ವಿಖಾಯ ಕಾರುಣ್ಯ ಸೇವೆಗೆ ರಾಜ್ಯಪಾಲರ ಔತಣದ ಅಂಗೀಕಾರ

ಧರ್ಮ, ಜಾತಿ ಮತ್ತು ಗಡಿರೇಖೆಗಳ ಹಂಗಿಲ್ಲದೆ ಸೇವೆ ಸಲ್ಲಿಸಿದ ವಿಖಾಯ ಕಾರುಣ್ಯ ಸೇವಕರನ್ನು ಕೇರಳ ರಾಜ್ಯಪಾಲರ ದೂರವಾಣಿ ಕರೆ ಅರಸಿಕೊಂಡು ಬಂದು ಅಭಿನಂದನೆಗಳನ್ನು ಸಲ್ಲಿಸಿದೆಯಲ್ಲದೆ,  ರಾಜಭವನದಲ್ಲಿ ರಾಜ್ಯಪಾಲರ ಜೊತೆ ಭೋಜನ ಸೇವಿಸುವ ಔತಣ ಕೂಟದ ಆಹ್ವಾನವನ್ನೂ ನೀಡಿದೆ.

ವಿಖಾಯ ಕಾರುಣ್ಯ ಸೇವೆಗೆ ರಾಜ್ಯಪಾಲರ ಔತಣದ ಅಂಗೀಕಾರ

ತಿರುವನಂತಪುರಂ: ಧರ್ಮ, ಜಾತಿ ಮತ್ತು ಗಡಿರೇಖೆಗಳ ಹಂಗಿಲ್ಲದೆ ಸೇವೆ ಸಲ್ಲಿಸಿದ ವಿಖಾಯ ಕಾರುಣ್ಯ ಸೇವಕರನ್ನು ಕೇರಳ ರಾಜ್ಯಪಾಲರ ದೂರವಾಣಿ ಕರೆ ಅರಸಿಕೊಂಡು ಬಂದು ಅಭಿನಂದನೆಗಳನ್ನು ಸಲ್ಲಿಸಿದೆಯಲ್ಲದೆ,  ರಾಜಭವನದಲ್ಲಿ ರಾಜ್ಯಪಾಲರ ಜೊತೆ ಭೋಜನ ಸೇವಿಸುವ ಔತಣ ಕೂಟದ ಆಹ್ವಾನವನ್ನೂ ನೀಡಿದೆ.

      ಕೋವಿಡ್‌ನಿಂದ ಮೃತಪಟ್ಟ ತಮಿಳುನಾಡು ಮೂಲದ ದೇವರಾಜ ಎಂಬವರ ಅಂತ್ಯಕ್ರಿಯೆಯನ್ನು ನಿಲಂಬೂರು ಸಿಎಸ್‌ಐ ಚರ್ಚ್‌ನಲ್ಲಿ ನೆರವೇರಿಸಿದ ಎಸ್‌ಕೆಎಸ್‌ಎಸ್‌ಎಫ್‌ ವಿಖಾಯ ಕಾರ್ಯಕರ್ತರ ಜೊತೆ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ದುರವಾಣಿ ಕರೆಯ ಮೂಲಕ ನೇರವಾಗಿ ಮಾತನಾಡಿ ಅಭಿನಂದನೆಗಳನ್ನು ಸಲ್ಲಿಸಿದರು. ಎಸ್‌ಕೆಎಸ್‌ಎಸ್‌ಎಫ್‌ನ ಸನ್ನದ್ಧ ಸೇವಾ ವಿಭಾಗವಾದ ವಿಖಾಯ ಮಲಪ್ಪುರಂ ಜಿಲ್ಲಾ ಸಂಯೋಜಕರಾದ (ಕೋರ್ಡಿನೇಟರ್) ರಶೀದ್‌ ಫೈಝಿಯವರಿಗೆ, ರಾಜ್ಯಪಾಲರು ನೇರವಾಗಿ ಕರೆ ಮಾಡುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.

‌       ಕಾರ್ಯಕರ್ತರು ಮಾಡಿದ ಸೇವೆಯು ಮಾದರಿಯೋಗ್ಯವಾಗಿದೆ. ಇದರಲ್ಲಿ ನಾನು ತುಂಬಾ ಸಂತೋಷಗೊಂಡಿದ್ದೇನೆ ಎಂದು ರಾಜ್ಯಪಾಲರು ತಿಳಿಸಿದರು.

       ವಿಖಾಯವು ಮಾನವೀಯ ಸೇವೆಯನ್ನು ನೀಡುತ್ತಿದೆ.  ನಾನು ಮಲಪ್ಪುರಂಗೆ ಬಂದಾಗ ಎಲ್ಲರನ್ನು ವೈಯಕ್ತಿಕವಾಗಿ ನೋಡಲು ಬಯಸುತ್ತೇನೆ ಎಂದು ಹೇಳಿದ ಗವರ್ನರ್‌ ತನ್ನ ಜೊತೆ ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕಾಗಿ ಆಮಂತ್ರಣವನ್ನೂ ನೀಡಿದರು. ದೇವರಾಜನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ವಿಖಾಯ ತಂಡದ ಸದಸ್ಯರ ಬಗ್ಗೆಯೂ ರಾಜ್ಯಪಾಲರು ಮಾಹಿತಿ ಕೇಳಿದ್ದಾರೆ. ಅಂತ್ಯಕ್ರಿಯೆ ತಂಡದಲ್ಲಿದ್ದ ವಿಕಾಯ ಕಾರ್ಯಕರ್ತರಾದ ರಶೀದ್‌ ಫೈಝಿ ಕಾಳಿಕಾವು, ಕಬೀರ್‌ ಮಾಳಿಯೇಕ್ಕಲ್‌, ನಾಸರ್‌ ಬದರಿ, ನಾಸರ್‌ ವಾಲಕ್ಕಲ್‌ ವೆಟ್ಟ, ಫಝಲುದ್ದೀನ್‌ ತುವ್ವೂರ್‌, ಮೊಯ್ದುಟ್ಟಿ ಕಲ್ಲಾಮೂಲ, ಸಿದ್ದೀಕ್‌ ತರಿಪ್ರಮುಂಡ, ಸಲಾಂ ಫೈಝಿ ಪುಲ್ವೆಟ್ಟ, ನಸ್ರುದ್ದೀನ್‌ ಅರಿಪ್ರಮುಂಡ, ಶಬೀಬ್‌ ಇರಿಂಙಾಟ್ಟಿರಿ ಎಂಬವರನ್ನು ರಾಜ್ಯಪಾಲರು ಅಭಿನಂದಿಸಿದ್ದಾರೆ.

     ತಮಿಳುನಾಡು ವಿರುದ ನಗರ ಮೂಲದ ತಮ್ಮನಾಯಕಂ ವಟ್ಟಿ ಆರೋಗ್ಯ ದೇವರಾಜ್ ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದರು. ಮರಣದ ನಂತರ ಕೋವಿಡ್ ಧೃಡೀಕರಣಗೊಂಡ ಕಾರಣ ಅಂತ್ಯಕ್ರಿಯೆಯು ಬಿಕ್ಕಟ್ಟಿನಲ್ಲಾಯಿತು.

      ದೇವರಾಜನ್ ಅವರ ಕುಟುಂಬ ನಿಲಂಬೂರು ಸಮೀಪದ ಕಾಳಿಕಾವಿಲ್‌ನಲ್ಲಿ 20 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸಿಸುತ್ತಿದೆ. ಮರಣಾ ನಂತರದ ಕರ್ಮಗಳನ್ನು ಹೇಗೆ ನೆರೆವೇರಿಸಬೇಕೆಂದು ತಿಳಿಯದೆ ನಿಸ್ಸಹಾಯಕರಾಗಿದ್ದರು. ಕುಟುಂಬದ ನೆರವಿಗಾಗಿ  ಎಸ್‌ಕೆಎಸ್‌ಎಸ್‌ಎಫ್‌ ವಿಖಾಯ ಕಾರ್ಯಕರ್ತರು ಮುಂದೆ ಬಂದು ನಿಲಂಬೂರ್ ಸೇಂಟ್ ಮ್ಯಾಥ್ಯೂಸ್ ಸಿಎಸ್‌ಐ ಚರ್ಚ್‌ನಲ್ಲಿ ದೇವರಾಜರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಕೊಟ್ಟರು.

    ವಿವಿಧ ಧರ್ಮಗಳವರನ್ನು ಒಳಗೊಂಡಂತೆ, ಕೋವಿಡ್‌ನಿಂದ ಸಾವಿಗೀಡಾದ ಸಾವಿರಕ್ಕೂ ಹೆಚ್ಚು ಜನರ ಮೃತದೇಹಗಳನ್ನು  ವಿಖಾಯ ಕಾರ್ಯಕರ್ತರ ನೇತೃತ್ವದಲ್ಲಿ ಸಮಾಧಿ ಮಾಡಲಾಗಿದೆ.

      ಕೋವಿಡ್ ಸಂತ್ರಸ್ತರ ಮೃತದೇಹಗಳನ್ನು ಸಂಸ್ಕರಿಸಲು ವಿಶೇಷವಾಗಿ ತರಬೇತಿ ಪಡೆದ, ವಿಖಾಯದ ಪ್ರತ್ಯೇಕ ವಿಭಾಗವೇ ಇದೆ. ಕೋವಿಡ್ ಅವಧಿಯಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ 405 ಮೃತದೇಹಗಳನ್ನು, ದ.ಕ. ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮೃತದೇಹಗಳನ್ನು ವಿಖಾಯ ಕಾರ್ಯಕರ್ತರು ಅಂತ್ಯಸಂಸ್ಕಾರ ಮಾಡಿದ್ದಾರೆ.  ವಿವಿಧ ಧರ್ಮಗಳ ಜನರಿಗೆ, ಅವರವರ ಆಚರಣೆಗಳು ಮತ್ತು ಸಂಪ್ರದಾಯಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಗಿದೆ.

 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ