾರು, ಹನೀಫ್ ತೋಡಾರು, ಇಮ್ತಿಯಾಝ್ ತೋಡಾರು, ಅನೀಸ್, ಝಾಕೀರ್ ಮುಂತಾದವರು ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ