ವರ್ಕಾಡಿ ಪಂಚಾಯತ್ ದುಬೈ KMCC ನೂತನ ಸಮಿತಿ: ಅಬ್ದುಲ್ ರಝಾಕ್ ಪಾತೂರು ಅಧ್ಯಕ್ಷರಾಗಿ ಆಯ್ಕೆ

ವರ್ಕಾಡಿ ಪಂಚಾಯತ್ ದುಬೈ KMCC ನೂತನ ಸಮಿತಿ: ಅಬ್ದುಲ್ ರಝಾಕ್ ಪಾತೂರು ಅಧ್ಯಕ್ಷರಾಗಿ ಆಯ್ಕೆ

*ದುಬೈ KMCC ವರ್ಕಾಡಿ ಪಂಚಾಯತ್ ನೂತನ ಸಮಿತಿ ರಚನಾ ಸಭೆ*

ದುಬೈ: ದುಬೈ ವರ್ಕಾಡಿ ಪಂಚಾಯತ್ KMCCಯ 2023-25 ರ ಸಾಲಿನ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಪಾತೂರು ಇವರನ್ನು ಆಯ್ಕೆ ಮಾಡಲಾಯಿತು.

      ಅಬ್ದುಲ್ ರಝಾಕ್ ಪಾತೂರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಪಾತೂರು ಪಂಚಾಯತ್ KMCC ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಭೆಯು ದುಬೈನಲ್ಲಿರುವ ಅಬುಹೈಲ್ KMCC ಕಛೇರಿಯಲ್ಲಿ ಜರುಗಿತು.

      ದುಬೈ KMCC ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ವಿ.ವಿ.ಎಂ ಅಶ್ರಫ್ ಅವರು ಕಾರ್ಯಕ್ರಮದಲ್ಲಿ ಪ್ರಾರ್ಥನೆ ನೆರವೇರಿಸಿ ಮಾತನಾಡಿದರು. ದುಬೈ ಕೆ.ಎಂ.ಸಿ.ಸಿ ಮಂಜೇಶ್ವರ ಮಂಡಲ ಕೋಶಾಧಿಕಾರಿ ಇಬ್ರಾಹಿಂ ಬೇರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

      ಮಂಜೇಶ್ವರ ಮಂಡಲ ದುಬೈ ಕೆ.ಎಂ.ಸಿ.ಸಿ ಮುಖಂಡರಾದ ಝುಬೈರ್ ಕುಬಣೂರು, ಸೈಫುದ್ಧೀನ್ ಮೊಗ್ರಾಲ್, ಅಶ್ರಫ್ ಬಾಯಾರ್,  ಅಬ್ದುಸ್ಸಲಾಂ ಪಡುಲಡ್ಕ ಮೊದಲಾದವರು ಭಾಷಣಗೈದರು. ಬಳಿಕ 2023-25 ರ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

      ಮುಖ್ಯ ಸಲಹೆಗಾರರಾಗಿ ಅಶ್ರಫ್ ವಿ.ವಿ.ಎಂ ಪಾವೂರು ಮತ್ತು ಅಬ್ದುಲ್ ಖಾದರ್ ಕೆದುಂಬಾಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು:

ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಪಾತೂರು
ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕೆ.ಕೆ. ಪಾವೂರು
ಕೋಶಾಧಿಕಾರಿಯಾಗಿ ಮನ್ಸೂರ್ ಎ.ಕೆ. ಆನೆಕಲ್ಲು ಉಪಾಧ್ಯಕ್ಷರುಗಳಾಗಿ ಅಲೀ ಹಾಜಿರ್ ಓರ್ಪುರಂಕೋಡಿ, ಖಾಸಿಂ ಹಾಜಿ, ಖಲೀಲ್ ಕೋಡಿ ಮತ್ತು ಮುಸ್ತಫಾ ಪಿ.ಬಿ ಸಹ ಕಾರ್ಯದರ್ಶಿಗಳಾಗಿ ಸಾದಿಕ್ ಬದಿಯಾರ್, ಶಾಕಿರ್ ಕಜೆ, ಫರ್ವಾಝ್ ಕೆದುಂಬಾಡಿ, ಸಮದ್ ಪೊಯ್ಯತ್ತಬೈಲು ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

      ಮನ್ಸೂರ್ ಎ.ಕೆ. ಆನೆಕಲ್ಲು ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಶ್ರಫ್ ಕೆ. ಕೆ ವಂದಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ