ಲೋಕಸಭಾ ಚುನಾವಣೆ: ಮಹಾರಾಷ್ಟ್ರದಲ್ಲಿ ಬಹುಪಕ್ಷೀಯ ಸ್ಪರ್ಧೆಯಿಂದ ಕುತೂಹಲಕಾರಿ ಫಲಿತಾಂಶದ ನಿರೀಕ್ಷೆ

ಲೋಕಸಭಾ ಚುನಾವಣೆ: ಮಹಾರಾಷ್ಟ್ರದಲ್ಲಿ ಬಹುಪಕ್ಷೀಯ ಸ್ಪರ್ಧೆಯಿಂದ ಕುತೂಹಲಕಾರಿ ಫಲಿತಾಂಶದ ನಿರೀಕ್ಷೆ

ಮುಂಬೈ: ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗುತ್ತಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಸ್ಪಷ್ಟವಾಗಿ ಸೂಚಿಸಿವೆ,ಆದರೆ ಮಹಾರಾಷ್ಟ್ರವು ಆಸಕ್ತಿದಾಯಕ ಫಲಿತಾಂಶಗಳನ್ನು ಒದಗಿಸಬಹುದು.

      ಮಹಾರಾಷ್ಟ್ರವು ಉತ್ತರ ಪ್ರದೇಶ (80)ದ ನಂತರ ಅತ್ಯಂತ ಹೆಚ್ಚಿನ (48) ಲೋಕಸಭಾ ಸ್ಥಾನಗಳನ್ನು ಹೊಂದಿದೆ ಮತ್ತು ಈ ದೊಡ್ಡ ಪಾಲು ಚುನಾವಣಾ ರಾಜಕೀಯದಲ್ಲಿ ಏರುಪೇರುಗಳನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

      ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ (ಎನ್‌ಡಿಎ),ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ (ಇಂಡಿಯಾ) ಮತ್ತು ಪ್ರತಿ ಮೈತ್ರಿಕೂಟದಲ್ಲಿ ಮೂರು ಪಕ್ಷಗಳಂತೆ ಆರು ರಾಜಕೀಯ ಪಕ್ಷಗಳು ಮತ್ತು ಅವುಗಳ ಮಿತ್ರಪಕ್ಷಗಳು ಕಣದಲ್ಲಿವೆ.

      ಮಹಾಯುತಿ ಬಿಜೆಪಿ,ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಹಾಗೂ ಮಹಾ ವಿಕಾಸ ಅಘಾಡಿ ಕಾಂಗ್ರೆಸ್,ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ ಪವಾರ್ ನೇತೃತ್ವದ ಎನ್‌ಸಿಪಿ(ಎಸ್‌ಪಿ)ಯನ್ನು ಒಳಗೊಂಡಿವೆ.

      ಕಣದಲ್ಲಿ ಸಿಂಹಪಾಲು ಸ್ಪರ್ಧೆಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯಿದ್ದರೆ,13 ಕ್ಷೇತ್ರಗಳಲ್ಲಿ ಶಿವಸೇನೆ ಮತ್ತು ಶಿವಸೇನೆ (ಯಿಬಿಟಿ),ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎನ್‌ಸಿಪಿ(ಎಸ್‌ಪಿ) ಹಾಗೂ ಐದು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಶಿವಸೇನೆ (ಯುಬಿಟಿ) ಮುಖಾಮುಖಿಯಾಗಿವೆ. ಇವುಗಳಲ್ಲಿ ಕೆಲವು ಕಡೆ ತ್ರಿಕೋನ ಸ್ಪರ್ಧೆಗಳೂ ಏರ್ಪಟ್ಟಿವೆ.

      ತಲಾ ಎರಡು ಕ್ಷೇತ್ರಗಳಲ್ಲಿ ಎನ್‌ಸಿಪಿ ಮತ್ತು ಎನ್‌ಸಿಪಿ (ಎಸ್‌ಪಿ),ಎನ್‌ಸಿಪಿ ಮತ್ತು ಶಿವಸೇನೆ (ಯುಬಿಟಿ) ಹಾಗೂ ಕಾಂಗ್ರೆಸ್ ಮತ್ತು ಶಿವಸೇನೆ ನಡುವೆ ನೇರ ಸ್ಪರ್ಧೆಯಿದ್ದರೆ,ಒಂದು ಕ್ಷೇತ್ರದಲ್ಲಿ ಶಿವಸೇನೆ (ಯುಬಿಟಿ) ಮತ್ತು ಮಹಾದೇವ ಜಂಕಾರ್ ನೇತೃತ್ವದ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ)ಗಳ ನಡುವೆ ನೇರ ಸ್ಪರ್ಧೆಯಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ