ವಿವಾದಾತ್ಮಕ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಮಸೀದಿ: ಸರ್ವೇ ನಡೆಸಲು ಕೋರ್ಟ್ ಅನುಮತಿ

ವಿವಾದಾತ್ಮಕ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಮಸೀದಿ: ಸರ್ವೇ ನಡೆಸಲು ಕೋರ್ಟ್ ಅನುಮತಿ
republicday728
republicday468
republicday234

ನವದೆಹಲಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪೀ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ವಾರಣಾಸಿ ನ್ಯಾಯಾಲಯವು ಗುರುವಾರ (ಏಪ್ರಿಲ್ 8) ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿಗೆ (ASI) ಅನುಮತಿ ನೀಡಿತು. ಸಮೀಕ್ಷೆಯ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
     ಜ್ಞಾನವಾಪಿ ಮಸೀದಿ ನಿಂತಿರುವ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ಕೋರಿ ವಕೀಲ ವಿಜಯ್ ಶಂಕರ್ ರಾಸ್ತೋಗಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಉರುಳಿಸಿದ ನಂತರ 1664 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಈ ಮಸೀದಿಯನ್ನು ನಿರ್ಮಿಸಿದರೆಂದು ಅರ್ಜಿದಾರರು ಹೇಳಿಕೊಂಡಿದ್ದಾರೆ.
      ಜ್ಞಾನವಾಪಿ ಕಂಪೌಂಡ್‌ನ ಸಮೀಕ್ಷೆ ಕೋರಿದ ಅರ್ಜಿಯ ವಿರುದ್ಧ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ 2020 ರ ಜನವರಿಯಲ್ಲಿ ಆಕ್ಷೇಪಣೆ ಸಲ್ಲಿಸಿತ್ತು. ನ್ಯಾಯಾಲಯದ ಆದೇಶದ ನಂತರ, ಎಎಸ್ಐ ಸಮೀಕ್ಷೆ ನಡೆಸಲು ಸಮಿತಿಯನ್ನು ರಚಿಸುವ ನಿರೀಕ್ಷೆಯಿದೆ.

      ಶತಮಾನಗಳ ಕಾಲ ವಿವಾದದಲ್ಲೇ ಮುಳುಗಿದ್ದ ಬಾಬರೀ ಮಸೀದಿ ವಿವಾದ ಒಂದು ಹಂತಕ್ಕೆ ತಲುಪುತ್ತಿದ್ದಂತೆ ಮತ್ತೊಂದು ವಿವಾದಾತ್ಮಕ ಮಸೀದಿ ಸರ್ವೇ ಕಾರ್ಯ ಆರಂಭವಾಗುತ್ತಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ