ಶಮಿಯನ್ನು ಬೆಂಬಲಿಸಿದ ಕೊಹ್ಲಿಗೆ 9 ತಿಂಗಳ ಮಗಳ ಅತ್ಯಾಚಾರ ಬೆದರಿಕೆ: ಇದು ಯಾವ ಸಂಸ್ಕಾರ?

ಕ್ರಿಕೆಟ್‌ ತಾರೆ ಮುಹಮ್ಮದ್‌ ಶಮಿಯನ್ನು ಬೆಂಬಲಿಸಿದ್ದಕ್ಕಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯ ಮಗಳ ಮೇಲೆ ಬಲಾತ್ಕಾರ ನಡೆಸುವ ಬೆದರಿಕೆ ಹಾಕಲಾಗಿದೆ

ಶಮಿಯನ್ನು ಬೆಂಬಲಿಸಿದ ಕೊಹ್ಲಿಗೆ 9 ತಿಂಗಳ ಮಗಳ ಅತ್ಯಾಚಾರ ಬೆದರಿಕೆ: ಇದು ಯಾವ ಸಂಸ್ಕಾರ?

ನವದೆಹಲಿ: ಕ್ರಿಕೆಟ್‌ ತಾರೆ ಮುಹಮ್ಮದ್‌ ಶಮಿಯನ್ನು ಬೆಂಬಲಿಸಿದ್ದಕ್ಕಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯ ಮಗಳ ಮೇಲೆ ಬಲಾತ್ಕಾರ ನಡೆಸುವ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಒಂಭತ್ತು ತಿಂಗಳು ಪ್ರಾಯವಿರುವ ಕೊಹ್ಲಿ ಮಗಳ ಮೇಲೆ ಅತ್ಯಾಚಾರದ ಬೆದರಿಕೆ ಕೇಳಿ ಬಂದಿದೆ.

      ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ಮಧ್ಯೆ ಪ್ರವೇಶಿಸಿ, ದೆಹಲಿ ಪೋಲೀಸರಿಗೆ ನೋಟೀಸು ಜಾರಿಗೊಳಿಸಿದೆ. ಡ್ವೀಟ್‌ ಡಿಲೀಟ್‌ ಮಾಡಲಾಗಿದ್ದರೂ ಅದರ ಸ್ಕ್ರೀನ್‌ ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

      ಟ-20 ವಿಶ್ವ ಕಪ್‌ ಪಂದ್ಯವಾಳಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲನುಭವಿಸಿದ ಹಿನ್ನೆಲೆಯಲ್ಲಿ ಭಾರತದ ವೇಗದ ಬೌಲರ್‌ ಮುಹಮ್ಮದ್‌ ಶಮಿಯ ಜಾತಿಯನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವ ಕೆಲಸವನ್ನು ಮಾಡಲಾಗಿತ್ತು. ನಂತರ ಸಹ ಆಟಗಾರರು ಹಾಗೂ ಮಾಜಿ ಕ್ರಿಕೆಟಿಗರು ಜಾತಿ ಆಧಾರದಲ್ಲಿ ನಿಂದಿಸುವುದರ ವಿರುದ್ದ ಮುಹಮ್ಮದ್‌ ಶಮಿ ಬೆಂಬಲಕ್ಕೆ ನಿಂತಿದ್ದರು.

      ಕೊಹ್ಲಿ ಶಮಿಗೆ ಬೆಂಬಲ ವ್ಯಕ್ತಪಡಿಸಿತ್ತಿದ್ದಂತೆ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಬಂದಿದ್ದವು. ಇದೀಗ ಕೊಹ್ಲಿಯವರ ಒಂಭತ್ತು ವರ್ಷದ ಮಗಳ ಮೇಲೆ ಅತ್ಯಾಚಾರದ ಬೆದರಿಕೆಯೂ ಬಂದಿದೆ.

      ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಪಾಕಿಸ್ತಾನದ ಮಾಜಿ ನಾಯಕ ಟೀಮ್ ಇಂಡಿಯಾ ನಾಯಕ ಇಂಜಮಾಮ್ ಉಲ್ ಹಕ್, ವಿರಾಟ್ ಕೊಹ್ಲಿ ಅವರ ಪುತ್ರಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಗೆ ಹಾಕಿರುವ ಘಟನೆ ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಹೆಳಿದ್ದಾರೆ.

      ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡಾ ವಿರಾಟ್‌ ಕೊಹ್ಲಿಗೆ ಬೆಂಬಲ ಘೋಷಿಸಿದ್ದಾರೆ.

      ದೇಶದಲ್ಲಿ ಕೋಮು ದ್ವೇಷ ಹರಡುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದ್ದರೂ, ಏನೂ ಅರಿಯದ ಪುಟ್ಟ ಮುಗ್ದ ಮಗುವಿನ ಅತ್ಯಾಚಾರದ ಬೆದರಿಕೆ ಒಡ್ಡಿರುವುದು ಅತ್ಯಂತ ಕೀಳು ಮಟ್ಟದ ತಂತ್ರವಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ