ವಾಹನ ಸವಾರರಿಗೆ ಬಿಗ್‌ ಶಾಕ್ʼ: 2 ವಾರದಲ್ಲಿ 13 ಬಾರಿ ಪರಿಷ್ಕರಣೆಗೊಂಡ ಇಂಧನ ದರ

ವಾಹನ ಸವಾರರಿಗೆ ಬಿಗ್‌ ಶಾಕ್ʼ:  2 ವಾರದಲ್ಲಿ 13 ಬಾರಿ ಪರಿಷ್ಕರಣೆಗೊಂಡ ಇಂಧನ ದರ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸತತವಾಗಿ ಬೆಲೆ ಏರಿಕೆಯಾಗುತ್ತಿದ್ದು ಕಳೆದ 15

  ದಿನಗಳ ಅವಧಿಯಲ್ಲಿ ಇದು 13ನೇ ಬಾರಿಗೆ ಇಂಧನದ ದರ ಪರಿಷ್ಕರಣೆಯಾಗಿದೆ.

    ಇಂದು ಪೆಟ್ರೋಲ್​ ದರ ಲೀಟರಿಗೆ 25 ಪೈಸೆ ಹಾಗೂ ಡೀಸೆಲ್ ದರ ಲೀಟರಿಗೆ 27 ಪೈಸೆ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 85.91 ರೂಪಾಯಿ, ಡೀಸೆಲ್ ದರ 77.73 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಕಳೆದ 15 ದಿನಗಳ ಅವಧಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರಿಗೆ 2.07 ರೂಪಾಯಿ ಮತ್ತು ಡೀಸೆಲ್ ದರ ಪ್ರತಿ ಲೀಟರಿಗೆ 2.86 ರೂಪಾಯಿ ಹೆಚ್ಚಳವಾಗಿದೆ.ಇದು 2018ರ ಸೆಪ್ಟೆಂಬರ್ ತಿಂಗಳ ನಂತರ ಕಳೆದ ಎರಡು ವರ್ಷಗಳಲ್ಲಿ ಅತ್ಯಂತ ಗರಿಷ್ಠ ದರವಾಗಿದೆ. ಕೊರೋನಾ ಕಷ್ಟ ಕಾಲದಲ್ಲಿ ಇದು ಜನ ಸಾಮಾನ್ಯರಿಗೆ ಇನ್ನಷ್ಟೂ ಹೊರೆಯಾಗಿ ಪರಿಣಮಿಸಿದೆ. ಸರಕಾರವು ಈ ಬಗ್ಗೆ ಮಧ್ಯೆ ಪ್ರವೇಶಿಸಿ ತೈಲ ದರವನ್ನು ನಿಯಂತ್ರಿಸಬೇಕಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ