ವಾದಿತ್ವಯ್ಬ: ಗಲ್ಫ್‌ ಪ್ರತಿನಿಧಿ ಸಂಗಮ ನಾಳೆ

ವಾದಿತ್ವಯ್ಬ: ಗಲ್ಫ್‌ ಪ್ರತಿನಿಧಿ ಸಂಗಮ ನಾಳೆ

ದೇರಳಕಟ್ಟೆ: ಇಲ್ಲಿಗೆ ಸಮೀಪದ ಕಿನ್ಯದಲ್ಲಿ ಕಾರ್ಯಾಚರಿಸುತ್ತಿರುವ ಶಂಸುಲ್‌ ಉಲಮಾ ದಾರುಸ್ಸಲಾಂ ಅಕಾಡಮಿ ವಾದಿತ್ವಯ್ಬದಲ್ಲಿ ಆಗಸ್ಟ್‌ 13ರ ಶುಕ್ರವಾರ ಗಲ್ಫ್‌ ಪ್ರತಿನಿಧಿಗಳ ಸಂಗಮ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಯ್ಯಿದ್‌ ಅಮಿರ್‌ ತಂಙಳ್‌ ಅಲ್-ಬುಖಾರಿ ತಿಳಿಸಿದ್ದಾರೆ.

      ಗಲ್ಫ್‌ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ನಾಡಿನ ವಿವಿಧ ಭಾಗಗಳ ಕಾರ್ಯಕರ್ತರು ಶಂಸುಲ್‌ ಉಲಮಾ ದಾರುಸ್ಸಲಾಂ ಅಕಾಡೆಮಿಯ ವಾಫಿ ಕಾಲೇಜಿಗಾಗಿ ಹಗಲಿರುಳು ಕಷ್ಟ ಪಡುವವರಾಗಿದ್ದಾರೆ. ವಿದೇಶದಿಂದ ರಜೆಯಲ್ಲಿ ಊರಿಗೆ ಬಂದ ನಮ್ಮ ಕಾರ್ಯಕರ್ತರ ಜೊತೆ ಕಾಲೇಜಿನ ಅಭಿವೃದ್ದಿ ಮತ್ತು ಅವರ ಕ್ಷೇಮ ಸಮಾಚಾರವನ್ನು ಪರಸ್ಪರ ಹಂಚಿಕೊಳ್ಳುವ ಭಾಗವಾಗಿ ಈ ಗಲ್ಫ್‌ ಮೀಟ್‌ ಆಯೋಜಿಸಲಾಗಿದೆ ಎಂದು ತಂಙಳ್‌ ತಿಳಿಸಿದರು.

      ಕಳೆದ ಏಳು ವರ್ಷಗಳಿಂದ ಧಾರ್ಮಿಕ ವಿದ್ಯಾಭ್ಯಾಸ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಶಂಸುಲ್‌ ಉಲಮಾ ದಾರುಸ್ಸಲಾಂ ಅಕಾಡೆಮಿ ಕಳೆದ ಎರಡು ವರ್ಷಗಳಿಂದ ವಾಫಿ ಕಾಲೇಜಾಗಿ ಮಾರ್ಪಟ್ಟು ಸಮನ್ವಯ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಮಹಿಳೆಯರಿಗಾಗಿ ತ್ವಯ್ಬ ವುಮೆನ್ಸ್‌ ಶರೀಅತ್‌ ಕಾಲೇಜು ಕಳೆದ ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ನಾಲ್ಕನೇ ವರ್ಷದ ಪ್ರವೇಶಾತಿ ಪ್ರಗತಿಯಲ್ಲಿದೆ.

       ವಾದಿತ್ವಯ್ಬ ಗಲ್ಫ್‌ ಪ್ರತಿನಿಧಿ ಸಂಗಮದ ಆಹ್ವಾನ ಲಭಿಸಿದ ಎಲ್ಲಾ ಪ್ರವಾಸಿಗಳು ಹಾಗೂ ಊರಲ್ಲಿದ್ದು ಆಹ್ವಾನ ಲಭಿಸದೆ ಯಾರಾದರೂ ಪ್ರವಾಸಿಗಳು ಬಾಕಿಯಾಗಿದ್ದರೆ ಅಂತಹವರು ಕೂಡಾ ಆಗಸ್ಟ್‌ 13ರಂದು ಸಾಯಂಕಾಲ 4 ಗಂಟೆಗೆ ವಾದಿತ್ವಯ್ಬ ಅಡಿಟೋರಿಯಂನಲ್ಲಿ ನಡೆಯುವ ಗಲ್ಫ್‌ ಮೀಟ್‌ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ಸುಗೊಳಿಸಬೇಕೆಂದು ಸಯ್ಯಿದ್‌ ಅಮೀರ್‌ ತಂಙಳ್‌ ಮನವಿ ಮಾಡಿದ್ದಾರೆ.

      ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್‌ ಬಾತಿಷ ತಂಙಳ್‌ ಅಲ್-ಬುಖಾರಿ, ಪ್ರಧಾನ  ಕೋಶಾಧಿಕಾರಿ ಅಬೂಸ್ವಾಲಿಹ್‌ ಹಾಜಿ, ಕಾರ್ಯದರ್ಶಿ ಸಿರಾಜುದ್ದೀನ್‌ ಅಲಂಕಾರ್‌, ವಾಫಿ ಕಾಲೇಜಿನ ಪ್ರಾಂಶುಪಾಲ ಅಫ್ಸಲ್‌ ವಾಫಿ ಮುಂತಾದವರು ಹಾಜರಿದ್ದರು.

     

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ