ವಾಸಿಂ ರಿಜ್ವಿ ರಚಿಸಿದ ಹೊಸ ಕುರಾನ್: ಬಳಕೆಯ ಅನುಮತಿಗಾಗಿ ಪ್ರಧಾನಿಗೆ ಪತ್ರ

ವಾಸಿಂ ರಿಜ್ವಿ ರಚಿಸಿದ ಹೊಸ ಕುರಾನ್: ಬಳಕೆಯ ಅನುಮತಿಗಾಗಿ ಪ್ರಧಾನಿಗೆ ಪತ್ರ

ಲಖನೌ: ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ಈಗಿರುವ ಕುರಾನ್​ನಲ್ಲಿ ಬದಲಾವಣೆಗಳನ್ನು ಮಾಡಿ ಹೊಸ ಕುರಾನ್​ ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆ ಕುರಾನ್​ ಬಳಕೆಗೆ ಅವಕಾಶ ಮಾಡಿಕೊಡಿ ಎಂದು ಪ್ರಧಾನಿಗೆ ಮನವಿ ಪತ್ರವನ್ನೂ ಬರೆದಿದ್ದಾರೆ.

      ಈಗಿರುವ ಕುರಾನ್​ನಲ್ಲಿ ಕಾನೂನನ್ನು ಉಲ್ಲಂಘಿಸಿ ಉಗ್ರವಾದವನ್ನು ಉತ್ತೇಜಿಸುವಂತಹ 26 ಪದ್ಯಗಳನ್ನು ರಿಜ್ವಿ ತೆಗೆದುಹಾಕಿದ್ದಾರಂತೆ. ಹಾಗಾಗಿ ಈ ಹೊಸ ಕುರಾನ್​ ಅನ್ನು ದೇಶದ ಎಲ್ಲ ಮದರಸ ಹಾಗೂ ಮುಸ್ಲಿಂ ಸಂಸ್ಥೆಗಳಲ್ಲಿ ಬಳಸಲು ಅಧಿಕಾರ ಮಾಡಿಕೊಡಿ ಎಂದು ಅವರು ಮನವಿಯಲ್ಲಿ ಕೇಳಿಕೊಂಡಿದ್ದಾರೆ.

      ಹಾಗೆಯೇ ಈ ಕುರಾನ್​ ಅನ್ನು ಶೀಘ್ರವೇ ಮಾರುಕಟ್ಟೆಗೆ ತರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

      ರಿಜ್ವಿ ಅವರು ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಿದ್ದರು. ಇದೀಗ ಹೊಸ ಕುರಾನ್​ ಮೂಲಕ ಸುದ್ದಿಯಾಗುತ್ತಿದ್ದಾರೆ.

      ಭಯೋತ್ಪಾದನೆ ಮತ್ತು ಜಿಹಾದನ್ನು ಪ್ರೋತ್ಸಾಹಿಸುವ ಭಾಗಗಳನ್ನು ಕುರ್'ಆನ್ ನಿಂದ ತೆಗೆದು ಹಾಕಬೇಕು ಎಂದು ಈತ ಈ ಹಿಂದೆ ದಾವೆ ಹೂಡಿದ್ದ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ