ವಿಧಾನ ಪರಿಷತ್‌ ಚುನಾವಣೆ: 17 ಮಂದಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ದಕ್ಷಿಣ ಕನ್ನಡಕ್ಕೆ ಮಂಜುನಾಥ ಭಂಡಾರಿ

ವಿಧಾನ ಪರಿಷತ್‌ ಚುನಾವಣೆ: 17 ಮಂದಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ದಕ್ಷಿಣ ಕನ್ನಡಕ್ಕೆ ಮಂಜುನಾಥ ಭಂಡಾರಿ

ನವದೆಹಲಿ: ರಾಜ್ಯ ವಿಧಾನ ಪರಿಷತ್‌ನ ವಿವಿಧ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಸೋಮವಾರ ಸಂಜೆ ಘೋಷಿಸಿದೆ.

      ಬೀದರ್‌, ಕೋಲಾರ, ಬೆಂಗಳೂರು ನಗರ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಸಂಬಂಧ ಗೊಂದಲ ಇದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಟಿಕೆಟ್‌ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

      ದಕ್ಷಿಣ ಕನ್ನಡಕ್ಕೆ ಮಂಜುನಾಥ ಭಂಡಾರಿ, ಬಳ್ಳಾರಿಯಿಂದ ಹಾಲಿ ಸದಸ್ಯ ಕೆ.ಸಿ. ಕೊಂಡಯ್ಯ ಅವರಿಗೆ ಟಿಕೆಟ್‌ ನೀಡಲಾಗಿದ್ದರೆ, ಹುಬ್ಬಳ್ಳಿ–ಧಾರವಾಡ, ಗದಗ, ಹಾವೇರಿ ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಅವರಿಗೆ ಟಕೆಟ್‌ ಹಂಚಿಕೆ ಮಾಡಲಾಗಿದೆ.

      ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 17 ಕ್ಷೇತ್ರಗಳಿಗೆ ಮಾತ್ರ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಪಟ್ಟಿ ಈ ಕೆಳಕಂಡಂತಿದೆ.

ಕಲ್ಬುರ್ಗಿ - ಶ್ರೀ ಶಿವಾನಂದ ಪಾಟೀಲ್‌ ಮಾರ್ತೂರು

ಬೆಳಗಾವಿ - ಶ್ರೀ ಚನ್ನರಾಜ ಬಸವರಾಜ ಹತ್ತಿಹೊಳಿ

ಉತ್ತರ ಕನ್ನಡ - ಶ್ರೀ ಭೀಮಣ್ಣ ನಾಯ್ಕ್‌

ಹುಬ್ಳಿ-ಧಾರವಾಡ-ಗದಗ-ಹಾವೇರಿ - ಶ್ರೀ ಸಲೀಂ ಅಹ್ಮದ್‌

ಚಿತ್ರದುರ್ಗ - ಶ್ರೀ ಬಿ.ಸೋಮಶೇಖರ

ರಾಯಚೂರು - ಶ್ರೀ ಶರನ ಗೌಡ ಅನ್ನದಾನ ಗೌಡ ಪಾಟೀಲ್‌

ಶಿವಮೊಗ್ಗ - ಶ್ರೀ ಆರ್.‌ ಪ್ರಸನ್ನ ಕುಮಾರ್‌

ದಕ್ಷಿನ ಕನ್ನಡ - ಶ್ರೀ ಮಂಜುನಾಥ ಭಂಡಾರಿ

ಚಿಕ್ಕಮಗಳೂರು - ಶ್ರೀಮತಿ ಎ.ವಿ.ಗಾಯತ್ರಿ ಶಾಂತೇ ಗೌಡ

ಹಾಸನ - ಶ್ರೀ ಎಂ.ಶಂಕರ್‌

ತುಮಕೂರು - ಶ್ರೀ ಬಿ. ರಾಜೇಂದ್ರ

ಮಂಡ್ಯ - ಶ್ರೀ ಎಂ.ಜಿ.ಗೂಳಿ ಗೌಡ

ಬೆಂಗಳುರು ಗ್ರಾಮಾಂತರ - ಶ್ರೀ ಎಸ್.ರವಿ

ಕೊಡಗು - ಡಾ. ಮಂತರ್‌ ಗೌಡ

ಬಿಜಾಪುರ-ಬಾಗಲ್‌ ಕೋಟೆ - ಶ್ರೀ ಸುನಿಲ್‌ ಗೌಡ ಪಾಟೀಲ್‌

ಮೈಸೂರು-ಚಾಮರಾಜ ನಗರ - ಡಾ.ಡಿ.ತಿಮ್ಮಯ್ಯ

ಬಳ್ಳಾರಿ - ಶ್ರೀ ಕೆ.ಸಿ.ಕೊಂಡಯ್ಯ

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ