ಲಾಕ್ ಡೌನ್ ನಿಯಮ ಮೀರಿದ ವ್ಯಾಪಾರಿ: ಬಂಟ್ವಾಳದಲ್ಲಿ ಪ್ರಕರಣ ದಾಖಲು

ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ ಮೆಲ್ಕಾರ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ಹಾರ್ಡ್‌ವೇರ್ ಅಂಗಡಿ ಮಾಲಕನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್ ಡೌನ್ ನಿಯಮ ಮೀರಿದ ವ್ಯಾಪಾರಿ: ಬಂಟ್ವಾಳದಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ ಮೆಲ್ಕಾರ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ಹಾರ್ಡ್‌ವೇರ್ ಅಂಗಡಿ ಮಾಲಕನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

      ಪಲ್ಲಮಜಲು ನಿವಾಸಿ ಅಬ್ದುಲ್ ಜಬ್ಬಾರ್ ಎಂಬವರಿಗೆ ಸೇರಿದ ಹಾರ್ಡ್‌ವೇರ್ ಅಂಗಡಿಯಲ್ಲಿ ಕೋವಿಡ್ ನಿಯಮಗಳನ್ನು ಮೀರಿ ವ್ಯಾಪಾರ ಮಾಡುತ್ತಿದ್ದರು. ಬೆಳಿಗ್ಗೆ 10.30ರ ವೇಳೆಗೆ
ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗಸ್ತಿನಲ್ಲಿದ್ದರು.  ಪಾಣೆಮಂಗಳೂರಿನ ಮೆಲ್ಕಾರ್ ಬಳಿ ಬಂದಾಗ ನ್ಯೂ ಎಮ್ ತ್ರಿ ಹಾರ್ಡ್ ವೇರ್ ಮತ್ತು ಎಲೆಕ್ಟ್ರಿಕಲ್ಸ್  ಅಂಗಡಿಯಲ್ಲಿ ಜನ ಸೇರಿಸಿಕೊಂಡು ವ್ಯಾಪಾರ ನಡೆಯುತ್ತಿತ್ತು. ಲಾಕ್ ಡೌನ್ ನಿಯಮವನ್ನು ಮೀರಿ, ಅಂಗಡಿ ಮಚ್ವದೆ, ಸಾಮಾಜಿಕ ಅಂತರವನ್ನೂ  ಕಾಪಾಡದೆ ಅಂಗಡಿ ಮಾಲೀಕರು ವ್ಯಾಪಾರವನ್ನು ಮಾಡುತ್ತಿದ್ದರು.

     ಅಂಗಡಿ ಮಾಲಿಕನ ವಿರುದ್ಧ ಸಾಮಾಜಿಕ ಅಂತರವನ್ನು ಪಾಲಿಸದೇ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡಿದಕ್ಕೆ, ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ..

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ