ವಿಖಾಯ ಕಾರುಣ್ಯ ಸೇವೆಗಳಿಗಾಗಿ ಕೈ ಜೋಡಿಸಿ: ಯುಎಇ ಸ್ಫೂರ್ತಿದಾಯಕ ಪಯಣ ದಲ್ಲಿ ಶೈಖುನಾ ಎಂಟಿ ಉಸ್ತಾದ್

ವಿಖಾಯ ಕಾರುಣ್ಯ ಸೇವೆಗಳಿಗಾಗಿ ಕೈ ಜೋಡಿಸಿ: ಯುಎಇ ಸ್ಫೂರ್ತಿದಾಯಕ ಪಯಣ ದಲ್ಲಿ ಶೈಖುನಾ ಎಂಟಿ ಉಸ್ತಾದ್

ದುಬೈ: ಸಮಸ್ತ ಕೇರಳ ಜಮೀಯತುಲ್ ಉಲೆಮಾದ ಅಧೀನ ಸಂಸ್ಥೆಗಳು ಇಂದು ವಿಶ್ವದಾದ್ಯಂತ ತನ್ನ ಸೇವಾ ಚಟುವಟಿಕೆಗಳೊಂದಿಗೆ ಮುನ್ನುಗುತ್ತಿವೆ. ಅದರ ಒಂದು ಭಾಗವಾಗಿ ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಮತ್ತು ವಿಖಾಯ ಕರ್ನಾಟಕ ಯುಎಇ ಸಮಿತಿಗಳು ಕೂಡಾ ಕಾರ್ಯನಿರ್ವಹಿಸುತ್ತಿದೆ. ನಿರಂತರವಾಗಿ ಇಂತಹ ಕಾರುಣ್ಯ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸಂಗಟನೆಗಳೊಂದಿಗೆ ಎಲ್ಲರೂ ಕೈಜೋಡಿಸಬೇಕು  ಎಂದು ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್‌ ಯುಎಇ ಅನಿವಾಸಿ ಕಾರ್ಯಕರ್ತರಿಗೆ ಕರೆ ನೀಡಿದರು.

      ಅವರು ಇತ್ತೀಚೆಗೆ ವಿಖಾಯ ಕರ್ನಾಟಕ ಯುಎಇ ಸಮಿತಿಯ ಪ್ರಥಮ ವಾರ್ಷಿಕ ಸಂಭ್ರಮದ ಸಲುವಾಗಿ ಓನ್‌ಲೈನ್‌ ಮುಖಾಂತರ ಏರ್ಪಡಿಸಿದ "ಸ್ಪೂರ್ತಿದಾಯಕ ಪಯಣ" ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡುತ್ತಿದ್ದರು. ಅಲ್ಲಾಹನು ಎಲ್ಲರಲ್ಲೂ ಕರುಣೆ ತೋರುವವನಾಗಿದ್ದಾನೆ. ಅಲ್ಲಾಹನನ್ನು ಅನುಸರಿಸಿದವರಿಗೂ ಮತ್ತು ಅನುಸರಿಸದೇ ಇರುವವರಿಗೂ ಕರುಣೆ ತೋರುವವನಾಗಿದ್ದಾನೆ ಎಂದು ಪವಿತ್ರ ಕುರಾನ್‌ನ ಮೊದಲ ಸೂಕ್ತದಲ್ಲಿಯೇ ನಮಗೆ ಕಲಿಸಿ ಕೊಡಲಾಗಿದೆ. ಮನುಷ್ಯರೊಂದಿಗೆ ಮತ್ತು ಇತರ ಜೀವಿಗಳೊಂದಿಗೆ ಕರುಣೆ ತೋರಿದವರೊಂದಿಗೆ ಸರ್ವಶಕ್ತನು ಕರುಣೆ ತೋರುವನು ಎಂಬ ಹದೀಸ್ ಸೂಕ್ತ ಗಳ ಬಗ್ಗೆ ವಿವವರಿಸಿದ ಎಂಟಿ ಉಸ್ತಾದ್ ಪವಿತ್ರ ಕುರಾನ್ ಮತ್ತು ಪ್ರವಾದಿವರ್ಯರ ಹದೀಸ್‌ಗಳನ್ನು ನಮ್ಮ ಸ್ವ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಎಲ್ಲರೊಂದಿಗೆ ಕರುಣೆ ತೋರುವ ಮನೋಭಾವನೆಗೆ ಬದ್ದರಾಗಬೇಕು ಎಂದು ಹೇಳಿದರು. 

      ಕಾರ್ಯಕ್ರಮದ ಆರಂಭದಲ್ಲಿ ಸಮಸ್ತ ಕೇರಳ ಜಮೀಯತುಲ್ ಉಲೆಮಾ ಕಾರ್ಯದರ್ಶಿ ಶೈಖುನಾ ಪಿ.ಪಿ ಉಮರ್ ಮುಸ್ಲಿಯಾರ್ ಕೊಯ್ಯೂಡ್ ಅವರು ದುವಾ ನೆರವೇರಿಸಿ ಕಾರ್ಯಕರ್ತರಿಗೆ ಹಿತೋಪದೇಶ ನೀಡಿದರು..

      ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಲ್ ಕೋಲ್ಪೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಖಾಯ ಕರ್ನಾಟಕ ಯುಎಇ ಸಮಿತಿಯ ಕೋರ್ಡಿನೇಟರ್ ಜನಾಬ್ ಅಶ್ರಫ್ ಪರ್ಲಡ್ಕ ಅವರು ಅತಿಥಿಗಳನ್ನು ಸ್ವಾಗತಿಸಿದರು.

      ಮುಖ್ಯ ಪ್ರಬಾಷಣ ನೆರವೇರಿಸಿದ ಕುಟ್ಟನಾಡ್ ಮುಸ್ಲಿಂ ಜಮಾಅತ್ ಇಮಾಮ್, ಖ್ಯಾತ ವಾಗ್ಮಿ ಉಸ್ತಾದ್ ಸಮೀರ್ ದಾರಿಮಿ ಕೊಲ್ಲಂ ಅವರು ಸಾಮಾಜಿಕ ಸೇವೆಯ ಪ್ರಾಮುಖ್ಯತೆ  ಮತ್ತು ಉದ್ದೇಶಗಳ ಬಗ್ಗೆ ಮನ ಮುಟ್ಟುವಂತೆ ವಿವರಿಸಿದರು.

      ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಕರ್ನಾಟಕ ಯುಎಇ ಸಮಿತಿಯ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿ‌ ಶೈಖುನಾ ಎಂ.ಟಿ ಅಬ್ದುಲ್ಲಾ ಮುಸ್ಲಿಯಾರ್ ಅನಾವರಣಗೊಳಿಸಿದರು

      ಕಾರ್ಯಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಳ್, ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ,ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಉಪಾಧ್ಯಕ್ಷರಾದ ಉದ್ಯಮಿ ಜನಾಬ್ ಅಶ್ರಫ್ ಶಾ ಮಾಂತೂರು, ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಕೇಂದ್ರ ಸಮಿತಿಯ ಸದಸ್ಯರಾದ ಜನಾಬ್ ರಶೀದ್ ಹಾಜಿ ಪರ್ಲಡ್ಕ, ಝಾಯೆದ್ ಫೌಂಡೇಶನ್ ಫೈನಾನ್ಸಿಯಲ್ ಕಂಟ್ರೋಲರ್ ಹಾಗೂ ಅನಿವಾಸಿ ಸಾಮಾಜಿಕ ನೇತಾರ ಮಾನ್ಯ ಅಬ್ದುಲ್ಲಾ ಮದುಮೂಲೆ,  ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ಯುಎಇ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಖಾದರ್ ಬೈತಡ್ಕ, ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಕೋಶಾಧಿಕಾರಿ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್,  ವಿಖಾಯ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ನವಾಝ್ ಬಿ.ಸಿ.ರೋಡ್ ಸಂದರ್ಭೋಚಿತವಾಗಿ ಮಾತನಾಡಿದರು

      ಉದ್ಯಮಿ ಜನಾಬ್ ಯೂಸುಫ್ ಈಶ್ವರಮಂಗಲ, ಉದ್ಯಮಿ ಜನಾಬ್ ಮುಸ್ತಾಕ್ ಕದ್ರಿ, ಜನಾಬ್ ಬಷೀರ್ ಬಂಟ್ವಾಳ್, ಉದ್ಯಮಿ ಯೂಸುಫ್ ಬೇರಿಕೆ, ಜನಾಬ್ ಅಶ್ರಫ್ ನಖೀಲ್, ಜನಾಬ್ ಅಶ್ರಫ್ ನಾಟೆಕಲ್, ಜನಾಬ್ ಲತೀಫ್ ಹಾಜಿ ಮದರ್ ಇಂಡಿಯಾ, ಜನಾಬ್ ಅಶ್ರಫ್ ಯಾಕೂತ್, ಜನಾಬ್ ರವೂಫ್ ಹಾಜಿ ಕೈಕಂಬ, ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಕಾರ್ಯಾಧ್ಯಕ್ಷರಾದ ಜನಾಬ್ ರಫೀಕ್ ಆತೂರು, ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಉಪಾಧ್ಯಕ್ಷರಾದ ಅಬ್ದುಲ್ ಸಲಾಂ ಬಪ್ಪಲಿಗೆ, ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಯುಎಇ ಉಪಾಧ್ಯಕ್ಷರು, ದಾರುನ್ನೂರು ಯುಎಇ ಸಮಿತಿಯ ಅಧ್ಯಕ್ಷರಾದ ಜನಾಬ್ ಶಂಸುದ್ದೀನ್ ಸೂರಲ್ಪಾಡಿ, ಎಸ್‌ಕೆಎಸ್‌ಎಸ್‌ಎಫ್ ಸಹಚಾರಿ ಕರ್ನಾಟಕ ಯುಎಇ ಚಯರ್ ಮೇನ್, ನೂರುಲ್ ಹುದಾ ಯುಎಇ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು, SKSSF ಸರ್ಗಲಯ ಕರ್ನಾಟಕ ಯುಎಇ ಚಯರ್ ಮೇನ್ ಬದ್ರುದ್ದೀನ್ ಹೆಂತಾರ್, ದಾರುಸ್ಸಲಾಂ ಬೆಳ್ತಂಗಡಿ ಯುಎಇ ಕಾರ್ಯಾಧ್ಯಕ್ಷರಾದ ಜನಾಬ್ ರಝಾಕ್ ಸೋಂಪಾಡಿ,  SKSSF ಕರ್ನಾಟಕ ಅಬುಧಾಬಿ ಅಧ್ಯಕ್ಷರಾದ ಸಹೀರ್ ಹುದವಿ ಹಾಗೂ ಕರ್ನಾಟಕ ಇಸ್ಲಾಮಿಕ್ ಸೆಂಟರ್ ದಾರುನ್ನೂರು ಯುಎಇ ಸಮಿತಿ, ನೂರುಲ್ ಹುದಾ ಯುಎಇ ಸಮಿತಿ, ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ಯುಎಇ ಸಮಿತಿ, ದಾರುಸ್ಸಲಾಂ ಬೆಳ್ತಂಗಡಿ ಯುಎಇ ಸಮಿತಿಯ ಪದಾಧಿಕಾರಿಗಳು  ಉಪಸ್ಥಿತರಿದ್ದರು

      ಎಸ್‌ಕೆಎಸ್‌ಎಸ್‌ಎಫ್ ಟ್ರೆಂಡ್ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ಜನಾಬ್ ನೂರ್ ಮುಹಮ್ಮದ್ ನೀರ್ಖಜೆ ಅವರು ಕಾರ್ಯಕ್ರಮ ನಿರೂಪಿಸಿದರು. ವಿಖಾಯ ಕರ್ನಾಟಕ ಯುಎಇ ಸಮಿತಿಯ ಸಂಚಾಲಕ  ಅಬ್ದುಲ್ ಅಝೀಝ್ ಸೋಂಪಾಡಿ ಅವರು ಧನ್ಯವಾದಗೈದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ