ವಾದಿತ್ವಯ್ಬ ವಾಫಿ ಕಾಲೇಜು 4ನೇ ವಾರ್ಷಿಕೋತ್ಸವ ದಿನಾಂಕ ಘೋಷಣೆ: ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮೂಸಾ ಹಾಜಿ ಕುರಿಯಕ್ಕರ್

ವಾದಿತ್ವಯ್ಬ ವಾಫಿ ಕಾಲೇಜು 4ನೇ ವಾರ್ಷಿಕೋತ್ಸವ ದಿನಾಂಕ ಘೋಷಣೆ: ಸ್ವಾಗತ ಸಮಿತಿ ಅಧ್ಯಕ್ಷರಾಗಿ  ಮೂಸಾ ಹಾಜಿ ಕುರಿಯಕ್ಕರ್

ಮಂಗಳೂರು: ಕಿನ್ಯ ವಾದಿತ್ವಯ್ಬದ ಶಂಸುಲ್‌ ಉಲಮಾ ದಾರುಸ್ಸಲಾಂ ಅಕಾಡೆಮಿಯ ವಾಫಿ ಕಾಲೇಜು ಹಾಗೂ ಶಂಸುಲ್‌ ಉಲಮಾ ಶರೀಅತ್‌ ಕಾಲೇಜಿನ 4ನೇ ವಾರ್ಷಿಕೋತ್ಸವವು 2021 ಡಿಸೆಂಬರ್‌ ತಿಂಗಳ 17,18 ಹಾಗೂ 19ನೇ ತಾರೀಕುಗಳಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸಯ್ಯಿದ್‌ ಅಮೀರ್‌ ತಂಙಳ್‌ ಅಲ್-ಬುಖಾರಿ ಕಿನ್ಯ ತಿಳಿಸಿದ್ದಾರೆ.

      ಡಿಸೆಂಬರ್‌ 17ರಂದು ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುಲ್‌ ಜಾಮಿಯ ಶೈಖುನಾ ಆಲಿ ಕುಟ್ಟಿ ಉಸ್ತಾದ್‌ ಕಾರ್ಯಕ್ರಮ ಉದಾಟಿಸಲಿದ್ದು, ಡಿಸೆಂಬರ್‌ 19ರಂದು ಸಮಾರೋಪ ಸಮಾರಂಭದಲ್ಲಿ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್‌ ಉಲಮಾ ಸಯ್ಯಿದ್‌ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್‌ ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಸಯ್ಯಿದ್‌ ಅಮೀರ್‌ ತಂಙಳ್‌ ತಿಳಿಸಿದರು.

      ಭಾನುವಾರದಂದು ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವದ ದಿನಾಂಕಗಳನ್ನು ಘೋಷಿಸಲಾಗಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

      ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮೂಸಾ‌ ಹಾಜಿ ಕುರಿಯಕ್ಕರ್, ಪ್ರಧಾನ ಕಾರ್ಯದರ್ಶಿಯಾಗಿ‌ ಅಬ್ಬುಚ್ಚ ಯಾನೆ ಮೊಯಿದಿನ್‌ ಕುಂಞಿ, ಕೋಶಾಧಿಕಾರಿಗಳಾಗಿ ಜಮಾಲ್ ಮಂಗಳನಗರ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸ್ವಾಗತ ಸಮಿತಿ ವಿವರಗಳು: ನಿರ್ದೇಶಕರುಗಳಾಗಿ ಸಯ್ಯಿದ್ ಅಮೀರ್ ತಂಙಳ್ ಅಲ್-ಬುಖಾರಿ ಕಿನ್ಯ ಹಾಗೂ ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಅಲ್-ಬುಖಾರಿ ಆನೆಕಲ್ಲು

      ಸಹ ನಿರ್ದೇಶಕರುಗಳಾಗಿ  ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್ ಹಾಗೂ ಸಿರಾಜುದ್ಧೀನ್ ಹಾಜಿ ಅಲಂಕಾರು.

     ಉಪಾಧ್ಯಕ್ಷರುಗಳಾಗಿ ಫಾರೂಖ್ ಉಕ್ಕುಡ, ಅಬ್ದುಲ್ ಖಾದರ್ ಹಾಜಿ ಕಿನ್ಯ ಹಾಗೂ ಸಿರಾಜ್ ಕಿನ್ಯ ಸಹ ಕಾರ್ಯದರ್ಶಿಯಾಗಿ ಬಿ.ಎಮ್ ಇಬ್ರಾಹಿಂ. ವರ್ಕಿಂಗ್ ಕಾರ್ಯದರ್ಶಿಯಾಗಿ ಸಮದ್ ತಾಜ್ ಮೆಡಿಕಲ್, ಸಿರಾಜ್ ಬೆಂಗಳೂರು, ಶೇಕ್ ಕುಂಞ ಕುರಿಯಕ್ಕಾರ್, ಸದಸ್ಯರುಗಳಾಗಿ ಮಮ್ಮುಚ್ಚ ಟಿ.ಎಂ, ಕಿನ್ಯ, ಇಬ್ರಾಹಿಂ ಸಾಗ್, ಹಮೀದ್ ಪರ್ಮಾಂದ, ಮೊಹಿದಿನ್ ಪಲ್ಡಾದಿ, ಸಿರಾಜ್ ಸಪ್ನ, ಶಾಕಿರ್ ಸಿ.ವಿ, ಖಾದರ್ ಕುರಿಯಕ್ಕಾರ್ ಕಿನ್ಯ, ಅಬ್ದುಲ್ಲಾ ಪಾರೆ, ಅಶ್ರಫ್ ಸಿ.ವಿ, ಹಮೀದ್ ಎಂಟು ಬ್ರದರ್ಸ್, ಇಸ್ಮಾಯಿಲ್ ಸಿ.ವಿ, ಕೆ.ಕೆ. ಹಸೈನಾರ್ ಇವರುಗಳನ್ನು ಆಯ್ಕೆ ಮಾಡಲಾಯಿತು. 

      ಹಣಕಾಸು ಸಮಿತಿ ಮುಖ್ಯಸ್ಥರಾಗಿ ಸಿದ್ಧೀಖ್ ಅಬ್ದುಲ್ ಖಾದರ್ ಬಂಟ್ವಾಳ, ಸದಸ್ಯರುಗಳಾಗಿ ಮುಹಮ್ಮದ್ ಮೇಸ್ತ್ರಿ ಕುಂಞಿಮೋನು ಎಂ.ಎನ್. ಅಬೂಬಕ್ಕರ್ ತಾಜ್ ಮೆಟಲ್, ಬಾವುಚ್ಚ ಪಡ್ಪು, ಮೊಯಿದಿನ್ ಮೀಂಪ್ರಿ, ಇಸಾಖ್ ಹಾಜಿ ನಾಟೆಕಲ್.

      ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೌಶಾದ್ ಮಲಾರ್, ಶಮೀರ್ ವಾದಿತ್ವೈಬ, ರಫೀಖ್ ವಾದಿತ್ವೈಬ, ಹಬೀಬ್ ಮೌಲವಿ ಉಕ್ಕುಡ, ರಂಶೀದ್ ರಹ್ಮತ್ ನಗರ, ರಫೀಖ್ ಬಿನ್ ಅಲ್-ಅಮೀನ್, ಇಸ್ರಾರ್ ಗೂಡಿನಬಳಿ, ಮುಸ್ತಫಾ ಕಟ್ಟದಪಡ್ಪು, ಶಾಕೀರ್, ಮಿತ್ತಬೈಲು, ತಮೀಮ್ ಸಿ.ಕೆ. ಸಫ್ವಾನ್ ಬಂಟ್ವಾಳ, ಕೌಸರ್ ಪೂಂಜಾಲಕಟ್ಟೆ, ನೌಶಾದ್ ದೇರಳಕಟ್ಟೆ, ಅಝೀಮ್ ನಾಟೆಕಲ್, ಹನೀಫ್ ಹನಿಯಾದ್ ಕುಂಜತ್ತೂರು, ಸವಾದ್ ಗೂಡಿನಬಳಿ, ಫಾರೂಖ್ ನಂದಾವರ, ಕಮಾಲ್ ನಂದಾವರ, ಲತೀಫ್ ಫಜೀರು, ಶಮೀರ್ ಎಚ್.ಕಲ್ಲು, ಖಾದರ್ ಮೋಂಟುಗೋಳಿ, ಮುಹಮ್ಮದ್ ದೇರಿಕಟ್ಟೆ, ಉವೈಸ್ ತೋಕೆ, ಝುಬೈರ್ ಬಂಡಸಾಲೆ ಕಕ್ಕಿಂಜೆ,  ಅಝರ್ ಬೆಳ್ಳಾರೆ, ಫಾರೂಖ್ ಮೂಡಬಿದ್ರೆ, ಇಂತಿಯಾಝ್ ಇಡ್ಯಾ, ಝೈನುದ್ಧೀನ್ ಹಳೆಯಂಗಡಿ,  ಅಕ್ಬರ್ ಅಡ್ಡೂರು, ಫಯಾಝ್ ಜೋಕಟ್ಟೆ, ಅಝೀಝ್ ಜಬ್ಬಾರ್ ಬೋಳಿಯಾರ್,  ಶಾಕೀರ್ ಆಲಂಪಾಡಿ, ಅಡ್ವಕೇಟ್ ಬದ್ರುದ್ಧೀನ್ ಕುಕ್ಕಾಜೆ, ಉಬೈದ್ ವಿಟ್ಲ, ಮುನೀರ್ ಆತೂರು, ಜಬ್ಬಾರ್ ಮೌಲವಿ ಕರಾಯ, ಖಾದರ್ ಬಂಗೇರುಕಟ್ಟೆ, ಆಸೀಫ್ ಕಬಕ, ಅತಾವುಲ್ಲಾಹ್, ಗಡಿಯಾರ, ಹಾರಿಸ್ ಕುದ್ರೋಳಿ, ನಝೀರ್ ವಳಚ್ಚಿಲ್, ಹಾರೀಸ್ ವಳಚ್ಚಿಲ್,  ಇರ್ಫಾನ್ ಕಣ್ಣೂರು ಎ.ಎಚ್, ಫಾಝಿಲ್ ಪೇರಿಮಾರ್, ಕಮರ್ ಫರಂಗಿಪೇಟೆ, ಇಮ್ರಾನ್ ಮಾರಿಪಳ್ಳ, ಕಲಂದರ್ ತುಂಬೆ, ಇಸ್ಹಾಕ್ ತುಂಬೆ ಮುಂತಾದವರನ್ನು ಆರಿಸಲಾಯಿತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ