ಲಾಕ್‌ಡೌನ್, ಆರ್ಥಿಕ ಮುಗ್ಗಟ್ಟುನಿಂದ ಅಪರಾಧ ಕೃತ್ಯ ಹೆಚ್ಚಳ ಸಾಧ್ಯತೆ: ಶ್ರೀಶೈಲ ಮುರುಗೋಡು

ಲಾಕ್‌ಡೌನ್, ಆರ್ಥಿಕ ಮುಗ್ಗಟ್ಟುನಿಂದ ಅಪರಾಧ ಕೃತ್ಯ ಹೆಚ್ಚಳ ಸಾಧ್ಯತೆ: ಶ್ರೀಶೈಲ ಮುರುಗೋಡು

ಶಿರ್ವ, ಆ.14: ಕೊರೋನ ಸೋಂಕು ಉಡುಪಿ ಜಿಲ್ಲೆಯಲ್ಲಿ ಏರುಗತಿ ಯಲ್ಲಿದ್ದು, ಇದರ ನಿಯಂತ್ರಣಕ್ಕೆ ನಿಯಮಗಳ ಪಾಲನೆ ಮತ್ತು ಮಕ್ಕಳು ಹಾಗೂ ಹಿರಿಯ ನಾಗರಿಕರ ರಕ್ಷಣೆಗೆ ವಿಶೇಷ ಗಮನ ನೀಡುವುದು ಅಗತ್ಯ. ಅಪರಾಧ ಕೃತ್ಯಗಳ ಮಟ್ಟ ಹಾಕುವಲ್ಲಿ, ಕಾನೂನು ಸುವ್ಯವಸ್ಥೆಗೆ ಪೋಲಿಸ್ ಇಲಾಖೆ ಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಶಿರ್ವ ಆರಕ್ಷಕ ಠಾಣಾಧಿಕಾರಿ ಶ್ರೀಶೈಲ ಡಿ.ಮುರುಗೋಡು ಹೇಳಿದ್ದಾರೆ.

ಕೊರೋನ ಲಾಕ್‌ಡೌನ್‌ನಿಂದ ಉದ್ಯೋಗ ನಷ್ಟವಾಗಿದೆ ಮತ್ತು ತೀವ್ರ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಇದರಿಂದ ಕಳ್ಳತನ, ಡ್ರಗ್ಸ್ ಮುಂತಾದ ದಂಧೆಗಳು ಹೆಚ್ಚು ನಡೆಯುವ ಸಾಧ್ಯತೆಯಲ್ಲಿ ಪ್ರತಿಯೊಬ್ಬರೂ ಜಾಗೃತಗೊಳ್ಳ ಬೇಕಾಗಿದೆ. ಇಂತಹ ಸೂಕ್ಷ್ಮ ಸುಳಿವು ಸಿಕ್ಕಿದ್ದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕ ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸ್ ಇಲಾಖೆ ಸರ್ವಸನ್ನದ್ಧವಾಗಿದೆ ಎಂದರು

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ